Karnataka Times
Trending Stories, Viral News, Gossips & Everything in Kannada

Post Office: ಪೋಸ್ಟ್ ಆಫೀಸ್ ನಲ್ಲಿ ಒಂದರಿಂದ ಐದು ವರ್ಷಗಳ ಹೂಡಿಕೆಗೆ ಸಿಗುವ ಆದಾಯ ಎಷ್ಟು ಗೊತ್ತಾ?

advertisement

ಪೋಸ್ಟ್ ಆಫೀಸ್ನಲ್ಲಿ ಬೇರೆ ಬೇರೆ ಉಳಿತಾಯ ಯೋಜನೆಗಳು ಲಭ್ಯ ಇವೆ. ಇತ್ತೀಚಿಗೆ ಸಮಯ ಠೇವಣಿ ಮೇಲೆ ಜನರು ಹೆಚ್ಚು ಹೂಡಿಕೆ ಮಾಡುತ್ತಿದ್ದು ಇದರಿಂದ ಅಧಿಕ ಲಾಭ ಪಡೆದುಕೊಳ್ಳಬಹುದಾಗಿದೆ.

ಸಮಯ ಠೇವಣಿ ಯೋಜನೆ!

ಪೋಸ್ಟ್ ಆಫೀಸ್ (Post Office)ನ ಸಮಯ ಠೇವಣಿ ಯೋಜನೆ ಅಥವಾ ಫಿಕ್ಸೆಡ್ ಠೇವಣಿ ಎಂದು ಕರೆಯಲ್ಪಡುವ ಉಳಿತಾಯ ಯೋಜನೆಯಲ್ಲಿ ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಿಕೊಳ್ಳಲು ಸಾಧ್ಯ. ಉಳಿತಾಯ ಯೋಜನೆಯಲ್ಲಿ ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಹಾಗೂ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು.

ಅಂಚೆ ಕಚೇರಿಯ ಸಮಯ ಠೇವಣಿ ಮೇಲೆ ಸಿಗುವ ಬಡ್ಡಿ ದರ!

ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಸಮಯ ಠೇವಣಿಯ ಮೇಲೆ ಹೂಡಿಕೆ ಮಾಡಲು ಬಯಸಿದರೆ ಒಂದು ವರ್ಷಕ್ಕೆ 6.9% ನಷ್ಟು ಬಡ್ಡಿ ಪಡೆಯಬಹುದು. ಇದು ಎರಡು ವರ್ಷದ ಹೂಡಿಕೆಗೆ 7% ಹಾಗೂ ಮೂರು ವರ್ಷದ ಹೂಡಿಕೆಗೆ 7.1% ಬಡ್ಡಿದರ ನಿಗದಿಪಡಿಸಲಾಗಿದೆ. ಇನ್ನು ಐದು ವರ್ಷಗಳ ಹೂಡಿಕೆಯ ಮೇಲೆ ವಾರ್ಷಿಕ 7.5% ನಷ್ಟು ಬಡ್ಡಿ ಪಡೆಯಬಹುದು. ಅವಧಿಗಳಲ್ಲಿ ನೀವು ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಎಷ್ಟು ಆದಾಯ ಪಡೆಯಬಹುದು ಗೊತ್ತಾ?

ಒಂದು ವರ್ಷದಲ್ಲಿ ಪಡೆಯುವ ಆದಾಯ!

advertisement

ನೀವು ಸಮಯ ಠೇವಣಿಯಲ್ಲಿ ಒಂದು ವರ್ಷದ ಅವಧಿಗೆ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 6.9% ನಷ್ಟು ಬಡ್ಡಿ ನೀಡಲಾಗುವುದು. ಗ್ರೋ ಲೆಕ್ಕಾಚಾರದ ಪ್ರಕಾರ ಈ ಯೋಜನೆ ಮೆಚುರಿಟಿ ಹಂತದಲ್ಲಿ, 1,07,081ಗಳನ್ನು ಹಿಂಪಡೆಯಬಹುದು. ಅಂದ್ರೆ ಒಂದು ಲಕ್ಷ ಠೇವಣಿಯ ಮೇಲೆ 07,081 ರೂಪಾಯಿಗಳನ್ನು ವಾರ್ಷಿಕ ಬಡ್ಡಿ ಪಡೆಯಬಹುದು.

ಎರಡು ವರ್ಷಗಳಲ್ಲಿ ಪಡೆಯಬಹುದಾದ ಆದಾಯ!

ಎರಡು ವರ್ಷಗಳ ಅವಧಿಗೆ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 7%ವಾರ್ಷಿಕ ಬಡ್ಡಿ ದರದೊಂದಿಗೆ 1,44,888 ರೂಪಾಯಿಗಳನ್ನು ಹಿಂಪಡೆಯಬಹುದು.

ಮೂರು ವರ್ಷಗಳಲ್ಲಿ ಪಡೆಯಬಹುದಾದ ಆದಾಯ!

ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ 7.1% ಬಡ್ಡಿ ದರದಲ್ಲಿ 23,508 ಬಡ್ಡಿ ಸಿಗುತ್ತದೆ. ಅಂದರೆ 1 23,508 ರೂಪಾಯಿಗಳನ್ನು ಪಡೆಯಬಹುದು.

ಐದು ವರ್ಷ ಹೂಡಿಕೆಗೆ ಸಿಗುವ ಆದಾಯ!

ಇದೆ, ಒಂದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡಿದರೆ, ಸಿಗುವ ಬಡ್ಡಿ ದರ 7.5%. ಅಂದರೆ ಒಟ್ಟಾರೆಯಾಗಿ ಐದು ವರ್ಷಕ್ಕೆ ನೀವು ಪಡೆದುಕೊಳ್ಳುವ ಆದಾಯ 1,44,995 ರೂಪಾಯಿಗಳು. ಇದರಲ್ಲಿ ಸಿಗುವ ಬಡ್ಡಿದರ 44,995. ಈ ರೀತಿ ನೀವು ಯಾವ ಅವಧಿಗೆ ಹೂಡಿಕೆ ಆರಂಭಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಆದಾಯ ನಿಗದಿಯಾಗುತ್ತದೆ.

advertisement

Leave A Reply

Your email address will not be published.