Karnataka Times
Trending Stories, Viral News, Gossips & Everything in Kannada

Meditation Device: ನಿಮ್ಮ ಬಳಿ ಧ್ಯಾನ ಮಾಡಿಸುವುದಕ್ಕೂ ಬಂತು ವಿಶೇಷವಾದ ಡಿವೈಸ್, ಏನೆಲ್ಲಾ ವಿಶೇಷತೆ ಇದೆ ಗೊತ್ತಾ?

advertisement

ಧ್ಯಾನದ ಬಗ್ಗೆ ಕೆಲವರು ನಕಾರಾತ್ಮಕ ಅಥವಾ ತಪ್ಪಾದ ಅಭಿಪ್ರಾಯವನ್ನು ಹೊಂದಿದ್ದರು ಕೂಡ ಒತ್ತಡ, ಆತಂಕ, ಖಿನ್ನತೆ, ಉದಾಸೀನತೆ ಹಾಗೆಯೇ ನಿರಂತರ ಮನಸ್ಸಿನಲ್ಲಿ ಏಳುವ ನಕಾರಾತ್ಮಕ ಚಿಂತನೆಗಳ ವಿರುದ್ಧ ಹೋರಾಡಲು ಧ್ಯಾನ ಒಂದು ಉತ್ತಮ ಸಾಧನವಾಗಿದೆ. ಜ್ಞಾನವು ನಮಗೆ ಒಳ್ಳೆಯ ಆರೋಗ್ಯವನ್ನು ನೀಡುವುದು ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸುತ್ತದೆ.

ಹಾಗಾಗಿ ಧ್ಯಾನವನ್ನು ಮಾಡುತ್ತಿರುವ ವ್ಯಕ್ತಿ ವೃತ್ತಿಪರತೆ ಮೇಲೆಯೂ ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಧ್ಯಾನಕ್ಕೆ ಸಂಬಂಧಿಸಿದಂತೆ ವ್ಯಾಪಾರಗಳೂ ಬೆಳೇಯುತ್ತಿವೆ ಅಂದ್ರೆ ನೀವು ನಂಬಲೇಬೇಕು. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಧ್ಯಾನ ಸಾಧನ (Meditation Device), ಕಿಟ್  ಮೂಲಕ ಡಿಜಿಟಲ್ ಸ್ವರೂಪದಲ್ಲಿ ಆವಿಷ್ಕಾರಗೊಳಿಸಿ ಸ್ಮಾರ್ಟ್ ಫೋನ್ ಗಳ ಮೂಲಕ ವಿತರಿಸಲಾಗುತ್ತದೆ. ಈ ಡಿಜಿಟಲ್ ಬಿಟ್ ಗಳ ಮೂಲಕ ಬರುವಂತಹ ಧ್ಯಾನ ವಿಧದ ಪದ್ಧತಿಗಳಿಂದ ಹೊರಹೊಮ್ಮುವ ಸ್ವರಗಳು ಕೆಲವು ಸಲ ಮಿತಿಮೀರಿದಂತೆ ಕಾಣುತ್ತದೆ ಆದರೆ ಇದನ್ನು ಸ್ವಲ್ಪ ಅಭ್ಯಾಸ ಮಾಡಿಕೊಂಡರೆ ನೀವು ಧ್ಯಾನ ಸ್ಥಿತಿಯನ್ನು ತಲುಪಲು ಹೆಚ್ಚು ಉಪಯುಕ್ತವಾಗುತ್ತದೆ.

Head Space and Calm Device:

Head Space and Calm ನಂತಹ ಧ್ಯಾನ ಸೇವೆಗಳು ಸ್ಮಾರ್ಟ್ ಫೋನ್ ಗಳ ಮೂಲಕ ತಮ್ಮ ವಿಷಯಗಳನ್ನು ನೀಡುವ ಮೂಲಕ ಹೆಚ್ಚಿನ ಚೆಂದದಾರರನ್ನು ತಲುಪಲು ಸಾಧ್ಯವಾಗಿದೆ ಇದು ಅತ್ಯಂತ ಅನುಕೂಲ ಕರ ಕಾರ್ಯತಂತ್ರವಾಗಿದ್ದು ಅದು ಯಾವುದೇ ಸಮಯದಲ್ಲಿ ನಿಮ್ಮನ್ನು ಶಾಂತತೆಯ ಸ್ಥಿತಿಗೆ ಒಯ್ಯಲು ಸಹಕಾರಿಯಾಗುತ್ತದೆ. ಇದರಲ್ಲಿ ಒಂದಿರುವ ನ್ಯೂನತೆ ಏನೆಂದರೆ, ನೀವು ಧ್ಯಾನ ಮಾಡಲು ಬಳಸುತ್ತಿರುವ ವಿಧಾನದಿಂದ ಧ್ಯಾನಸ್ಥ ಸ್ಥಿತಿಯ ಇಚ್ಛೆಯಿಂದಾಗಿ ವ್ಯಾಯಾಮದ ಉದ್ದೇಶವನ್ನು ಮರೆಯುವ ಸಾಧ್ಯತೆಗಳಿದೆ.

