Karnataka Times
Trending Stories, Viral News, Gossips & Everything in Kannada

Gold Rate: ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ, ಇಳಿಕೆ ಮುಖದತ್ತ ಚಿನ್ನದ ದರ.

advertisement

ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ದರ ವು ಇಂದು ಇಳಿಕೆ ಕಂಡಿದೆ. ಸ್ವಲ್ಪ ಮಟ್ಟಿಗೆ ಚಿನ್ನದ ದರದಲ್ಲಿ ಇಳಿಕೆ ಕಂಡಿರುವುದು ಆಭರಣ ಪ್ರಿಯರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರವು (Gold and Silver Price) ಎಷ್ಟಿದೆ ಎನ್ನುವುದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.

22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ದರ (Gold Rate)

ಇಂದು 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 5,695 ರೂ ಆಗಿದ್ದು, 24 ಕ್ಯಾರೆಟ್ ನ ಚಿನ್ನದ ಬೆಲೆಯೂ 6,213 ರೂ ಆಗಿದೆ. ಎಂಟು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,560 ರೂ ಇದ್ದರೆ, 24 ಕ್ಯಾರೆಟ್ ನ ಚಿನ್ನದ ಬೆಲೆ 49,704 ರೂ ಆಗಿದೆ. 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 56,950 ರೂ ಹಾಗೂ 24 ಕ್ಯಾರೆಟ್ ನ ಚಿನ್ನದ ದರವು 62,130 ರೂ ಆಗಿದೆ.

advertisement

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

22 ಕ್ಯಾರೆಟ್ ನ 10 ಗ್ರಾಮ್​ ಚಿನ್ನದ ಬೆಲೆಯೂ ಬೆಂಗಳೂರಿನಲ್ಲಿ 56,950 ರೂ., ಮುಂಬೈ ನಲ್ಲಿ 56,950ರೂ., ದೆಹಲಿಯಲ್ಲಿ 57,050 ರೂ., ಚೆನ್ನೈ ನಲ್ಲಿ 57,650 ರೂ, ಕೋಲ್ಕತಾದಲ್ಲಿ 57,150 ರೂ, ಕೇರಳದಲ್ಲಿ 56,950 ರೂ., ಅಹ್ಮದಾಬಾದ್ ನಲ್ಲಿ 57,000 ರೂ., ಜೈಪುರ್ ನಲ್ಲಿ 57,050 ರೂ., ಲಕ್ನೋದಲ್ಲಿ, 57,300 ರೂ ಹಾಗೂ ಭುವನೇಶ್ವರ್ ನಲ್ಲಿ 57,150 ರೂ ಆಗಿದೆ.

ಇಂದು ಬೆಳ್ಳಿಯ ದರ (Silver Rate)ವೆಷ್ಟು?

ಇಂದು ದೇಶದಾದಂತ್ಯ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ 738 ರೂ, 7,380 ರೂ ಹಾಗೂ 73,800 ರೂಗಳಾಗಿವೆ.

advertisement

Leave A Reply

Your email address will not be published.