Karnataka Times
Trending Stories, Viral News, Gossips & Everything in Kannada

Family Cars: ಉತ್ತಮ ಮೈಲೇಜ್, ಕೈಗೆಟುಕುವ ಬೆಲೆಗೆ ಕೆಲವೇ ದಿನಗಳಲ್ಲಿ ಸಿಗಲಿದೆ 4 ಹೊಸ ಫ್ಯಾಮಿಲಿ ಕಾರುಗಳು !

advertisement

ಭಾರತದ ಆಟೋ ಮೊಬೈಲ್ ಉದ್ಯಮ ದಿನದಿಂದ ದಿನಕ್ಕೆ ವಿಕಸನಗೊಳ್ಳುತ್ತಲೇ ಇದೆ. ಇದೀಗ MPV ವಿಭಾಗವು ಮತ್ತೊಂದಿಷ್ಟು ಹೊಸ ಕಾರುಗಳ ಎಂಟ್ರಿಗೆ ಸಾಕ್ಷಿಯಾಗಲಿದೆ. ಫೇಸ್ ಲಿಫ್ಟೆಡ್ ಮಾಡೆಲ್ಗಳಿಂದ ಹಿಡಿದು ಎಲ್ಲಾ ಹೊಸ ಕೊಡುಗೆಗಳವರೆಗೆ, ವಾಹನ ತಯಾರಕರು ಭಾರತೀಯರ ಕುಟುಂಬಗಳ ಅಗತ್ಯಗಳನ್ನು ಪೂರೈಸಲು ಮುಂದಾಗುತ್ತಿದ್ದಾರೆ. ಕುಟುಂಬದವರ ವಿವಿಧ ಆದ್ಯತೆಗಳು ಮತ್ತು ಬಜೆಟ್ಗಳನ್ನು ಪೂರೈಸಲು ನೋಡುತ್ತಿದ್ದಾರೆ.

ಎಲೆಕ್ಟ್ರಿಕ್ ಮೊಬಿಲಿಟಿ, ಆಧುನಿಕ ವೈಶಿಷ್ಟ್ಯಗಳು ಅಥವಾ ಕೈಗೆಟುಕುವ ಫ್ಯಾಮಿಲಿ ಕಾರುಗಳಿಗೆ (Family Cars) ಆದ್ಯತೆ ನೀಡುವಂತಹ ವ್ಯಕ್ತಿಗಳು ನೀವಾಗಿದ್ದರೆ ನಿಮಗಾಗಿ ಇಲ್ಲಿದೆ ಕೆಲ ಹೇಳಿ ಮಾಡಿಸಿದ ಕಾರುಗಳು, ಈ MPV ಕಾರುಗಳ ಭವಿಷ್ಯವು ಆಶಾದಾಯಕವಾಗಿ ಉತ್ತಮ ಲಾಭ ತಂದುಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಏಕೆಂದರೆ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲು ಒಂದಷ್ಟು ಎಂಪಿವಿಗಳು ಸಿದ್ಧವಾಗುತ್ತಿವೆ. ಈ ಮುಂಬರುವ MPV ಗಳ ಕುರಿತು ಒಂದಿಷ್ಟು ತಿಳಿದುಕೊಳ್ಳೋಣ.

Kia Electric MPV:

 

 

ಮುಂಬರುವ Electric MPV ರೂಪದಲ್ಲಿ ಕಿಯಾವು ನಮಗೆ ಅದ್ಬುತ ಕಾರನ್ನು ನೀಡಲು ಸಜ್ಜಾಗಿದೆ. ಬೃಹತ್ ಮೊತ್ತದ ಭಾಗವಾಗಿ EV ಕಾರುಗಳ ಅಭಿವೃದ್ಧಿಗೆ ರೂ. 2,000 ಕೋಟಿ ಹೂಡಿಕೆ ಮಾಡಿದ್ದು, Kia 2025 ರ ವೇಳೆಗೆ ಎರಡು ಎಲೆಕ್ಟ್ರಿಕ್ ವಾಹನಗಳ್ನು ಪರಿಚಯಿಸಲು ಯೋಜಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಗ್ರಾಹಕರು ಕೂಡ ಸಂತೋಷ ಹೊಂದಬಹುದು ಎನ್ನಲಾಗುತ್ತಿದೆ. ಈ ಎರಡು ಎಲೆಕ್ಟ್ರಿಕ್ ಎಸ್ಯುವಿ (Electric SUV) ಗಳಲ್ಲಿ ಒಂದು ಕಾಂಪ್ಯಾಕ್ಟ್ ಎಲೆಕ್ಟ್ರಿಕ್ SUV ಆಗಿದ್ದರೇ ಇನ್ನೊಂದು ಎಲೆಕ್ಟ್ರಿಫೈಡ್ MPV ಆಗಿದ್ದು, ಇದು ಕುಟುಂಬದ ಎಲ್ಲ ಸದಸ್ಯರ ಪ್ರಯಾಣಕ್ಕಾಗಿ ದೊಡ್ಡ ಕಾರನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದೆ. ಈ ಕುರಿತ ವಿಶೇಷತೆಗಳು ಸದ್ಯ ಎಲ್ಲೂ ಹೇಳಲಾಗಿಲ್ಲ. ಇನ್ನು ಈ ಕುರಿತಾಗಿ ಮುಂಬರುವ ದಿನಗಳಲ್ಲಿ KIA ಮಾಹಿತಿಯನ್ನು ಬಹಿರಂಗಪಡಿಸಲಿದೆ.

