Karnataka Times
Trending Stories, Viral News, Gossips & Everything in Kannada

LIC ಬದಲು ಕೇಂದ್ರದ ಈ ಯೋಜನೆಗೆ ಹೆಸರು ಸಲ್ಲಿಸುತ್ತಿರುವ ಜನ! ಹಣದ ತೊಂದರೆಯೇ ಇರಲ್ಲ

advertisement

ಪ್ರತಿಯೊಬ್ಬರು ಕೂಡ ಕೆಲಸ ಮಾಡುವವರೆಗೂ ಆರ್ಥಿಕ ಸ್ವಾತಂತ್ರ್ಯವನ್ನು ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಕಂಟ್ರೋಲ್ ಮಾಡಬಹುದಾಗಿದೆ ಆದರೆ ಒಮ್ಮೆ ಅವರು ತಮ್ಮ ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆ ಅವರ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಾಮರ್ಥ್ಯವನ್ನು ಕಂಟ್ರೋಲ್ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲಿ ವಿಶೇಷವಾಗಿ ಕೆಲಸವನ್ನೇ ಅಥವಾ ಕೆಲಸದ ಆದಾಯವನ್ನು ನಂಬಿಕೊಂಡಿರುವಂತಹ ಜನರಿಗೆ ನಿವೃತ್ತಿಯ ನಂತರದ ಜೀವನ ಸಾಕಷ್ಟು ಕಷ್ಟದಾಯಕವಾಗಿರಬಹುದಾಗಿದೆ. ಇದಕ್ಕಾಗಿ ಅವರು ಇವತ್ತೇ ಸರ್ಕಾರ ಪರಿಚಯಿಸಿರುವಂತಹ ನ್ಯಾಷನಲ್ ಪೆನ್ಷನ್ ಯೋಜನೆ (National Pension Scheme) ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಖಂಡಿತವಾಗಿ ನಿವೃತ್ತಿಯ ನಂತರ ಕೂಡ ಯಾವುದೇ ರೀತಿಯಲ್ಲಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಿಲ್ಲ

WhatsApp Join Now
Telegram Join Now

National Pension Scheme:

 

Image Source: Housing

 

60 ವರ್ಷದ ನಂತರ ಒಂದು ದೃಢವಾಗಿರುವಂತಹ ಆರ್ಥಿಕ ಮೂಲವನ್ನ ಸ್ಥಾಪಿಸಿಕೊಳ್ಳುವುದಕ್ಕೆ ನೀವು ನ್ಯಾಷನಲ್ ಪೆನ್ಷನ್ ಸ್ಕೀಮ್ ಯೋಜನೆ (National Pension Scheme) ಅಡಿಯಲ್ಲಿ ಇಂದಿನಿಂದಲೇ ಹಣವನ್ನು ಹೂಡಿಕೆ ಮಾಡುವುದನ್ನ ಪ್ರಾರಂಭಿಸಿ. ಇದನ್ನ ನಿಮ್ಮ ಅಥವಾ ನಿಮ್ಮ ಹೆಂಡತಿಯ ಹೆಸರಿಗೂ ಕೂಡ ಮಾಡಿಸಬಹುದಾಗಿದೆ. ಪ್ರತಿ ತಿಂಗಳು 5,000 ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ ತಿಂಗಳಿಗೆ 45,000 ಪೆನ್ಷನ್ ಹಣವನ್ನು ಪಡೆದುಕೊಳ್ಳುವಂತಹ ಸಾಧ್ಯತೆ ಕೂಡ ಇದ್ದು 60 ವರ್ಷದ ನಂತರ ಹಣದ ವಿಚಾರಕ್ಕೆ ನೀವು ಬೇರೆಯವರ ಮೇಲೆ ಅವಲಂಬಿತವಾಗುವಂತಹ ಯಾವುದೇ ಅವಶ್ಯಕತೆ ಇಲ್ಲ ಎಂದು ಹೇಳಬಹುದು.

advertisement

ನ್ಯಾಷನಲ್ ಪೆನ್ಷನ್ ಯೋಜನೆ (National Pension Scheme) ಯ ಬಗ್ಗೆ ಹೇಳುವುದಾದರೆ 18ರಿಂದ 60 ವರ್ಷಗಳ ನಡುವೆ ಇರುವಂತಹ ಯಾವುದೇ ಭಾರತೀಯ ಕೂಡ ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನಿಗದಿತ ಹಣವನ್ನು ಹೂಡಿಕೆ ಮಾಡಿ 60 ವರ್ಷದ ನಂತರ ಅಂದರೆ ನಿವೃತ್ತಿಯ ನಂತರ ಅದರ ಒಂದು ದೊಡ್ಡ ಮೊತ್ತವನ್ನು ಪೆನ್ಷನ್ (Pension) ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರ ಬಡ್ಡಿ ದರದ ರಿಟರ್ನ್ 9 ರಿಂದ 12 ಪ್ರತಿಶತ ಆಗಿರುತ್ತದೆ. 60 ವರ್ಷದ ನಂತರ ನೀವು ಕಟ್ಟಿರುವಂತಹ ಒಟ್ಟಾರೆ ಹಣದ 60% ಹಣವನ್ನ ಒಂದೇ ಸರಿ ಲಮ್ಸಮ್ ಆಗಿ ಪಡೆದುಕೊಳ್ಳಬಹುದಾಗಿದೆ.

