Karnataka Times
Trending Stories, Viral News, Gossips & Everything in Kannada

Airtel Recharge: ಗ್ರಾಹಕರನ್ನು ಆಕರ್ಷಿಸಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಿಸಿದ ಏರ್ಟೆಲ್ ಕಂಪನಿ

advertisement

ದೇಶದ ಟೆಲಿಕಾಂ ವಲಯದಲ್ಲಿ ಭಾರ್ತಿ ಏರ್‌ಟೆಲ್‌ (Bharti Airtel) ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈಗ ಏರ್‌ಟೆಲ್‌ (Airtel) ಸಂಸ್ಥೆಯು ತನ್ನ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಅಧಿಕ ಡೇಟಾ  ಹೊಂದಿರುವ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಹಾಗೆಯೇ ಹೆಚ್ಚಿನ ಡೇಟಾ ಅಗತ್ಯ ಇರದ ಚಂದಾದಾರರಿಗಾಗಿ ಎಂದೇ ಕನಿಷ್ಠ ರೀಚಾರ್ಜ್‌ಯೋಜನೆಗಳ ಆಯ್ಕೆಯನ್ನು ಸಹ ನೀಡಿದೆ.

ಹೌದು, ಭಾರ್ತಿ ಏರ್‌ಟೆಲ್‌ ಟೆಲಿಕಾಂ (Bharti Airtel Telecom) ಅಗ್ಗದ ಪ್ರೀಪೇಯ್ಡ್‌ ಯೋಜನೆಗಳ ಲಿಸ್ಟ್‌ ಕೂಡಾ ಹೊಂದಿದೆ. ಅವುಗಳಲ್ಲಿ ಮೊದಲನೆಯದಾಗಿ ಎಂಟ್ರಿ ಲೆವೆಲ್ ಅಲ್ಲಿ ಕಾಣಿಸಿಕೊಂಡಿರುವ ಪ್ಲ್ಯಾನ್‌ ಅಂದ್ರೆ, ಅದು 155 ರೂಪಾಯಿ ರೀಚಾರ್ಜ್‌ ಪ್ಲಾನ್.

ಈ ಯೋಜನೆಯು ಸಿಮ್ ಚಾಲ್ತಿ ಇಡಲು ಪೂರಕ ಯೋಜನೆ ಎನಿಸಿದ್ದು, ವಾಯಿಸ್‌ ಕರೆ (Voice Call) ಹೆಚ್ಚಾಗಿ ಬಳಕೆ ಮಾಡುವ ಗ್ರಾಹಕರಿಗೂ ಅತ್ಯುತ್ತಮ ಯೋಜನೆ ಅನ್ನಿಸಿಕೊಂಡಿದೆ, ಸಂಸ್ಥೆಯ ಕಡಿಮೆ ಬೆಲೆಯಲ್ಲಿ ವಾಯಿಸ್‌ ಕರೆ, SMS ಹಾಗೂ ನಿಗದಿತ ಡೇಟಾ ಪ್ರಯೋಜನ ಕೂಡಾ ಗ್ರಾಹಕರಿಗೆ ನೀಡುತ್ತಿದೆ. ಇದರೊಂದಿಗೆ Airtel ಇತರೆ ಪ್ರೈಸ್‌ ಟ್ಯಾಗ್‌ ದರದಲ್ಲಿ ಕೆಲವು ಅತ್ಯುತ್ತಮ Prepaid Plan ಗಳ ಆಯ್ಕೆ ಅನ್ನು ಗ್ರಾಹಕರಿಗೆ ಲಭ್ಯವಿರುವಂತೆ ನೋಡಿಕೊಂಡಿದೆ. ಹಾಗಾದರೇ ಏರ್‌ಟೆಲ್‌ನ 155 ರೂಪಾಯಿ ಪ್ಲ್ಯಾನ್‌ ಹಾಗೂ ಇತರೆ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

 

Bharti Airtel Rs 155 Recharge Plan:

ಭಾರ್ತಿ ಏರ್‌ಟೆಲ್‌ ಟೆಲಿಕಾಂ (Bharti Airtel Telecom) ನ 155ರೂಪಾಯಿ ರೀಚಾರ್ಜ್‌ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿ ಯಲ್ಲಿ ಒಟ್ಟು 1 GB ಡೇಟಾ ಬಳಸಲು ಲಭ್ಯವಾಗಲಿದೆ. ಹಾಗೆಯೇ ಒಟ್ಟು 300 Free SMS ಸೌಲಭ್ಯ ಸಹ ಒಳಗೊಂಡಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಲಭ್ಯವಾಗಿರುತ್ತದೆ. ಇದಲ್ಲದೇ ಏರ್‌ಟೆಲ್‌ ಆಪ್ಸ್‌ಗಳು (Airtel Apps) ಸಹ ಉಚಿತವಾಗಿ ಸಿಗಲಿದೆ.

advertisement

Bharti Airtel Rs 666 Recharge Plan:

ಭಾರ್ತಿ ಏರ್‌ಟೆಲ್‌ ಸಂಸ್ಥೆಯ ಮತ್ತೊಂದು ಯೋಜನೆ ಎಂದರೆ 666 ರೂಪಾಯಿ ರೀಚಾರ್ಜ್‌ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5 GB Data ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 100 Free SMS ಸೌಲಭ್ಯ ಸಹ ಒಳಗೊಂಡಿದ್ದು, ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ.

Bharti Airtel Rs 699 Recharge Plan:

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 699 ರೂಪಾಯಿ ರೀಚಾರ್ಜ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು ಈ ವೇಳೆ ಪ್ರತಿದಿನ 3 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಅನಿಯಮಿತ ವಾಯಿಸ್‌ ಕರೆಗಳ (Unlimited Voice Call) ಸೌಲಭ್ಯ ಸಿಗಲಿದೆ. ಹಾಗೆಯೇ ಗ್ರಾಹಕರು ಪ್ರತಿದಿನ 100 SMS ಪ್ರಯೋಜನ ಪಡೆಯಬಹುದಾಗಿದೆ.

Bharti Airtel Rs 719Recharge Plan:

ಭಾರ್ತಿ ಏರ್‌ಟೆಲ್‌ ಟೆಲಿಕಾಂನ 719 ರೂಪಾಯಿ ರೀಚಾರ್ಜ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಪ್ರತಿದಿನ 100 Free SMS ಸೌಲಭ್ಯ ಸಹ ಪಡೆದಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಕೂಡ ನೀಡಿದ್ದಾರೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯವಿರುತ್ತದೆ.

Bharti Airtel Rs 779 Recharge Plan:

ಭಾರ್ತಿ ಏರ್‌ಟೆಲ್‌ ಸಂಸ್ಥೆಯ 779 ರೂಪಾಯಿ ರೀಚಾರ್ಜ್‌ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಒಳಗೊಂಡಿದೆ. ಈ ವೇಳೆ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಪ್ರತಿದಿನ 100 Free SMS ಸೌಲಭ್ಯ ದೊರೆಯಲಿದ್ದು, ಇದರೊಂದಿಗೆ Airtel ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ಧ್ವನಿ ಕರೆಗಳ ಸೌಲಭ್ಯ ಉಚಿತವಾಗಿ ದೊರೆಯುತ್ತದೆ.

advertisement

Leave A Reply

Your email address will not be published.