Karnataka Times
Trending Stories, Viral News, Gossips & Everything in Kannada

Poco: 5000mah ಬ್ಯಾಟರಿ ಸಾಮರ್ಥ್ಯ, 50 ಮೆಗಾಪಿಕ್ಸೆಲ್ ಕ್ಯಾಮೆರಾ! ಕೇವಲ 10,000ರೂ. ಗೆ ಈ ಸ್ಮಾರ್ಟ್ ಫೋನ್ ಖರೀದಿಸಿ

advertisement

ಇತ್ತೀಚೆಗೆ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಅಧಿಕ ಮಾನ್ಯತೆ ಸಿಗುತ್ತಿದೆ. ಕ್ರಿಸ್ಮಸ್ ಆಫರ್ ಜೊತೆ ಜೊತೆಗೆನೇ ಹೊಸ ವರ್ಷ ಕೂಡ ಸಮೀಪದಲ್ಲೇ ಇದ್ದು ಫೋನ್ ಕೊಳ್ಳುವವರು ಕೂಡ ದಿ ಬೆಸ್ಟ್ ಆಯ್ಕೆ ಯಾವುದೆಂದು ಹುಡುಕಾಟದಲ್ಲಿದ್ದಾರೆ, ಹಬ್ಬಕ್ಕೂ ಮೊದಲೇ ಆಫರ್ ಲಭ್ಯವಾಗುತ್ತಿದ್ದು ಕಡಿಮೆ ಬೆಲೆಗೆ ಅತ್ಯಧಿಕ ಫೀಚರ್ಸ್ ಇರುವ ಸ್ಮಾರ್ಟ್ ಫೋನ್ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಭಾರತದಲ್ಲಿ ಜನಪ್ರಿಯ ಕಡಿಮೆ ಬಜೆಟ್ ನ ಸ್ಮಾರ್ಟ್ ಫೋನ್ ಉತ್ಪಾದಕ ಕಂಪೆನಿಯಾದ ಪೋಕೋ (Poco) ಈಗ ತನ್ನ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿದೆ. Poco C65 ಅನ್ನು ಬಿಡುಗಡೆ ಮಾಡಲಾಗಿದ್ದು ಜಗತ್ತಿನಾದ್ಯಂತ ಈ ಸ್ಮಾರ್ಟ್ ಫೋನಿಗೆ ಉತ್ತಮ ಬೇಡಿಕೆ ಬಂದಿದೆ. ಸಾಮಾನ್ಯ ಮತ್ತು ಬಡವರ್ಗಕ್ಕೆ ಈ ಒಂದು ಸ್ಮಾರ್ಟ್ ಫೋನ್ ಉತ್ತಮ ಆಯ್ಕೆಯಾಗಿದ್ದು ಫೀಚರ್ಸ್ ಅಂತೂ ಅನೇಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಪೈಪೋಟಿ ಮಾರುಕಟ್ಟೆ:

ಈಗ ಸ್ಮಾರ್ಟ್ ಫೋನ್ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಹೆಚ್ಚಳವಾಗುತ್ತಿದ್ದು ವಿವೋ (Vivo), ಸ್ಯಾಮ್ ಸಂಗ್ (Samsung), ಆ್ಯಪಲ್ ಐ ಫೋನ್ (iPhone), ರೆಡ್ ಮಿ (Redmi), ಪೊಕೊ (Poco), ಒಪೊ (Oppo) ಇನ್ನು ಅನೇಕ ಕಂಪೆನಿ ನಡುವೆ ಸ್ಮಾರ್ಟ್ ಫೋನ್ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕ ಪೈಪೋಟಿ ನಡೆಯುತ್ತಿದೆ‌. ಈ ನೆಲೆಯಲ್ಲಿ ಅತೀ ಕಡಿಮೆ ಬೆಲೆಗೂ ಕೂಡ ಅಧಿಕ ಫೀಚರ್ಸ್ ಇರುವ ಸ್ಮಾರ್ಟ್ ಫೋನ್ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಬಿಟ್ಟು ಪೊಕೊ ಕಂಪೆನಿಯ ಹೊಸ ಆವೃತ್ತಿ ಬಹಳ ಉತ್ತಮವಾಗಿದೆ.

