Karnataka Times
Trending Stories, Viral News, Gossips & Everything in Kannada

Driving License: ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿ ಮಾಡುವವರಿಗೆ ಸಿಹಿಸುದ್ದಿ, ಹೊಸ ಕಾರ್ಡ್ ಜಾರಿಗೆ.

advertisement

ಇತ್ತೀಚೆಗೆ ಅತೀ ಚಿಕ್ಕವಯಸ್ಸಿನ ಮಕ್ಕಳು ಕೂಡ ಕಾರು ಬೈಕ್ ಎಂದು ವಾಹನ ಚಲಾಯಿಸುತ್ತಿದ್ದಾರೆ. ಮನೆಯವರ ಭಯವಿಲ್ಲ ಇನ್ನೊಂದೆಡೆ ಕಾನೂನು ಚೌಕಟ್ಟಿಗೂ ಸಿಕ್ಕಿ ಬೀಳದೆ ಅಡ್ಡ ದಾರಿಯಲ್ಲೆಲ್ಲ ವಾಹನ ಚಲಾಯಿಸುತ್ತಾರೆ. ಆದರೆ ಈಗ ಡಿಎಲ್ ಅನ್ನು ಕಡ್ಡಾಯ ಮಾಡಲಾಗುತ್ತಿದ್ದು ಮಕ್ಕಳಿಗೆ ವಾಹನ ನೀಡಿದ್ದ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಕ್ರಮ ಪಾಲಿಸದೇ ಇದ್ದರೆ ಶಿಕ್ಷೆ ವಿಧಿಸಲಾಗುವುದು ಎಂದು ಸಹ ಹೇಳಲಾಗಿತ್ತು. ಇದರ ನಡುವೆ ವಾಹನ ಪರವಾನಿಗೆಗೆ ನೂತನ ರೂಪ ನೀಡುವ ಕೆಲಸ ಸಹ ನಡೆಯುತ್ತಿದೆ.

ವ್ಯಕ್ತಿಯು ಹೊಂದಿರುವ ಡಿಎಲ್ ಮೂಲಕ ಆತ ಯಾವ ರಾಜ್ಯಕ್ಕೆ ಸೇರಿದವರು, ಸ್ಥಳ ಪುರಾವೆ, ಅಕ್ರಮ ವಹಿವಾಟು ಎಲ್ಲವನ್ನು ಸುಲಭವಾಗಿ ತಿಳಿಯಲಾಗುವುದು. ಅದರ ಜೊತೆ ಯದ್ವಾ ತದ್ವಾ ವಾಹಮ ಓಡಿಸುವುದು, ಟ್ರಾಫಿಕ್ ರೂಲ್ಸ್ ಫಾಲೋ ಮಾಡದಿರುವುದು ಮತ್ತು ನಿಯಮ ಉಲ್ಲಂಘನೆ ಮಾಡುವುದು ಇದೆಲ್ಲ ಹೆಚ್ಚಾಗುತ್ತಿದ್ದು ವಾಹನ ಲೈಸೆನ್ಸ್ ಮುಖೇನ ಸಂಬಂಧ ಪಟ್ಟ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು.

ಅಧಿಕ ಅನುಕೂಲ

ಎಷ್ಟೋ ಬಾರಿ ಲೈಸೆನ್ಸ್ ಅನ್ನು ಮರೆತು ಕಚೇರಿ ಕೆಲಸ ಸ್ಥಳ ಅಥವಾ ಮನೆಯಲ್ಲಿ ಬಿಡುವುದು ಇದೆ ಹಾಗಾಗಿ ಡ್ರೈವಿಂಗ್ ಲೈಸೆನ್ಸ್ (Driving License) ಗೆ ಸ್ಮಾರ್ಟ್ ಕಾರ್ಡ್ ರೂಪ ನೀಡಲಾಗಿತ್ತು. ಈಗ ಇದರಲ್ಲೇ ಒಂದು ವಿನೂತನ ವ್ಯವಸ್ಥೆಯಿಂದ ನಿಮಗೆ ಸಾಕಷ್ಟು ಉಪಯುಕ್ತ ಆಗಲಿದೆ. ಪೊಲೀಸರು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಸಂಚಾರದ ಅವಧಿಯಲ್ಲಿ ಜನರ ವಾಹನ ಮಾಹಿತಿ ಪಡೆಯಲು ಅನುಕೂಲ ಆಗುವ ವಿಧಾನ ಕಂಡುಕೊಳ್ಳಲಾಗಿದೆ.

advertisement

ಯಾವುದು ಈ ವ್ಯವಸ್ಥೆ

ಹೊಸದಾಗಿ ಚಾಲನೆ ಪರವಾನಿಗೆ ಪಡೆಯುವವರಿಗೆ ಮತ್ತು ವಾಹನ ನೋಂದಣಿ ಮಾಡಿಸುವವರಿಗೆ ಹೊಸದಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಈ ಸ್ಮಾರ್ಟ್ ಕಾರ್ಡಿನಲ್ಲಿ ಕ್ಯೂ ಆರ್ ಕೋಡ್ ಲಭ್ಯವಾಗಲಿದ್ದು ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರು ಮಾಧ್ಯಮದ ಮುಂದೆ ಬಹಿರಂಗವಾಗಿ ಮಾತನಾಡಿದ್ದಾರೆ.

ಯಾವಾಗ ಬರಲಿದೆ?

2014ರ ಫೆಬ್ರವರಿಯಿಂದ ರಾಜ್ಯದಲ್ಲಿ ಕ್ಯೂ ಆರ್ ಕೋಡ್ ಇರುವ ಏಕರೂಪದ ಡಿಎಲ್ ಸೌಲಭ್ಯ ನೀಡಲಾಗುವುದು. ಸಂಚಾರದ ಅವಧಿಯಲ್ಲಿ ಪೋಲಿಸರಿಗೆ ಮತ್ತು ಅಧಿಕಾರಿಗಳಿಗೆ ಈ ವ್ಯವಸ್ಥೆ ಬಹಳ ಅನುಕೂಲ ವದಗಿಸಲಾಗುವುದು.ಹಳೆ ಪರವಾನಿಗೆ ನವೀಕರಣ ಮತ್ತು ಹೊಸ ಡಿಎಲ್ ಮಾಡಿಸುವಾಗ ಈ ಸ್ಮಾರ್ಟ್ ಕಾರ್ಡ್ ಸಿಗಲಿದೆ ಎಂದು ಸಾರಿಗೆ ಸಚಿವರು ಇತ್ತೀಚೆಗೆ ಮಾಧ್ಯಮದ ಮುಂದೆ ಈ ಬಗ್ಗೆ ಮಾತನಾಡಿದ್ದಾರೆ‌.

advertisement

Leave A Reply

Your email address will not be published.