Karnataka Times
Trending Stories, Viral News, Gossips & Everything in Kannada

Jio: 100 ರೂ. ಒಳಗೆ ಮೊಬೈಲ್ ರಿಚಾರ್ಜ್ ಪ್ಲ್ಯಾನ್, ಇಲ್ಲಿದೆ ಜಿಯೋ ಕಂಪೆನಿಯ ಬೆಸ್ಟ್ ಆಫರ್

advertisement

ಹಿಂದೆಲ್ಲ ಯಾರಿಗಾದರೂ ಫೋನ್ ಮಾಡಲು ಮಾತ್ರ ಕರೆನ್ಸಿ ಹಾಕುವ ಕಾಲ ಇತ್ತು ಆದರೆ ಈಗ ಕಾಲ ಬದಲಾಗಿದೆ. ಕರೆ ಮಾಡಬೇಕಾದರೂ ಕರೆ ಬರಬೇಕಾದರೂ ಎರಡಕ್ಕೂ ಕೂಡ ಕರೆನ್ಸಿ ಹಾಕಲೇ ಬೇಕು. ಅದೇ ರೀತಿ ಹಿಂದೆ ಕರೆನ್ಸಿ ಕಾರ್ಡ್ (Currency Card) ಮತ್ತು ಕಡಿಮೆ ಬೆಲೆಯ ಟಾಕ್ ಟೈಂ ಆಫರ್ ಇತ್ತು ಆದರೆ ಈಗ ಬಹುತೇಕ ಎಲ್ಲ ಕಂಪನಿಯ ಸಿಮ್ ಗಳ ತಿಂಗಳ ರೀಚಾರ್ಜ್ ದರ (Montly Recharge Rate) ದುಬಾರಿಯಾಗಿದೆ. ಈ‌ ನಿಟ್ಟಿನಲ್ಲಿ ಜಿಯೋ (Jio) ಕಂಪೆನಿಯ ಅತೀ ಕಡಿಮೆ ಕರೆನ್ಸಿ ಮೌಲ್ಯ ಅನೇಕರಿಗೆ ಉಪಯುಕ್ತವಾಗಿದ್ದು ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜಿಯೋ (Jio) ಕಂಪೆನಿಯೂ ಆರಂಭ ಆಗುವಾಗ ಡೆಟಾ ಸೌಲಭ್ಯವನ್ನು ಉಚಿತವಾಗಿ ನೀಡಿ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆದಿತ್ತು. ಅದಾದ ಬಳಿಕ ಜಿಯೋ ಕಂಪೆನಿ ಕೂಡ ವಿವಿಧ ರಿಚಾರ್ಜ್ ಸೌಲಭ್ಯ ಪರಿಚಯಿಸಿದ್ದು ಇದೀಗ ನೂರು ರೂಪಾಯಿಗಿಂತ ಕಡಿಮೆ ಬೆಲೆಯ ರಿಚಾರ್ಜ್ ಸೌಲಭ್ಯವೊಂದು ಜನರಿಗೆ ತುಂಬಾ ಕನೆಕ್ಟ್ ಆಗುತ್ತಿದೆ. ಜಿಯೋ ಕಂಪೆನಿಯ ಅಗ್ಗದ ದರ ಎಂದು ಕರೆಯಲ್ಪಡುವ ಈ ಪ್ಲ್ಯಾನ್ ನಲ್ಲಿ ನೀವು 75 ರೂಪಾಯಿ ರೀಚಾರ್ಜ್ (Rs75 Recharge Plan) ಮಾಡಬಹುದು.

 

advertisement

ಪ್ಲ್ಯಾನ್ ವಿಶೇಷತೆ ಏನಿರಲಿದೆ?

  • 75 ರೂಪಾಯ ಈ ಪ್ಲ್ಯಾನ್ ನ ಬೆಲೆ ಕಡಿಮೆ ಇದ್ದರೂ ಇದು Unlimited Call ಸೌಲಭ್ಯವನ್ನೇ ನೀಡಲಿದೆ. Jio ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ‌.
  • 23 ದಿನದ ಮಾನ್ಯತೆ ಸೌಲಭ್ಯ ಸಿಗಲಿದೆ.
  • 2.5 GB ಡೇಟಾ ಸಿಗಲಿದೆ. (0.1MB ಪ್ರತೀ ದಿನ ಡೇಟಾ ಸೌಲಭ್ಯ) ಲಭ್ಯ ಇರಲಿದೆ.
  • 200MB ಹೆಚ್ಚುವರಿ ಡೇಟಾ ಲಭ್ಯ ಇರಲಿದೆ.
  • 50 Free SMS ಲಭ್ಯವಿದೆ.
  • ಈ ಪ್ಲ್ಯಾನ್ ಅಡಿಯಲ್ಲಿ Jio TV, ಸಿನೆಮಾ ನೋಡಬಹುದು.

Rs91 Recharge Plan:

  • 91 ರೂಪಾಯಿ ರೀಚಾರ್ಜ್ ಮಾಡಿದರೆ 29 ದಿನಗಳ ಮಾನ್ಯತೆ ಇರಲಿದೆ, ಜಿಯೋ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ‌.
  • ಇದು Unlimited Plan ನ ಸೌಲಭ್ಯವನ್ನೇ ನೀಡಲಿದೆ.
  • 50 Free SMS ಲಭ್ಯವಿದೆ.
  • 3GB Data ಸಿಗಲಿದೆ. (0.1MB ಪ್ರತೀ ದಿನ ಡೇಟಾ ಸೌಲಭ್ಯ) ಲಭ್ಯ ಇರಲಿದೆ. 200MB ಹೆಚ್ಚುವರಿ ಡೇಟಾ ಲಭ್ಯ ಇರಲಿದೆ, ಪ್ಲ್ಯಾನ್ ಅಡಿಯಲ್ಲಿ Jio TV, ಸಿನೆಮಾ ನೋಡಬಹುದು.

ಒಟ್ಟಾರೆಯಾಗಿ ಕಡಿಮೆ ಬಜೆಟ್ ನ ರಿಚಾರ್ಜ್ ಪ್ಲ್ಯಾನ್ (Recharge Plan) ಹುಡುಕುವವರಿಗೆ ಇದೊಂದು ಅತ್ಯುತ್ತಮ ಅವಕಾಶ ವಾಗಿದೆ. ಅದೇ ರೀತಿ ಡೇಟಾ ಬಳಸದೇ ಇರುವವರಿಗೆ ಮತ್ತು ಡೇಟಾಗಾಗಿ ಪ್ರತ್ಯೇಕ ರೀಚಾರ್ಜ್ ಹಾಕಿಸಿಕೊಳ್ಳೋರಿಗೆ ಈ ಒಂದು ಕಡಿಮೆ ಬಜೆಟ್ ನ ಅನ್ಲಿಮಿಟೆಡ್ ಸೌಲಭ್ಯ ಸಾಕಷ್ಟು ಸಹಕಾರಿ ಆಗುತ್ತಿದೆ ಎಂದರೂ ತಪ್ಪಾಗದು.

advertisement

Leave A Reply

Your email address will not be published.