ಫಿಚರ್ಸ್ ಹೇಗಿದೆ?

 

advertisement

 

Poco C65 ಎರಡು ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಎರಡು ಆವೃತ್ತಿ ಸಹ ಗ್ರಾಹಕರ ಮನ ಮೆಚ್ಚುವಂತೆ ಸಿದ್ಧಗೊಂಡಿದೆ ಎಂದು ಹೇಳಬಹುದು.

  • 720×1600ಫಿಕ್ಸೆಲ್ ರೆಸಲ್ಯೂಷನ್ ಹೊಂದಿದೆ.
  • 6.74ಇಂಚಿನ IPS, LCD ಡಿಸ್‌ಪ್ಲೇ ಹೊಂದಿದೆ.
  • 50MP ಪ್ರಾಥಮಿಕ ಮತ್ತು 20MP ಸಾಮಾನ್ಯ ಕೆಮರಾ ಹೊಂದಿದೆ.
  • ಇದರಲ್ಲಿ ಚಿಪ್ ಸೆಟ್ ಸಿಸ್ಟಂ ಇದೆ.
  • ಡ್ಯುಯಲ್ ಅತ್ಯುತ್ತಮ ಕ್ವಾಲಿಟಿಯ ರಿಯಲ್ ಕ್ಯಾಮರಾ ಹೊಂದಿದೆ.
  • ಸೆಲ್ಫಿ ಮತ್ತು ವಿಡಿಯೋ ಕೆಮರಾಕ್ಕಾಗಿ 8ಮೆಗಾ ಫಿಕ್ಸಲ್ ಹೈ ಕ್ವಾಲಿಟಿ ಕ್ಯಾಮರಾ ಇದೆ.
  • 5000MAH ಬ್ಯಾಟರಿ ಬ್ಯಾಕಪ್ ಹೊಂದಿದೆ.
  • 18W PD ಮೂಲಕ ಚಾರ್ಜರ್ ಮೂಲಕ ತ್ವರಿತವಾಗಿದೆ ಚಾರ್ಜ್ ಮಾಡಬಹುದು. ಈ ಚಾರ್ಜಿಂಗ್ ಮೂಲಕ ಸುದೀರ್ಘ ಕಾಲದವರೆಗೆ ಇದನ್ನು ನಾವು ಬಳಸಬಹುದು.
  • 6GB RAM ಮತ್ತು 128GB ಸ್ಟೋರೆಜ್ ಕೆಪಾಸಿಟಿ ಹೊಂದಿದೆ.
  • 8GB RAM ಮತ್ತು 256GB ಸಂಗ್ರಹಣ ಸಾಮರ್ಥ್ಯ ಹೊಂದಿದೆ.

ಬೆಲೆ ಎಷ್ಟು ಇರಲಿದೆ:

 

 

ಭಾರತೀಯ ಮಾರುಕಟ್ಟೆಗೆ ಈ Poco C65 ಸ್ಮಾರ್ಟ್ ಫೋನ್ ಕಡಿಮೆ ಬೆಲೆಗೆ ಲಭ್ಯ ಆಗಲಿದೆ ಎಂದು ಹೇಳಬಹುದು. 10 ಸಾವಿರ ಇದರ ಆರಂಭಿಕ ಬೆಲೆಯಾಗಿದ್ದು ಫೀಚರ್ಸ್ ಮೇಲೆ ಬೆಲೆ ಹೆಚ್ಚು ಕಮ್ಮಿ ಆಗಲಿದೆ. ಅದೇ ರೀತಿ ಈ Poco C65 ಸ್ಮಾರ್ಟ್ ಫೋನ್ ಸದ್ಯ ಎರಡು ಬಣ್ಣಗಳ ಅತ್ಯಾಕರ್ಷಕ ಆಯ್ಕೆ ಹೊಂದಿರುವುದನ್ನು ನಾವು ಕಾಣಬಹುದು. ನೀಲಿ ಮತ್ತು ಮ್ಯಾಟ್ ಬ್ಲ್ಯಾಕ್ (ಕಪ್ಪು) ಬಣ್ಣದಲ್ಲಿ ಲಭ್ಯ ಇರಲಿದೆ.

advertisement

Leave A Reply

Your email address will not be published.