Karnataka Times
Trending Stories, Viral News, Gossips & Everything in Kannada

Ration Transfer: ರಾಜ್ಯದಲ್ಲಿ ಅಕ್ರಮ ಪಡಿತರ ಸಾಗಾಣಿಕೆ ಮಾಡುವವರಿಗೆ ಎಚ್ಚರಿಕೆ ಕೊಟ್ಟ ಸರ್ಕಾರ!

advertisement

ರಾಜ್ಯ ಸರ್ಕಾರವು ಈಗಾಗಲೇ ರಾಜ್ಯದ ಜನರಿಗೆ ಅನೇಕ ಸೌಲಭ್ಯಗಳನ್ನು ನೀಡಿವೆ. ಅಂತಹ ಸೌಲಭ್ಯಗಳ ಪೈಕಿ ಪಡಿತರ ಸೌಲಭ್ಯ ಕೂಡ ಒಂದು. ಈಗಾಗಲೇ ರಾಜ್ಯದಲ್ಲಿ ಅನೇಕರು ಪಡಿತರ ಚೀಟಿ (Ration Card) ಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವರು ಈ ಪಡಿತರ (Ration) ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಇದೀಗ ಸಚಿವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಾದರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀವಿಲ್ಲಿ ಪಡೆದುಕೊಳ್ಳಬಹುದು.

ಅಕ್ರಮ ಸಾಗಾಣಿಕೆ ತಡೆಗೆ ರಾಜ್ಯ ಮಟ್ಟದಲ್ಲಿಯೂ ಸಮಿತಿ ರಚನೆ:

advertisement

ವಿಧಾನ ಪರಿಷತ್ ನಲ್ಲಿ ಸದಸ್ಯ ಭಾರತಿ ಶೆಟ್ಟಿ (Bharati Shetty) ಡಿ. ಎಸ್ ಅರುಣ್ (D.S Arun) ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ (K.H Muniyappa) ಅವರು, ‘ಅಕ್ರಮ ಪಡಿತರ ಸಾಗಣೆ (Illegal Ration Transfer) ಮಾಡಲಾಗುತ್ತಿದ್ದ 31 ಕೋಟಿಗೂ ಅಧಿಕ ಮೊತ್ತದ ಪಡಿತರ (Ration) ವನ್ನು ಈಗಾಗಲೇ ವಶಪಡಿಸಲಾಗಿದೆ.

 

 

ಈಗಾಗಲೇ ಕೇಸು ಹಾಕಿ ವಶಕ್ಕೆ ಪಡೆಯಲಾಗಿದ್ದು, ಪಡಿತರ ಹಂಚಿಕೆ ಮಾಡಿ ಜಪ್ತಿ ಮಾಡಿದ್ದ ವಾಹನಗಳನ್ನು ಹರಾಜು ಹಾಕುವ ಕೆಲಸವು ಆಗಿದೆ. ಅಕ್ರಮ ಸಾಗಾಣಿಕೆಯನ್ನು ತಡೆಯುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಇದರಡಿಯಲ್ಲಿ ಪ್ರತಿ ವಾರ ದಾಸ್ತಾನು ಪರಿಶೀಲನೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಸಮಿತಿ ಜೊತೆ ರಾಜ್ಯ ಮಟ್ಟದ ಸಮಿತಿ ರಚಿಸುವ ಕುರಿತು ಪರಿಶೀಲಿಸಲಾಗುತ್ತದೆ’ ಎಂದಿದ್ದಾರೆ.

advertisement

Leave A Reply

Your email address will not be published.