Karnataka Times
Trending Stories, Viral News, Gossips & Everything in Kannada

RBI: ಈ ಬ್ಯಾಂಕ್ ನ ಪರವಾನಗಿ ರದ್ದು, RBI ಘೋಷಣೆ

advertisement

ಇಂದು ಅರ್ ಬಿ ಐ (RBI) ಬ್ಯಾಂಕ್ ವಿಚಾರವಾಗಿ ಕೆಲವೊಂದು ನಿರ್ದಿಷ್ಟ ನಿಯಮಗಳನ್ನು ಜಾರಿಗೆ ತರುತ್ತಲೆ ಇದ್ದು, ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಿದೆ. ಇಂದು ಜನರು ತಾವು ದುಡಿದ ಸ್ವಲ್ಪ ಭಾಗವಾದರೂ ಹಣವನ್ನು ಸೇವಿಂಗ್ ಮಾಡಿಯೇ ಮಾಡುತ್ತಾರೆ. ಆದರೆ ಯಾವ ಬ್ಯಾಂಕ್ ಎಷ್ಟು ಸೇಫ್ ಎಂದು ನೋಡುವುದು ಸಹ ಅಷ್ಟೆ ಮುಖ್ಯವಾಗುತ್ತದೆ. ಈಗ ಆರ್ ಬಿ‌ ಐ‌ ಕೆಲವೊಂದು ಬ್ಯಾಂಕ್ ಗೆ ನಿರ್ಬಂಧ ವಿಧಿಸಿದ್ದು ಈ ಬ್ಯಾಂಕಿನಿಂದ ಸಾಲವನ್ನು ಪಡೆಯುದು ಮತ್ತು ಠೇವಣಿ (Deposit) ಮಾಡುವಂತಿಲ್ಲ ಎಂದು ತಿಳಿಸಿದೆ‌.

ಬ್ಯಾಂಕ್ ಪರವಾನಗಿ ರದ್ದು:

ಅರ್ ಬಿ‌ ಐ (RBI) ಈ ವರ್ಷ ಬ್ಯಾಂಕ್ ನ ಆರ್ಥಿಕ ಸ್ಥಿತಿ, ಬಂಡವಾಳ ಇತ್ಯಾದಿ ಯನ್ನು ಸೂಕ್ತ ವಾಗಿ ಗಮನಿಸಿ ಕೆಲವು ಬ್ಯಾಂಕ್ ನ ಪರವಾನಗಿ ಯನ್ನು (Bank License) ರದ್ದು ಮಾಡಿದೆ. ಬ್ಯಾಂಕ್‌ಗೆ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವಿಲ್ಲ ಎಂದು ತಿಳಿಸಿದೆ. ಅದೇ ರೀತಿ ಕೆಲವು ಬ್ಯಾಂಕ್‌ಗಳಿಗೆ ದಂಡವನ್ನು ವಿಧಿಸಿದೆ.

ಯಾವ ಬ್ಯಾಂಕ್?

 

 

advertisement

ಕೊಲ್ಲಾಪುರದ ಇಚಲ ಕರಂಜಿಯಲ್ಲಿರುವ ಶಂಕರರಾವ್ ಪೂಜಾರಿ ನೂತನ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ (Shankarrao Pujari Nutan Nagari Co-operative Bank Limited) ಪರವಾನಗಿಯನ್ನು ಆರ್‌ಬಿಐ (RBI) ರದ್ದುಗೊಳಿಸಿದ್ದು ಈ ಬ್ಯಾಂಕ್ ನಲ್ಲಿ ಬಂಡವಾಳ ಕೊರತೆ ಇದ್ದು ಇಲ್ಲಿ‌ ಗಳಿಕೆಯ ಸಾಮರ್ಥ್ಯ ಇಲ್ಲ ಎಂದು ಅರ್ ಬಿ ಐ ತಿಳಿಸಿದೆ. ಅದೇ ರೀತಿ ಕಾರ್ಯಾಚರಣೆಯನ್ನು ನಿಲ್ಲಿಸಿದೆ.

ಈ ಬ್ಯಾಂಕ್ ಗಳಿಗೆ ದಂಡ:

ಹಿಂದೆ ರಿಸರ್ವ್ ಬ್ಯಾಂಕ್ ಕೆಲವೊಂದು ಬ್ಯಾಂಕ್ ಗಳಿಗೆ ದಂಡ ವಿಧಿಸಿದೆ. ಹೌದು ಅರ್ ಬಿಐ (RBI) ತಿಳಿಸಿದ ನೀತಿ ನಿಯಮಗಳನ್ನು ಪಾಲಿಸದೇ ಇರೋದಕ್ಕೆ ನಾಲ್ಕು ಸಹಕಾರಿ ಬ್ಯಾಂಕ್ ಗಳಿಗೆ ದಂಡ ವಿಧಿಸಿತ್ತು. ಅದರಲ್ಲಿ ಮುಖ್ಯವಾಗಿ ಜೀಜಾಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್ (Jijamata Mahila Sahakari Bank Ltd), ಶ್ರೀ ಲಕ್ಷ್ಮೀಕೃಪಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Shri Laxmikrupa Urban Co-operative Bank Ltd), ದಿ ಕೋನಾರ್ಕ್ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ (The Konark Urban Co-operative Bank Ltd) ಮತ್ತು ದಿ ಚೆಂಬೂರ್ ಸಿಟಿಜನ್ಸ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ (CITIZENCREDIT Co-Operative Bank Ltd) ಗೆ ದಂಡ ವಿಧಿಸಿತ್ತು.

ಬ್ಯಾಂಕ್ ಗಳ ಅಕ್ರಮ ವಿರುದ್ಧ ಕಠಿಣ ಕ್ರಮ:

ಸಹಕಾರಿ ಬ್ಯಾಂಕ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಬಹಳಷ್ಟು ಹೆಚ್ಚು ಮಾಡಲಾಗಿದ್ದು, ಬ್ಯಾಂಕ್‌ಗಳ ಹಲವಾರು ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ದಂಡ ಸಹ ವಿಧಿಸಿದೆ. ಸಹಕಾರಿ ಬ್ಯಾಂಕ್​​ಗಳು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸದೆ ಇದ್ದಲ್ಲಿ ಅಂದರೆ ಆರ್ಥಿಕವಾಗಿ ದುರ್ಬಲವಾಗಿ ದಿವಾಳಿಯಾಗುವ ರೀತಿಯಲ್ಲಿ ಇದ್ದರೆ RBI ಕಠಿಣ ಕ್ರಮ ತೆಗೆದು ಕೊಳ್ಳುತ್ತದೆ. ಇನ್ನೂ ಅರ್ ಬಿ ಐ ತಿಳಿಸಿದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಕೆಲವು ಬ್ಯಾಂಕ್ ಗಳಿಗೆ ದಂಡ ವಿಧಿಸಲಾಗಿದೆ.

advertisement

Leave A Reply

Your email address will not be published.