Karnataka Times
Trending Stories, Viral News, Gossips & Everything in Kannada

PMJJBY: ಈ ಯೋಜನೆಯಲ್ಲಿ ಕೇವಲ 36 ರೂಪಾಯಿಗಳನ್ನು ಹೂಡಿಕೆ ಮಾಡಿ ಎರಡು ಲಕ್ಷ ರೂಪಾಯಿಗಳನ್ನು ಹಿಂಪಡೆಯಿರಿ!

advertisement

ಆರ್ಥಿಕವಾಗಿ ಹಿಂದುಳಿದವರಿಗೆ, ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಅಗತ್ಯವಾಗುವ ಹಾಗೂ ಅನುಕೂಲ ವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಅಂತವುಗಳಲ್ಲಿ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಬಹುದಾಗಿದೆ.

PM Jeevan Jyoti Bima Yojana:

 

 

ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಇದ್ದರೂ ಕೂಡ ಅದಕ್ಕೆ ಬೇಕಾದಷ್ಟು ಹೂಡಿಕೆ ಮಾಡಲು ಅಥವಾ ಹಣ ಉಳಿತಾಯ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಸಬಲೀಕರಣಕ್ಕಾಗಿ ಪ್ರಮುಖ ಬಿಮಾ ಯೋಜನೆಯನ್ನು ಪರಿಚಯಿಸಿದೆ. ಅದುವೇ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PM Jeevan Jyoti Bima Yojana). 2015ರಲ್ಲಿ ಆರಂಭವಾದ ಈ ಯೋಜನೆಯ ಅಡಿಯಲ್ಲಿ ಇಂದು ಲಕ್ಷಾಂತರ ಜನ ಹೂಡಿಕೆ ಆರಂಭಿಸಿದ್ದಾರೆ.

ಯಾರು ಅರ್ಜಿ ಸಲ್ಲಿಸಬಹುದು?

advertisement

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಗೆ 18 ವರ್ಷ ತುಂಬಿದ ಯಾವುದೇ ವ್ಯಕ್ತಿ ಗರಿಷ್ಠ 50 ವರ್ಷ ವಯಸ್ಸಾಗಿರುವ ವ್ಯಕ್ತಿ ಹೂಡಿಕೆ ಮಾಡಬಹುದು. ವಾರ್ಷಿಕವಾಗಿ ಕೇವಲ 436 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಕು. ಅಂದರೆ ತಿಂಗಳಿಗೆ ಕೇವಲ 36 ರೂಪಾಯಿಗಳನ್ನು ಉಳಿತಾಯ ಮಾಡಬೇಕು. ಖಾತೆಯನ್ನು ಹೊಂದಿದ್ದರೆ ಆಟೋಮೆಟಿಕ್ ಆಗಿ ಪ್ರತಿ ತಿಂಗಳು 36 ರೂಪಾಯಿಗಳು ಕಡಿತಗೊಳ್ಳುವಂತೆ ಮಾಡಿಕೊಳ್ಳಬಹುದು.

2 ಲಕ್ಷ ರೂಪಾಯಿಗಳ ಜೀವ ವಿಮೆ:

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PM Jeevan Jyoti Bima Yojana) ಯ ಪ್ರಯೋಜನ ಅಂದರೆ ನೀವು ಅತಿ ಕಡಿಮೆ ಹೂಡಿಕೆ ಮಾಡಿ 2 ಲಕ್ಷ ರೂಪಾಯಿಗಳ ವಿಮಾ ಸೌಲಭ್ಯ ಪಡೆಯಬಹುದಾಗಿದೆ. ಪ್ರತಿ ಮೇ 25 ರಿಂದ 31 ನೇ ತಾರೀಖಿನ ಒಳಗೆ ನಿಮ್ಮ ಪ್ರೀಮಿಯಂ ಹಣ ಆಟೋಮೆಟಿಕ್ ಆಗಿ ಕಡಿತಗೊಳ್ಳುವಂತೆ ಮಾಡಲಾಗುವುದು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • Aadhaar Card
  • Bank Account Details
  • Passport Size Photo
  • Mobile Number
  • ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯ.

ಒಟ್ಟಿನಲ್ಲಿ ಬಡವರು ಕೂಡ ತಮ್ಮ ಭದ್ರ ಭವಿಷ್ಯಕ್ಕಾಗಿ ಆರ್ಥಿಕ ಸಬಲೀಕರಣಕ್ಕಾಗಿ ಅತಿ ಕಡಿಮೆ ಪ್ರೀಮಿಯಂ ಮೂಲಕ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಗಳಿಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.