Karnataka Times
Trending Stories, Viral News, Gossips & Everything in Kannada

Aadhaar Card: ನಿಮ್ಮ ಆಧಾರ್‌ ಕಾ‌ರ್ಡ್‌ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನ ನಿಮಗಿದ್ದರೆ ಈ ರೀತಿ ಚೆಕ್ ಮಾಡಿ.

advertisement

ದೇಶದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್‌ (Aadhaar Card) ಪ್ರಮುಖ ಗುರುತಿಸಿನ ಪುರಾವೆ ಆಗಿದೆ. ಸರ್ಕಾರದ ಸೌಲಭ್ಯ, ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಆಗಿದೆ. ಅಲ್ಲದೇ ಹಲವು ಇತರೆ ಸಂದರ್ಭಗಳಲ್ಲಿ ಆಧಾರ್ ಸಂಖ್ಯೆ (Aadhaar Number) ಯನ್ನು ನೀಡಬೇಕಾಗಿರುತ್ತದೆ. ಹೀಗೆ ಆಧಾರ್ ಸಂಖ್ಯೆ ನೀಡಿದಾಗ ಆಧಾರ್ ಸಂಖ್ಯೆ ದುರುಪಯೋಗ ಆಗುವ ಆತಂಕ ಬಳಕೆದಾರರಲ್ಲಿ ಮೂಡಿರದೇ ಇರದು.

ಹೌದು ಕಳೆದ ಕೆಲವು ತಿಂಗಳುಗಳಿಂದ ಸೈಬರ್ ವಂಚಕರು (Cyber Fraudsters) ಅದೇ ಆಧಾರ್ ಕಾರ್ಡ್ ಬಳಸಿ ಕೋಟಿ ಕೋಟಿ ರೂಪಾಯಿಗಳನ್ನು ದೋಚುತ್ತಿದ್ದಾರೆ. ಇಷ್ಟೇ ಅಲ್ಲ ಕೆಲ ದಿನಗಳ ಹಿಂದಷ್ಟೇ ಹೊಸ ಸಿಮ್ ಕಾರ್ಡ್ (New SIM Card) ಸಕ್ರಿಯಗೊಳಿಸಲು ಇತರರ ಆಧಾರ್ ಕಾರ್ಡ್ ಅನ್ನು ಬಳಸುವ ಒಂದು ಗ್ಯಾಂಗ್ ಕೂಡ ಸಿಕ್ಕಿಬಿದ್ದಿತ್ತು.

ಒಂದೇ ಫೋಟೋ ಐಡಿ ಬಳಸಿ 658 ಸಿಮ್ ಕಾರ್ಡ್ (SIM Card) ನೀಡಲಾಗುವುದು ಎಂಬ ಜಾಹೀರತು ಕೂಡ ಕೇಳಿ ಬಂದಿತ್ತು. ಇಷ್ಟೆಲ್ಲಾ ಆದಮೇಲೆ ಜನ ತಮ್ಮ ಆಧಾರ ಕಾರ್ಡ್ ಸುರಕ್ಷಿತವಾಗಿದೆಯೇ ಎಂಬುದರ ಕುರಿತು ಎಚ್ಚರಿಕೆ ಹೆಜ್ಜೆ ಹಾಕಿದ್ದಾರೆ.

 

 

advertisement

ನಮ್ಮ ಆಧಾರ ಕಾರ್ಡ್ ನಮ್ಮ ಬಳಕೆಗೆ ಮಾತ್ರವೇ ಇರಬೇಕು. ಅದೊಂದು ಪ್ರಮುಖ ಗುರುತಾಗಿದ್ದು ಅದನ್ನು ಕಂಡ ಕಂಡಲ್ಲಿ ಹಂಚಿಕೊಳ್ಳಬಾರದು ಎಂಬ ಸಾಮಾನ್ಯ ಜ್ಞಾನ ಸುಮಾರು ಜನರಲ್ಲೀಗ ಬಂದಿದೆ. ಆದರೆ ತೆರೆ ಮರೆಯಲ್ಲಿ ಅಡಗಿ ಕೆಲವು ವಂಚಕರು ಇತರರ ಆಧಾರ್ ಕಾರ್ಡ್ (Aadhaar Card) ಬಳಸಿ ಹಣ ವರ್ಗಾವಣೆ ಮಾಡುತ್ತಾರೆ. ದೇಶ ವಿರೋಧಿ ಕೃತ್ಯಗಳನ್ನು ಸಹ ನಡೆಸುತ್ತಾರೆ.

ಹಾಗಿದ್ದರೆ ನಮ್ಮ ಆಧಾರ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಎಂದು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿದೆ.

UIDAI ಅಧಿಕೃತ ವೆಬ್ ಸೈಟ್ ನಲ್ಲಿ ಆಧಾರ್ ಅಥೆಂಟಿಕೇಷನ್ ಹಿಸ್ಟರಿ ಎಂಬ ಟೂಲ್ (To0l) ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ (Aadhaar Card) ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ಪತ್ತೆ ಮಾಡಬಹುದು .

ಹಂತ 1: ಯುಐಡಿಎಐ ಅಧಿಕೃತ ವೆಬ್ ಸೈಟ್ uidai.gov.in.ಭೇಟಿ ನೀಡಿ.
ಹಂತ 2: ‘My Aadhaar’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ವೆಬ್ ಸೈಟ್ ತೆರೆದುಕೊಂಡ ತಕ್ಷಣ ಎಡ ಬದಿಯಲ್ಲಿ ಮೇಲ್ಭಾಗದಲ್ಲಿದೆ. ಈ ಆಯ್ಕೆ ಕ್ಲಿಕ್ ಮಾಡಿದ ತಕ್ಷಣ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
ಹಂತ 3: ಆಧಾರ್ ಸೇವಾ ವಿಭಾಗದಲ್ಲಿ ಈಗ  ‘Aadhaar Authentication History’ ಭೇಟಿ ನೀಡಿ. ಈಗ ಹೊಸ ವೆಬ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ನಿಮ್ಮ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ಬಳಸಿಕೊಂಡು ಲಾಗಿನ್ ಆಗಿ. ಆ ಬಳಿಕ send OTP ಮೇಲೆ ಕ್ಲಿಕ್ ಮಾಡಿ.
ಹಂತ 5: ಪರಿಶೀಲನೆಗೆ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. ಆ ಬಳಿಕ  ‘Proceed’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ಆಧಾರ್ ಕಾರ್ಡ್ ಎಲ್ಲ ಮಾಹಿತಿಗಳು ಹಾಗೂ ಈ ಹಿಂದಿನ ದೃಢೀಕರಣ ಮನವಿಗಳು ಪರದೆ ಮೇಲೆ ಕಾಣಿಸುತ್ತವೆ.

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಬೇರೆ ಯಾರಾದರೂ ಬಳಸಿದ್ದರೆ ನೀವು ಆ ಬಗ್ಗೆ ಯುಐಡಿಎಐಗೆ ಮಾಹಿತಿ ನೀಡಬಹುದು. UIDAI Toll Free Number 1947 ಅಥವಾ  [email protected] ಮೂಲಕ ಯುಎಐಡಿಎ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

advertisement

Leave A Reply

Your email address will not be published.