2024 Kia Carnival:

 

 

advertisement

ಕಿಯಾ (KIA) ಇಂಡಿಯಾ ಮುಂದಿನ ವರ್ಷ ನಾಲ್ಕನೇ ತಲೆಮಾರಿನ ಕಾರ್ನಿವಲ್ (Carnival) ಅನ್ನು ತರುತ್ತಿದೆ. ಇದು ಐಷಾರಾಮಿ MPV ಆಗಿದ್ದು, ಕಿಯಾ ನ ಇತ್ತೀಚಿನ ಮಾದರಿಗಳಾದ ಸೆಲ್ಟೋಸ್ನ ಪ್ರಭಾವವನ್ನು ಹೊಂದಿದೆ. ಉನ್ನತ-ಮಟ್ಟದ ವೈಶಿಷ್ಟ್ಯಗಳೊಂದಿಗೆ ಮಾಡಲ್ಪಟ್ಟಿದೆ. ಹೊಸ ಮತ್ತು ಹೆಚ್ಚು ಪರಿಣಾಮಕಾರಿ ಪವರ್ಟ್ರೇನ್ ಜೊತೆಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ.

New Tata MPV:

 

 

Tata Motors MPV ವಿಭಾಗದಲ್ಲಿ ಸದ್ಯ ಯಾವುದೇ ಕಾರನ್ನು ಬಿಟ್ಟಿಲ್ಲ. ವರದಿಯ ಪ್ರಕಾರ ಹೊಸ MPV ಅನ್ನು ತರುವ ಕೆಲಸದಲ್ಲಿದೆ, ಇದು ಮಾರುತಿ ಎರ್ಟಿಗಾ (Maruti Ertiga) ಮತ್ತು ಟೊಯೋಟಾ ಇನ್ನೋವಾ (Toyota Innova) ನಡುವೆ ಸ್ಥಾನ ಪಡೆಯಲಿದೆ. ಈ ಹೊಸ ವಾಹನವು ವಾಣಿಜ್ಯ ಮತ್ತು ವೈಯಕ್ತಿಕ ಅನುಕೂಲ ಎರಡನ್ನೂ ಪೂರೈಸುತ್ತದೆ. ಈ ಕುರಿತ ವಿವರಗಳನ್ನು ಸದ್ಯಕ್ಕೆ ಎಲ್ಲೂ ಹೇಳಿಕೊಂಡಿಲ್ಲ.

New Nissan MPV:

 

 

ನಿಸ್ಸಾನ್ (Nissan) ಭಾರತೀಯ ಮಾರುಕಟ್ಟೆಗೆ ನಾಲ್ಕು ಮೀಟರ್ MPV ಅನ್ನು ಹೊರತರಲು ಯೋಜಿಸುತ್ತಿದೆ. ಇದು ರೆನಾಲ್ಟ್ ಟ್ರೈಬರ್ (Renault Triber) ಆಧಾರಿತ ಕಾಂಪ್ಯಾಕ್ಟ್ ಫ್ಯಾಮಿಲಿ ಕ್ರೂಸರ್ ಹಾಗೂ ಮಾರುತಿ ಎರ್ಟಿಗಾಗೆ ಕೈಗೆಟುಕುವ ದರದಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಇದು ಮ್ಯಾಗ್ನೈಟ್‌ನ 1.0 ಲೀ. NA ಪೆಟ್ರೋಲ್ ಮತ್ತು 1.0 ಲೀ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.

advertisement

Leave A Reply

Your email address will not be published.