 

Image Source: Goodreturns

 

ಉಳಿದ 40 ಪ್ರತಿಶತ ಹಣವನ್ನು ನೀವು ನಿವೃತ್ತಿಯ ನಂತರ ವಾರ್ಷಿಕವಾಗಿ ಪೆನ್ಷನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ನ್ಯಾಷನಲ್ ಪೆನ್ಷನ್ ಸ್ಕೀಮ್ ಯೋಜನೆ (National Pension Scheme) ಯಲ್ಲಿ ಖಾತೆಯನ್ನು ನೀವು ನಿಮ್ಮ ಹೆಸರಿನಲ್ಲಿ ತೆರೆಯಬೇಕು ಎನ್ನುವುದಾಗಿ ಯಾವುದೇ ನಿಯಮವಿಲ್ಲ ನಿಮ್ಮ ಮನೆಯ ಯಾರ ಹೆಸರಿನಲ್ಲಿ ಬೇಕಾದ್ರೂ ಕೂಡ ತೆರೆಯಬಹುದು. ಖಂಡಿತವಾಗಿ ನಿವೃತ್ತಿಯ ನಂತರದ ಜೀವನವನ್ನು ಸುಗಮವಾಗಿಸಲು ಇದೊಂದು ಉತ್ತಮ ಆಯ್ಕೆಯಾಗಿದೆ.

ಒಂದು ವೇಳೆ ನೀವು ಅಥವಾ ನಿಮ್ಮ ಪತ್ನಿ 30 ವಯಸ್ಸಿನವರಾಗಿದ್ರೆ ಇಂದಿನಿಂದಲೇ ಪ್ರತಿ ತಿಂಗಳು 5000 ಹಣವನ್ನು 60 ವರ್ಷ ವಯಸ್ಸಾಗುವವರೆಗೂ ಕೂಡ ಪ್ರತಿ ತಿಂಗಳು ಕಟ್ಟುತ್ತಾ ಹೋಗಿ. 30 ವರ್ಷಗಳ ಅವಧಿಯಲ್ಲಿ ನೀವು ಒಟ್ಟಾರೆಯಾಗಿ 18 ಲಕ್ಷ ರೂಪಾಯಿಗಳ ಹೂಡಿಕೆಯನ್ನು ಯೋಜನೆಯಲ್ಲಿ ಮಾಡಿರುತ್ತೀರಿ. ಬಡ್ಡಿ ಅಥವಾ ಲಾಭದ ರೂಪದಲ್ಲಿ 96 ಲಕ್ಷ ರೂಪಾಯಿಗಳ ರಿಟರ್ನ್ ಅನ್ನು ಪಡೆದುಕೊಳ್ಳುತ್ತೀರಿ. ಒಟ್ಟಾರೆಯಾಗಿ ಸರಿಸುಮಾರು 1.14 ಕೋಟಿ ರೂಪಾಯಿ ಹಣವನ್ನು ನೀವು ಪಡೆದುಕೊಂಡಂತಾಗುತ್ತದೆ.

ಇದರಲ್ಲಿ 69 ಲಕ್ಷ ರೂಪಾಯಿ ಹಣವನ್ನು ಅರವತ್ತು ವಯಸ್ಸಿನ ನಂತರ ನೀವು ಕೂಡಲೇ ಪಡೆದುಕೊಳ್ಳಬಹುದಾಗಿದೆ ಹಾಗೂ ಉಳಿದ ಅಂದಾಜು 45 ಲಕ್ಷ ರೂಪಾಯಿ ಹಣವನ್ನು ವಾರ್ಷಿಕ ರೂಪದಲ್ಲಿ ಅಂದರೆ ತಿಂಗಳಿಗೆ 45,000 ಪೆನ್ಷನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. 80 ಸೀ ಇನ್ಕಮ್ ಟ್ಯಾಕ್ಸ್ (Income Tax) ಅಡಿಯಲ್ಲಿ ನಿಮಗೆ ವಾರ್ಷಿಕವಾಗಿ 1.5 ಲಕ್ಷಗಳ ಟ್ಯಾಕ್ಸ್ ರಿಯಾಯಿತಿ ಕೂಡ ಇದೆ.

advertisement

Leave A Reply

Your email address will not be published.