Karnataka Times
Trending Stories, Viral News, Gossips & Everything in Kannada

Sukanya Samriddhi Scheme: ಸರ್ಕಾರದ ಈ ಯೋಜನೆಯಲ್ಲಿ ಹೆಣ್ಣುಮಕ್ಕಳ ಮದುವೆಗೆ ಸಿಗಲಿದೆ 15 ಲಕ್ಷ ರೂಪಾಯಿ, ಹೀಗೆ ಅಪ್ಲೈ ಮಾಡಿ!

advertisement

ಹೆಣ್ಣು ಮಕ್ಕಳು ಹುಟ್ಟಿದರೆ ಖರ್ಚು ತುಂಬಾ ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಹೆಣ್ಣು ಹುಟ್ಟಲಿ, ಗಂಡು ಹುಟ್ಟಲಿ ಖರ್ಚುಗಳು ಸರಿಸಮಾನವಾಗಿರುತ್ತದೆ. ಆದರೆ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು, ಹೆಣ್ಣು ಮಕ್ಕಳ ತಂದೆ ತಾಯಿಯ ಜವಾಬ್ದಾರಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಸಲುವಾಗಿ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳಿಗೆ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ (Private and Government Banks) ಗಳು ಕೈ ಜೋಡಿಸಿದ್ದು, ಸರ್ಕಾರದ ಈ ಯೋಜನೆಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಹದಿನೈದು ಲಕ್ಷ ರೂಪಾಯಿಯನ್ನು ಉಳಿಸಬಹುದಾಗಿದೆ. ದೊಡ್ಡ ಮೊತ್ತದ ಹಣ ಉಳಿಸಲು ಇರುವ ಯೋಜನೆಯೇ ಈ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme). ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ.

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಎಷ್ಟು

ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದಿಂದ ಪ್ರಾರಂಭವಾದ ಸರ್ಕಾರಿ ಯೋಜನೆಯಾಗಿದೆ. ಈ ಯೋಜನೆ (Sukanya Samruddhi Scheme)ಯಡಿಯಲ್ಲಿ ಹತ್ತು ವರ್ಷಯೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿಗೆ ತೆರಳಿ ಖಾತೆಯನ್ನು ತೆರೆಯಬಹುದು. 21 ವರ್ಷದ ಯೋಜನೆಯಲ್ಲಿ 15 ವರ್ಷದವರೆಗೆ ಪ್ರತೀ ವರ್ಷದವರೆಗೆ ಹಣವನ್ನು ಠೇವಣಿ ಮಾಡಬೇಕು. ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme) ಯಲ್ಲಿ ಬಡ್ಡಿ ದರವು ವಾರ್ಷಿಕ 8% ಆಗಿದ್ದು, ಇದರಲ್ಲಿ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯುವಾಗ ಜನ್ಮ ಪ್ರಮಾಣಪತ್ರ ಹಾಗೂ ಮಗು ಮತ್ತು ಪೋಷಕರ ಗುರುತಿನ ಚೀಟಿಯನ್ನೂ ಸಲ್ಲಿಸಬೇಕು.

advertisement

ಎಷ್ಟು ಮೊತ್ತ ಹೂಡಿದರೆ ಎಷ್ಟು ಮೊತ್ತ ಕೈ ಸೇರಲಿದೆ?

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Scheme) ಯಡಿಯಲ್ಲಿ ಖಾತೆಯನ್ನು ತಿಂಗಳಿಗೆ ಕನಿಷ್ಠ 250 ರೂ.ಗಳೊಂದಿಗೆ ತೆರೆಯಬಹುದು. ಆದರೆ ಪ್ರತಿ ತಿಂಗಳು ಹೂಡಿಕೆ ಮಾಡುವ ಮೊತ್ತವು ಗರಿಷ್ಠವಿದ್ದರೆ ಮುಕ್ತಾಯದ ವೇಳೆಗೆ ದೊಡ್ಡ ಮೊತ್ತವನ್ನು ಪಡೆಯಬಹುದು. ಮಗಳ ಹೆಸರಿನಲ್ಲಿ ಪ್ರತಿ ತಿಂಗಳು 3000 ರೂ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 9 ಲಕ್ಷ ರೂಪಾಯಿ ಹಾಗೂ 21 ವರ್ಷಗಳ ಬಳಿಕ ಸುಮಾರು 15 ಲಕ್ಷ ರೂಪಾಯಿಗಳಷ್ಟು ಮೊತ್ತವು ಕೈ ಸೇರುತ್ತದೆ.

advertisement

Leave A Reply

Your email address will not be published.