 

 

advertisement

ಹೇಡ ಸ್ಪೇಸ್ (Head Space) ಕಂಪನಿ ಹೇಗೆ ವಿನ್ಯಾಸ ಮಾಡಿದ್ದಾರೆ ಎಂದರೆ ಅದು ನಿಮ್ಮನ್ನು ಮನಸ್ಸಿನ ಗೊಂದಲಗಳಿಂದ ದೂರ ಮಾಡಿ ಹಿತಕರವಾದ ದೃಶ್ಯವನ್ನು ಆನಂದಿಸುವ ಅನುಭವ ನೀಡುತ್ತದೆ. ಮೂಲತಃ ಒಂದು ಆಟಿಕೆ ತರಹದ ಸಾಧನವಾಗಿದ್ದು ಅದು ಸಣ್ಣ ಟೇಬಲ್ ಕ್ಲಾಕ್ ಗಡಿಯಾರ (Small Table Clock Watch) ದಂತೆ ಎರಡು ಕಾಲುಗಳನ್ನು ಹೊಂದಿದ್ದು ಸಣ್ಣ ಸ್ಕ್ರೀನ್ (Small Screen) ಇರುತ್ತದೆ. ಈ ಪರದೆಯ ಮೇಲೆ ಚಲಿಸುವ ಮೋಡಗಳು ಸೂರ್ಯ ತರಕಾರಿಗಳು ಹಣ್ಣುಗಳು ಹಾಗೆಯೇ ಪರಿಸರದ ಇತರ ಮರಗಳು ಇಂತಹ ವಸ್ತುಗಳನ್ನು ಹಿತವಾಗಿ ತೋರಿಸಲಾಗುತ್ತದೆ. ಈ ದೃಶ್ಯಗಳ ಮೂಲಕ ನಿಮ್ಮನ್ನು ಧ್ಯಾನದ ಸ್ಥಿತಿಗೆ ಕರೆದೊಯ್ಯಲು ಸಂಯೋಜಿಸಿದ ಒಂದು ಸಾಧನವಾಗಿದೆ.

ಈ ಸಾಧನವು ತನ್ನ ಪರದೆಯ ಮೇಲೆ ವ್ಯಂಗ್ಯ ಚಿತ್ರ ಹಾಗೂ ಕೆಲವು ಹಾಸ್ಯಮಯ ಸಂದರ್ಭಗಳನ್ನು ಚಿತ್ರ ರೂಪದಲ್ಲಿ ತೋರಿಸಿ ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ, ನಿಮ್ಮ ಮಾನಸಿಕ ಸ್ಥಿತಿಗೆ ಹೊಂದಿಕೊಂಡು ಪ್ರಾರಂಭದಲ್ಲಿ ಅದು ಗೊಂದಲ ಮಾಯವಾಗಿ ಕಾಣಬಹುದು ಅದರಲ್ಲಿ ಕಾಣುವ ಚಿತ್ರಗಳು ಸ್ವಲ್ಪ ಮಬ್ಬಾಗಿ ಕಾಣಬಹುದು ಅಥವಾ ಕೋಪದಲ್ಲಿ ಕೂಡಿರುವಂತೆ ಕಾಣಬಹುದು ಸಮಯ ಕಳೆದಂತೆ ಮೋಡಗಳು ಗಾಢವಾದಂತೆ ಕಾಣಬಹುದು. ಆದರೆ ಈ ಸಾಧನದಿಂದ ನೀವು ಒಮ್ಮೆ ಧ್ಯಾನವನ್ನು ಪ್ರಾರಂಭಿಸಿದಾಗ ಎಲ್ಲ ಗೊಂದಲಗಳು ದೂರವಾಗಿ ಚಿತ್ರಗಳು ಸ್ಪಷ್ಟವಾಗಿ ಕಾಣಲು ಪ್ರಾರಂಭವಾಗುತ್ತದೆ.

 

 

ಎಲ್ಲ ಚಿತ್ರಗಳು ಸ್ಪಷ್ಟವಾಗುವಾಗ ನಿಮ್ಮ ಮನಸ್ಸಿನ ಉದ್ವೇಗವು ಕಡಿಮೆಯಾಗಿ ಶಾಂತತೆಗೆ ಬರುತ್ತದೆ. ಅಪ್ಲಿಕೇಶನ್ (Application) ನಲ್ಲಿ ಅದರ ಬದಿಗಿರುವ ಮರದ ಚಕ್ರ ಟೈಮರ್ ಅನ್ನು ಬಳಸಿಕೊಂಡು ನೀವು ಎಷ್ಟು ಹೊತ್ತು ಧ್ಯಾನಕ್ಕೆ ಕುಳಿತುಕೊಳ್ಳಬೇಕು ಎಂಬುದನ್ನು ನೀವೇ ನಿರ್ಣಯಿಸಿ ಧ್ಯಾನಕ್ಕೆ ಕುಳಿತುಕೊಳ್ಳಬಹುದು.

ಇದು ಕಲ್ಪನೆಯ ಪರಿಕಲ್ಪನೆ ತಾಂತ್ರಿಕ ಸಾಧನವಾಗಿದ್ದು ಇದು ದೃಶ್ಯಗಳ ಅನುಭವದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದು ನಿಮ್ಮ ಮನಸ್ಸಿನ ಭಾವನೆಗಳಿಗೆ ಒಂದು ಆಯಾಮವನ್ನು ನೀಡುತ್ತದೆ ಹಾಗೆಯೇ ಮನಸ್ಸನ್ನು ಶಾಂತ ಗೊಳಿಸಲು, ಆ ಶಾಂತತೆ ಅವರ ಮುಖದ ಮೇಲೆ ಪ್ರತಿ ಬಿಂಬಿಸಲು ಸಾಧ್ಯವಾಗುತ್ತದೆ. ಧ್ಯಾನ ಮಾಡೊಕ್ಕೆ ಬಯಸೋರು ಈ ಒಂದು ಸಾಧನ ಖರೀದಿಸಿದ್ರೆ ಒಳ್ಳೆಯದು!

advertisement

Leave A Reply

Your email address will not be published.