Karnataka Times
Trending Stories, Viral News, Gossips & Everything in Kannada

Electric Shock: ವಿದ್ಯುತ್ ಶಾಕ್ ತಾಗಿದರೆ ಕೂಡಲೇ ಏನು ಮಾಡಬೇಕು? ಈ ಅಂಶಗಳು ತಿಳಿದುಕೊಳ್ಳಿ.

advertisement

ಅವಘಡಗಳು ಅಥವಾ ಅನಾಹುತಗಳು ಹೇಳಿ ಕೇಳಿ ನಡೆಯುವುದಿಲ್ಲ. ಆಕಸ್ಮಿಕವಾಗಿ ಯಾವುದಾದರೂ ಒಂದು ತರಹದ ಅವಘಡ ನಡೆದಾಗ ಏನು ಮಾಡಬೇಕು ಎಂಬ ಅರಿವಿದ್ದರೆ ಅದರಿಂದ ಆಗುವ ಅಪಾಯವನ್ನು ಬಹಳಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಇಂತಹ ಅನಾಹುತಗಳಲ್ಲಿ ಎಲೆಕ್ಟ್ರಿಕ್ ಶಾಕ್ (Electric Shock) ಅಥವಾ ವಿದ್ಯುತ್ ಶಾಕ್ ಕೂಡ ಒಂದು. ವಿದ್ಯುತ್ ಎಷ್ಟು ಉಪಕಾರಿಯೋ ಸರಿಯಾದ ರೀತಿಯಲ್ಲಿ ಬಳಸದೆ ಇದ್ದಾಗ ಅಥವಾ ಸರಿಯಾದ ಜ್ಞಾನ ಇಲ್ಲದೆ ವಿದ್ಯುತ್ ಸರಬರಾಜು ಆಗುತ್ತಿರುವ ಯಾವುದೇ ಒಂದು ಉಪಕರಣವನ್ನು ರಿಪೇರಿ ಮಾಡಲು ಹೋದಾಗ ಅನಾಹುತಗಳು ಸಂಭವಿಸಬಹುದು.

ಹೀಗೆ ಕರೆಂಟ್ ಶಾಕ್ ತಾಗಿದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನು ತಿಳಿದುಕೊಂಡಿದ್ದರೆ ಅಂತಹ ಸನ್ನಿವೇಶ ಎದುರಾದಾಗ ನಾವು ಸರಿಯಾದುದನ್ನೆ ಮಾಡಿ ನಡೆಯುವ ಅವಘಡವನ್ನು ತಪ್ಪಿಸಬಹುದು. ಹಾಗಾದರೆ ವಿದ್ಯುತ್ ಶಾಕ್ ತಾಗಿದರೆ ಕೂಡಲೇ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದನ್ನು ಈಗ ತಿಳಿದುಕೊಳ್ಳೋಣ.

