Karnataka Times
Trending Stories, Viral News, Gossips & Everything in Kannada

Post Office Schemes: ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಗಳಿಸಲು ಅಂಚೆ ಕಚೇರಿಯ ಈ ಯೋಜನೆಗಳು ಎಲ್ಲವುದಕ್ಕಿಂತ ಉತ್ತಮ

advertisement

ತಿಂಗಳ ಆರಂಭದಲ್ಲಿ ಬರುವ ಸಂಬಳ ಕೊನೆಯಾಗುತ್ತಲೇ ಮುಗಿದು ಬಿಡುತ್ತದೆ. ಆದರೆ ಭವಿಷ್ಯ ಭದ್ರವಾಗಿಸುವ ಚಿಂತನೆ ನಿಮ್ಮಲ್ಲಿದ್ದರೆ ನೀವು ಖರ್ಚು ಮಾಡುವುದಕ್ಕಿಂತ ದುಪ್ಪಟ್ಟು ಪ್ರಮಾಣ ಹೂಡಿಕೆ ಮಾಡಿದರೆ ಉತ್ತಮ. ಇಂದು ಹೂಡಿಕೆ ವಿಚಾರದಲ್ಲಿ ಆದಾಯ ದ್ವಿಗುಣ ಮಾಡ್ತೇವೆ ಎಂದು ಹೇಳುವ ಅನೇಕ ಸಂಸ್ಥೆ ಮತ್ತು ಶೇರು ವ್ಯವಹಾರ ಕೂಡ ಇದ್ದು ಕೆಲ ಲಾಭ ನೀಡಿದರೆ ಕೆಲ ನಿಮಗೆ ಸಂಕಷ್ಟ ತಂದೊಡ್ಡಲಿದೆ. ಹಾಗಾಗಿ ಸುರಕ್ಷಿತ ಹೂಡಿಕೆ ಬಹಳ ಮುಖ್ಯ.

ದೇಶದಲ್ಲಿ ಸುರಕ್ಷಿತ ಹೂಡಿಕೆ ಮಾಡುವ ಅನೇಕ ಕ್ಷೇತ್ರದ ಸಾಲಿನಲ್ಲಿ ಅಂಚೆ ಕಚೇರಿ (Post Office) ಮುಂಚುಣಿಯಲ್ಲಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಗೂ ಸಹ ಕೊಡುಗೆ ನೀಡುತ್ತಿದ್ದು ನಿಮ್ಮ ಹಣ ಭದ್ರವಾಗಿರಿಸುವ ನೆಲೆಯಲ್ಲಿ ಈ ವ್ಯವಸ್ಥೆ ಬಹಳ ಸಮಂಜಸವಾಗಿದೆ. ಅಂಚೆ ಕಚೇರಿಯಲ್ಲಿ ವಿವಿಧ ವಿಧವಾದ ಸುರಕ್ಷಿತ ಹೂಡಿಕೆಯ ಆಯ್ಕೆಗಳಿದ್ದರೂ ಅದು ಸಾಮಾನ್ಯ ಜನರಿಗೆ ಮಾತ್ರ ಅಷ್ಟಾಗಿ ತಿಳಿದುಬಂದಿಲ್ಲ ಹಾಗಾಗಿ ಈ ಲೇಖನದ ಮೂಲಕ ಅಂಚೆ ಕಚೇರಿಯಲ್ಲಿ ಲಭ್ಯ ಇರುವ ವಿವಿಧ ಹೂಡಿಕೆ ಯೋಜನೆ (Post Office Schemes) ಬಗ್ಗೆ ನಾವಿಂದು ತಿಳಿಸಲಿದ್ದೇವೆ.

 

ಈ ಯೋಜನೆ ಯಾವುದು:

PPF Scheme: ಇದರಲ್ಲಿ ಅನೇಕ ವಿಧವಾದ ಆದಾಯ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದ್ದು ದೀರ್ಘಾವಧಿ ಹೂಡಿಕೆ ಮಾಡಬಹುದು. 7.1% ಬಡ್ಡಿಯನ್ನು ಹೂಡಿಕೆ ಮೊತ್ತದ ಮೇಲೆ ತೆರಿಗೆ ರಹಿತ ಪಡೆಯಲಿದ್ದೀರಿ.

advertisement

NSE Scheme: NSE ಎಂದರೆ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ ಎಂದು ಹೆಸರು. ಇದು ಐದು ವರ್ಷದ ಅವಧಿಯ ಹೂಡಿಕೆಯಾಗಿದ್ದು ನಿಮಗೆ ವರ್ಷಕ್ಕೆ 7.7%ಹೂಡಿಕೆ ಮೊತ್ತಕ್ಕೆ ಬಡ್ಡಿದರ ಸಿಗಲಿದೆ.

RD Scheme: ಸಣ್ಣ ಮೊತ್ತದ ಹೂಡಿಕೆ ಮಾಡುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ. ವರ್ಷಕ್ಕೆ 6.5% ಬಡ್ಡಿದರ ಪಡೆಯಲಿದ್ದೀರಿ ಎನ್ನಬಹುದು.

Kisan Vikas Scheme: ಈ ಒಂದು ಯೋಜನೆ ರೈತರಿಗಾಗಿ ಇರುವಂತದ್ದಾಗಿದೆ. 123ತಿಂಗಳ ಹೂಡಿಕೆ ಮಾಡಿದರೆ 7% ವಾರ್ಷಿಕ ಬಡ್ಡಿದರ ಇದರಲ್ಲಿ ಸಿಗಲಿದೆ

Monthly Income Scheme: ಮಾಸಿಕ ಆದಾಯದ ಯೋಜನೆ ಅಡಿಯಲ್ಲಿ 7.40% ಬಡ್ಡಿದರ ನಿಮಗೆ ಸಿಗಲಿದೆ. ಇದು ಸ್ಥಿರ ಆದಾಯದೊಂದಿಗೆ ಲಾಭ ಸಿಗಲಿದೆ.

Post Office Savings Scheme: ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಅಡಿಯಲ್ಲಿ 7.40% ಬಡ್ಡಿದರ ಸಿಗಲಿದೆ. 5ವರ್ಷಕ್ಕೆ ಉತ್ತಮ ಲಾಭ ಸಿಗಲಿದೆ.

SCSS ಯೋಜನೆ ಇದನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಂದು ಕರೆಯಲಾಗುವುದು. ನಿಮಗೆ ಮೂರು ತಿಂಗಳಿನಂತೆ ಬಡ್ಡಿ ಮೊತ್ತ ಸಿಗಲಿದೆ. ನಿವೃತ್ತಿ ಹೂಡಿಕೆಗೆ ಉತ್ತನ ಆಯ್ಕೆಯಾದ ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ 8.2% ಬಡ್ಡಿದರ ನೀಡಲಾಗುವುದು.

advertisement

Leave A Reply

Your email address will not be published.