Karnataka Times
Trending Stories, Viral News, Gossips & Everything in Kannada

Ration Card: ಇನ್ಮುಂದೆ ಇಂಥವರ ರೇಷನ್ ಕಾರ್ಡ್ ಚಾಲ್ತಿಯಲ್ಲಿರುವುದಿಲ್ಲ, ಸರ್ಕಾರದ ಹೊಸ ಆದೇಶ.

advertisement

ರೇಷನ್ ಕಾರ್ಡ್ (Ration Card) ಪ್ರಮುಖ ಗುರುತಿನ ಚೀಟಿ (Identity Card) ಆಗಿರುವ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಸರ್ಕಾರ ಈಗಾಗಲೇ ಅವಕಾಶವನ್ನು ಕೂಡ ನೀಡಿತ್ತು. ಅಷ್ಟೇ ಅಲ್ಲದೆ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಹಣ ಪಡೆದುಕೊಳ್ಳುವುದಕ್ಕೆ ಅಥವಾ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ. ತಿದ್ದುಪಡಿಯ ಸಮಯದಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ಸಾಕಷ್ಟು ರೇಷನ್ ಕಾರ್ಡ್ ತಿದ್ದುಪಡಿ ಆಗಿಲ್ಲ ಎನ್ನುವ ಮಾಹಿತಿ ಇದೆ.

ಇನ್ನು Ration Card ವಿತರಣೆ ಯಾವಾಗ:

ಸರ್ಕಾರಕ್ಕೆ ಕಳೆದ ಎರಡುವರೆ ವರ್ಷಗಳಿಂದ 2.96 ಲಕ್ಷದಷ್ಟು ಪಡಿತರ ಚೀಟಿಗಾಗಿ (Ration Card) ಅರ್ಜಿ ಸಂದಾಯವಾಗಿದೆ ಆದರೆ ಎಲೆಕ್ಷನ್ (Election) ಹಾಗೂ ಅದು ಇದು ಕಾರಣಗಳನ್ನು ಕೊಡುತ್ತಾ ಸರ್ಕಾರ ಪಡಿತರ ಚೀಟಿ ವಿತರಣೆ ಮಾಡುವ ಕೆಲಸವನ್ನು ಮುಂದೂಡುತ್ತಲೇ ಬಂದಿದೆ. ಈಗ ಎಚ್ಚೆತ್ತುಕೊಂಡಿರುವ ಸರ್ಕಾರ ಅಗತ್ಯ ಇರುವ ಫಲಾನುಭವಿ ಕುಟುಂಬಗಳಿಗೆ ಪಡಿತರ ಚೀಟಿ ನೀಡಲು ಮುಂದಾಗಿದೆ ಹಾಗಾಗಿ ಈವರೆಗೆ ಯಾರು ಹೊಸದಾಗಿ ಪಡಿತರ ಚೀಟಿ (Ration Card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೋ ಅಂತವರಿಗೆ ಪಡಿತರ ನೀಡಬೇಕು ಎಂದು ನವೆಂಬರ್ 29ಕ್ಕೆ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳು ಮುಗಿಯುವಷ್ಟರಲ್ಲಿ ಹೊಸ ಪಡಿತರ ವಿತರಣೆ ಆರಂಭವಾಗುವ ನೀರಿಕ್ಷೆ ಇದೆ.

ಇನ್ನು ಹೊಸ ಪಡಿತರ ಅರ್ಜಿ ಸಲ್ಲಿಸಿದ ಹಳೆಯ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲಾಗುವುದೇ ಹೊರತು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸಧ್ಯಕ್ಕೆ ಅವಕಾಶವಿಲ್ಲ. ಹಳೆಯ ಪಡಿತರ ಚೀಟಿ ವಿತರಣೆ ಮಾಡಿದ ನಂತರ ಹೊಸ ಅರ್ಜಿ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.

 

advertisement

ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇದ್ರೆ ಕಾರ್ಡ್ ರದ್ದಾಗುತ್ತಾ?