advertisement

• ಯಾರಿಗಾದರೂ ಕರೆಂಟ್ ಶಾಕ್ ಹೊಡೆದಾಗ ಗಾಬರಿಗೊಂಡು ಕೂಡಲೇ ಹೋಗಿ ಅವರನ್ನು ಮುಟ್ಟಬೇಡಿ ಅವರಿಗೆ ತಗಲಿರುವ ಶಾಕ್ ನಿಮಗೂ ಕೂಡ ತಗಲಬಹುದು. ಸಹಾಯ ಮಾಡಬೇಕು ನಿಜ ಆದರೆ ಮೊದಲು ನಿಮ್ಮ ಸುರಕ್ಷತೆ ಅಗತ್ಯ.
• ವಿದ್ಯುತ್ ನ ಮೂಲ ಯಾವುದು ಎಂದು ತಿಳಿದಿದ್ದರೆ ಮೊದಲಿಗೆ ಹೋಗಿ ಅದನ್ನು ಸ್ವಿಚ್ ಆಫ್ ಮಾಡಿ ಹಾಗೂ ಕರೆಂಟ್ ಸರಬರಾಜು ಆಗದಂತೆ ನೋಡಿಕೊಳ್ಳಿ. ಹೀಗೆ ಮಾಡಿದಾಗ ಶಾಕ್ ತಗುಲಿದ ವ್ಯಕ್ತಿ ಕೂಡಲೇ ಶಾಕ್ ನಿಂದ ಹೊರಬರುತ್ತಾರೆ.
• ನಿಮಗೆ ವಿದ್ಯುತ್ ನ ಮೂಲ ಸಿಗದೇ ಹೋದಾಗ, ಕರೆಂಟ್ ಶಾಕ್ ತಗಲಿದ ವ್ಯಕ್ತಿಯನ್ನು ವಿದ್ಯುತ್ ನ ಮೂಲದಿಂದ ಬೇರ್ಪಡಿಸಬೇಕು ಎಂದಾದಾಗ ವಿದ್ಯುತ್ ವಾಹಕ ಅಲ್ಲದ ಕಾರ್ಡ್ ಬೋರ್ಡ್ ಪ್ಲಾಸ್ಟಿಕ್ ಅಥವಾ ಮರವನ್ನು ಉಪಯೋಗಿಸಿ. ಹೀಗೆ ಮಾಡಿದಾಗ ನೀವು ಶಾಕ್ ಗೆ ಒಳಗಾಗುವುದನ್ನು ತಪ್ಪಿಸಬಹುದು.
• ಹೈ ವೋಲ್ಟೇಜ್ ಲೈನ್ ನ ಶಾಕ್ ಬಹಳ ಅಪಾಯಕಾರಿ. ಇದರ ಮೂಲಕ ಶಾಕ್ ಆಗಿದ್ದಲ್ಲಿ ಅಂತಹ ಜಾಗದಿಂದ 20 ಫೀಟ್ ನ ಅಂತರದಲ್ಲಿ ಇರಿ.
• ಶಾಕ್ ತಗಲಿದ ಎತ್ತಿ ಸರಿಯಾಗಿ ಉಸಿರಾಡುತ್ತಿದ್ದಾರೆಯೇ ಎಂದು ಪರೀಕ್ಷಿಸಿ, ಇಲ್ಲದಿದ್ದಲ್ಲಿ ಕೂಡಲೇ ಕೃತಕ ಉಸಿರಾಟವನ್ನು ಮಾಡಲು ಆರಂಭಿಸಿ. ಇದಾದ ಕೂಡಲೇ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿ.
• ಸುಟ್ಟ ಗಾಯಗಳು ಆಗಿದ್ದಲ್ಲಿ ಅದಕ್ಕೆ ಬ್ಯಾಂಡೇಜ್ ಹಚ್ಚಲು ಹೋಗಬೇಡಿ ಬ್ಯಾಂಡೇಜ್ ಗಾಯಕ್ಕೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರ ಬದಲು ಒದ್ದೆ ಬಟ್ಟೆ ಇಡಿ. ಇದರಿಂದ ಗಾಯದ ಉರಿ ಕೂಡ ಕಡಿಮೆ ಆಗುತ್ತದೆ.
• ಶಾಕ್ ತೆಗೆದೆ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೆಚ್ಚಗಿಡಲು ಪ್ರಯತ್ನಿಸಿ.

ಈ ಎಲ್ಲಾ ಕ್ರಮಗಳನ್ನು ಕೈಗೊಂಡು ಒಂದು ಬಾರಿ ಶಾಕ್ ನಿಂದ ಆ ವ್ಯಕ್ತಿಯನ್ನು ಹೊರಗೆ ತನ್ನಿ ಮತ್ತೆ ಮುಂದೆ ವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಇದು ಮುಂದೆ ಆಗಬಹುದಾದ ಈ ಶಾಕ್ ನ ಪರಿಣಾಮವನ್ನು ತಪ್ಪಿಸುತ್ತದೆ.

advertisement

Leave A Reply

Your email address will not be published.