Karnataka Times
Trending Stories, Viral News, Gossips & Everything in Kannada

SIP: ಹೆಚ್ಚಿನ ಲಾಭಕ್ಕಾಗಿ ಈ ಯೋಜನೆಯಲ್ಲಿ ಜನರ ಕೋಟಿಗಟ್ಟಲೆ ಹಣ ಹೂಡಿಕೆ, ವರದಿ ಇಲ್ಲಿದೆ.

advertisement

ಇತ್ತೀಚಿನ ದಿನದಲ್ಲಿ ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡುವ ಪ್ರಮಾಣ ಒಂದೇ ತರವಾಗಿಲ್ಲ. ಕೆಲವೊಮ್ಮೆ ಅಧಿಕ ಜನರು ಹೂಡಿಕೆ ಮಾಡಿದರೆ ಇನ್ನು ಕೆಲವು ಸಲ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಅದೇ ರೀತಿ ಈಕ್ವಿಟ್ ಮ್ಯೂಚುವಲ್ ಫಂಡ್ ಮೇಲಿನ ಹೂಡಿಕೆ 20% ಕಡಿಮೆಯಾಗಿದೆ. ಆದರೆ ಸಿಸ್ಟ್ಯಮಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (SIP) ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಶೇಷ ವರದಿಯೊಂದು ಸಿದ್ಧವಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಸ್ಐಪಿ (Systematic Investment Plan) ಹೂಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದರ ಬಗ್ಗೆ ಇತ್ತೀಚೆಗೆ ಒಂದು ವರದಿ ಬಹಳ ಪ್ರಚಾರದಲ್ಲಿದೆ. ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ ಇನ್ ಇಂಡಿಯಾ ಈ ಬಗ್ಗೆ ಡಿಸೆಂಬರ್ ನಲ್ಲಿ ವರದಿಯೊಂದನ್ನು ಹೊರಡಿಸಿದೆ. ಅದರ ಪ್ರಕಾರ ಈಕ್ವಿಟಿ ಮ್ಯೂಚುವಲ್ ಫಂಡ್ (Equity Mutual Fund) ಮೇಲೆ ಜನರು ಅಕ್ಟೋಬರ್ ತಿಂಗಳಿನಲ್ಲಿ 19,957 ಕೋಟಿ ರೂ. ನಷ್ಟು ಹೂಡಿಕೆ ಮಾಡಿದ್ದಾರೆ. ಆದರೆ ಬಳಿಕ ಈ ಮೊತ್ತ 20% ನಷ್ಟು ಇಳಿಕೆಯಾಗಿದೆ. ಅಂದರೆ ನವೆಂಬರ್ ತಿಂಗಳಲ್ಲಿ ಈ ಮೊತ್ತ 15, 536ಕೋಟಿ ರೂಪಾಯಿ ಆಗಿದೆ. ಈ ಮೂಲಕ ಅಕ್ಟೋಬರ್ ಗಿಂತ ನವೆಂಬರ್ ನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆ ಪ್ರಮಾಣ ಇಳಿಕೆಯಾಗಿದೆ‌.

ವರದಿಯಲ್ಲಿ ಹೇಳಿದ್ದೇನು?

ಅದೇ ರೀತಿ ಅಕ್ಟೋಬರ್ ತಿಂಗಳಿನಲ್ಲಿ ಎಸ್ಐಪಿ (SIP) ಮೇಲೆ ಹೂಡಿಕೆ ಮಾಡುವ ಪ್ರಮಾಣ 16,928ಕೋಟಿ ರೂಪಾಯಿ ಆಗಿತ್ತು. ಈ ಅವಧಿಯಲ್ಲಿ ಖಾತೆ ತೆರೆದವರ ಸಂಖ್ಯೆ 7.30 ಕೋಟಿ ಆಗಿತ್ತು. ಆದರೆ ನವೆಂಬರ್ ನಲ್ಲಿ ಈ ಹೂಡಿಕೆ ಮೊತ್ತ 17,073ಕೋಟಿ ರೂಪಾಯಿ ಏರಿಕೆಯಾಗಿದೆ. ಎಸ್ಐಪಿ ಸ್ಕೀಂ ಮೇಲೆ ತೆರೆಯಲಾದ ಖಾತೆಯ ಸಂಖ್ಯೆ 15ಲಕ್ಷ ಮಂದಿ ಏರಿಕೆಯಾಗಿದ್ದಾರೆ. ಇದುವರೆಗೆ ಒಟ್ಟು 7.45ಕೋಟಿ ಜನರು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಮೊದಲಬಾರಿಗೆ ಎಸ್ಐಪಿ ಮೇಲಿನ ಹೂಡಿಕೆ ಮೊತ್ತ 17ಸಾವಿರ ಕೋಟಿ ರೂಪಾಯಿಗೆ ತಲುಪಿದ್ದರ ಬಗ್ಗೆ ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ ಇನ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ.

advertisement

ಈ ಬದಲಾವಣೆಗೆ ಕಾರಣ ಏನು?

ಎಸ್ಐಪಿ ಹೂಡಿಕೆ ಮೇಲೆ ಲಾಭ ಇರುವ ಕಾರಣಕ್ಕೆ ಅಧಿಕ ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫಂಡ್ ಎನ್ನುವುದು ವಾರ್ಷಿಕ ಬಡ್ಡಿದರದ ಮೇಲೆ ಅವಲಂಬಿತವಾಗಿದೆ. ವಾರ್ಷಿಕವಾಗಿ 12% ನಷ್ಟು ಬಡ್ಡಿ ದರ ಸಿಗಲಿದೆ. ಆದರೆ ನೀವು ಎಸ್ಐಪಿನಲ್ಲಿ ದೀರ್ಘಾವಧಿ ಹೂಡಿಕೆ ಮಾಡುತ್ತಾಹೋದರೆ ಕೋಟ್ಯಾಧಿಪತಿ ಆಗಬಹುದು. ತಿಂಗಳಲ್ಲಿ 10ಸಾವಿರದಂತೆ 20 ವರ್ಷ ಹೂಡಿಕೆ ಮಾಡಿದರೆ ಒಂದು ಕೋಟಿ ರೂಪಾಯಿ ನಿಮಗೆ ಸಿಗಲಿದೆ.

ಎಸ್ಐಪಿ ಹೂಡಿಕೆ ಎನ್ನುವುದು ಪ್ರತೀ ತಿಂಗಳು ನಿರ್ದಿಷ್ಟ ಮೊತ್ತ ಪಾವತಿ ಮಾಡುವ ಹೂಡಿಕೆಯಾಗಿದೆ. ಹೀಗಾಗಿ ಆದಾಯ ಇರುವಾಗಲೇ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ ಅದು ಒಂದು ರೀತಿಯ ಲಾಭ ತಂದುಕೊಡಲಿದೆ. ಇನ್ನು ಅನೇಕರು ಹಣ ಸಂಗ್ರಹಿಸಿಟ್ಟು ಡೆಪಾಸಿಟ್ ಇಡುವ ಜೊತೆ ಜೊತೆಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

advertisement

Leave A Reply

Your email address will not be published.