Karnataka Times
Trending Stories, Viral News, Gossips & Everything in Kannada

AB de Villiers: ಈ ಕಾರಣದಿಂದ ನಾನು ಕ್ರಿಕೆಟ್​ಗೆ ವಿದಾಯ ಹೇಳಬೇಕಾಯ್ತು: ಎಬಿ ಡಿವಿಲಿಯರ್ಸ್

advertisement

ಕ್ರಿಕೇಟ್‌ ಎಂಬುದು ಭಾರತೀಯರ ನೆಚ್ಚಿನ ಆಟ, ಅದರಲ್ಲೂ ಕ್ರಿಕೇಟ್ ಗೆ ಇಂದು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅದರಲ್ಲೂ ಅರ್ ಸಿ ಬಿ ಫ್ಯಾನ್ಸ್ ಕೇಳಬೇಕಾ? ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದು ತಿಳಿದೆ ಇದೆ. ಇವರ ಅಭಿಮಾನಿಗಳು ಈ ಬಗ್ಗೆ ಬಹಳಷ್ಟು ಬೇಸರ ಗೊಂಡಿದ್ದರು. ಇದೀಗ ನಿವೃತ್ತಿ ಘೋಷಣೆ ಮಾಡಲು ಬಲವಾದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಯಾವಾಗ‌ ನಿವೃತ್ತಿ ಘೋಷಣೆ ಮಾಡಿದ್ರು?

ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರ ಖ್ಯಾತಿ ಹೆಚ್ಚಿತ್ತು. ಐಪಿಎಲ್ (IPL) ಸೇರಿದಂತೆ ಇತರೆ ಟಿ20 ಲೀಗ್​ಗಳಲ್ಲಿ ಆಡುತ್ತಿದ್ದ ಇವರು‌ ಉತ್ತಮ ಆಟಗಾರ ಆಗಿದ್ದರು. ಆದರೆ ಇದಕ್ಕಿದ್ದಂತೆ ಅವರು ಈ ಟಿ20 ಲೀಗ್​ನಿಂದಲೂ ನಿವೃತ್ತಿ ಪಡೆದರು. 2018 ರಲ್ಲಿ ಅಂತರಾಷ್ಟ್ರೀಯ ಮತ್ತು 2021 ರಲ್ಲಿ ಐಪಿಎಲ್​ಗೆ ನಿವೃತ್ತಿ ಘೋಷಣೆ ಮಾಡಿದರು.

ಕಾರಣ ಏನು?

ಐದು ವರ್ಷಗಳ ನಂತರ ಇದೀಗ ಅವರು ಕ್ರಿಕೆಟ್‌ ಗೆ ವಿದಾಯ ಹೇಳಲು ಕಾರಣ ಏನು ಎಂಬುದನ್ನು‌ ಬಹಿರಂಗಪಡಿಸಿದ್ದಾರೆ. ಮಗ ಆಕಸ್ಮಿಕವಾಗಿ ನನ್ನ ಕಣ್ಣಿಗೆ ಒದ್ದ ಕಾರಣ ತನ್ನ ಬಲಗಣ್ಣಿನ ದೃಷ್ಟಿ ಸರಿಯಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟೆ. ಆದರೆ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ತನ್ನ ಎಡಗಣ್ಣು ಉತ್ತಮವಾಗಿ ಕಾರ್ಯನಿರ್ವಹಿಸಿತು. ಆದರೆ ಈ ಬಗ್ಗೆ ಡಾಕ್ಟರ್ ಸಲಹೆ ನೀಡಿದ್ದರು. ಅಂತಿಮವಾಗಿ 2018 ರಲ್ಲಿ ಐಪಿಎಲ್ ಆಡುವುದನ್ನು ನಿಲ್ಲಿಸಿದೆ ಎಂದಿದ್ದಾರೆ.

advertisement

ಆರ್ ಸಿಬಿ ಆಟಗಾರ

ದಕ್ಷಿಣ ಆಫ್ರಿಕಾ ಹಾಗೂ ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿ ಹಲವು ಅಭಿಮಾನಿಗಳನ್ನು ಒಳಗೊಂಡಿರುವ ಕ್ರಿಕೇಟ್ ಆಟಗಾರ,ಎಬಿಡಿ ಎಂದೇ ಕರೆಯಲ್ಪಡುತ್ತಿದ್ದ ಅವರು ಕರ್ನಾಟಕದಲ್ಲಿ ಬಹಳ‌ ಫೇಮಸ್ಸು, ಬೆಂಗಳೂರು ಮತ್ತು ಕರ್ನಾಟಕದ ಜೊತೆಗೆ ವಿಶಿಷ್ಟ ನಂಟು ಹೊಂದಿದ್ದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸುತ್ತಿದ್ದ ಡಿವಿಲಿಯರ್ಸ್ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಇಂದಿಗೂ ಸ್ಥಾನ ಪಡೆದುಕೊಂಡಿದ್ದಾರೆ.

ಕ್ರಿಕೇಟ್‌ ಆಡುವ ಆಸಕ್ತಿ ಇನ್ನೂ ಇದೆ

ನಿವೃತ್ತಿ ಘೋಷಿಸಿದ್ದು ಕುಟುಂಬದೊಂದಿಗೆ ಸಮಯ ಕಳೆಯಲು ಎನ್ನಲಾಗಿತ್ತು. ಆದರೆ ಸತ್ಯಾಂಶ ಇದು ಅಲ್ಲ ಎಂದು ಇತ್ತೀಚೆಗೆ ಎಬಿಡಿ ರಿವೀಲ್ ಮಾಡಿದ್ದಾರೆ. ಆರ್‌ಸಿಬಿ ಜೊತೆ ಕೆಲಸ ಮಾಡುವ ಆಸಕ್ತಿ ನನಗೂ ಇದೆ. ಆದರೆ, ಸದ್ಯದ ಸನ್ನಿವೇಶದಲ್ಲಿ ಅದು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಕ್ರಿಕೇಟ್ ಆಟದಲ್ಲಿ ಇವರ ಸಾಧನೆ ಅಪಾರ, 2016ರ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ ತಲುಪುವಲ್ಲಿ ಎಬಿ ಡಿ ಬಹಳಷ್ಟು ಶ್ರಮ ಪಟ್ಟಿದ್ದರು. ಅವರು 687 ರನ್‌ಗಳನ್ನು ಸಿಡಿಸುವ ಮೂಲಕ‌ ಆರ್‌ಸಿಬಿ ಪರ ಎಬಿಡಿ ಎರಡು ಶತಕಗಳು ಹಾಗೂ 37 ಅರ್ಧಶತಕಗಳೊಂದಿಗೆ ಆಟ ಆಡಿದ್ದರು.

advertisement

Leave A Reply

Your email address will not be published.