ಹೌದು, ಸರ್ಕಾರ ಈ ಹಿಂದೆ ಇದನ್ನೇ ಹೇಳಿದ್ದು. ಯಾರು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನ ತೆಗೆದುಕೊಂಡಿಲ್ಲವೋ ಅಂತವರ ಪಡಿತರ ಕಾರ್ಡ್ (Ration Card) ರದ್ದುಪಡಿಸುವುದಾಗಿ ತಿಳಿಸಿತ್ತು. ಆದರೆ ಈಗ ಈ ನಿಯಮದಲ್ಲಿ ತುಸು ಬದಲಾವಣೆ ಮಾಡಲಾಗಿದ್ದು ನೇರವಾಗಿ ಪಡಿತರ ಚೀಟಿಯನ್ನು ರದ್ದು ಪಡಿಸುವುದಿಲ್ಲ ಬದಲಾಗಿ ಅಮಾನತುಗೊಳಿಸುತ್ತದೆ. ಅಂದರೆ ಪಡಿತರ ಚೀಟಿ ಚಾಲ್ತಿಯಲ್ಲಿ ಇರುವುದಿಲ್ಲ ಆದರೆ ನಿಮ್ಮ ಹೆಸರಿನಲ್ಲಿ ಪಡಿತರ ಚೀಟಿ ಇರುತ್ತದೆ. ಒಂದು ವೇಳೆ ನೀವು ಸರಿಯಾದ ಕಾರಣ ಕೊಟ್ಟು ಕಳೆದ ಆರು ಆರು ತಿಂಗಳಿನಿಂದ ಯಾಕೆ ಪಡಿತರ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ತಿಳಿಸಿದರೆ ನಿಮಗೆ ಮತ್ತೆ ಪಡಿತರ ಚೀಟಿ ನೀಡಲಾಗುತ್ತದೆ.

ಪರಿಶೀಲನೆ ಮಾಡಿ ಅಮಾನತ್ತು:

ಒಬ್ಬರೇ ಸದಸ್ಯರಿರುವ ಪಡಿತರ ಚೀಟಿಯನ್ನು ಹೊರತುಪಡಿಸಿ ಬೇರೆ ಪಡಿತರ ಚೀಟಿ ಹೊಂದಿರುವ ಕುಟುಂಬದವರು ಕಳೆದ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇದ್ದರೆ ಅಂತವರನ್ನು ಗುರುತಿಸಿ ಅವರ ಮನೆಗೆ ಹೋಗಿ ಪರಿಶೀಲನೆ ನಡೆಸಿ ಯಾಕೆ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಬಳಿಕ ಅಮಾನತ್ತಿನಲ್ಲಿ ಇಡಲಾಗುತ್ತದೆ.

ಮತ್ತೆ Ration Card Active ಮಾಡುವುದು ಹೇಗೆ?

ನೀವು ಕಳೆದ ಆರು ತಿಂಗಳಿನಿಂದ ರೇಷನ್ ಅನ್ನು ಪಡೆಯದೆ ಇದ್ದು, ನಿಮ್ಮ ರೇಷನ್ ಕಾರ್ಡ್ ಅಮಾನತ್ತುಗೊಳಿಸಲು ಆಹಾರ ಇಲಾಖೆ ಸಿಬ್ಬಂದಿ ಸರ್ವೆಗೆ ಬಂದಾಗ ಅವರಿಗೆ ಸಕಾರಣ ನೀಡಿ ಪಡಿತರ ಚೀಟಿ ಅಮಾನತ್ತು ಗೊಳಿಸಿದಂತೆ ಕೇಳಿಕೊಳ್ಳಬಹುದು ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ಮೂಲಕ ಆಹಾರ ಧಾನ್ಯಗಳನ್ನು ಮತ್ತೆ ಪಡೆಯಲು ಆರಂಭಿಸಬಹುದು. ಈ ರೀತಿ ಮಾಡಿದ್ರೆ ನಿಮ್ಮ ಅಮಾನತ್ತುಗೊಂಡಿರುವ ಪಡಿತರ ಚೀಟಿ ಪುನಃ ಆಕ್ಟಿವೇಟ್ ಆಗುತ್ತದೆ.

advertisement

Leave A Reply

Your email address will not be published.