Karnataka Times
Trending Stories, Viral News, Gossips & Everything in Kannada

Fixed Deposit: ಯಾವುದೇ ಬ್ಯಾಂಕ್ ನಲ್ಲಿ FD ಮಾಡುವ ಎಲ್ಲರಿಗೂ ಹೊಸ ಸೂಚನೆ

advertisement

ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟರೆ ಒಂದಲ್ಲ ಒಂದು ಸಂದರ್ಭದಲ್ಲಿ ನಿಮಗೆ ಉಪಯೋಗಕಾರಿ ಆಗಲಿದೆ. ಹಣ ಬೇರೆ ಅಸುರಕ್ಷಿತ ಸ್ಥಳದಲ್ಲಿ ಠೇವಣಿ ಇಡುವುದಕ್ಕಿಂತಲೂ ಬ್ಯಾಂಕ್ ನಲ್ಲಿ ಇಡುವುದು ಹೆಚ್ಚು ಸೇಫ್ ಎಂದು ಹೇಳಬಹುದು. ಬ್ಯಾಂಕ್ ನಲ್ಲಿ ನೀವು Fixed Deposit ಮಾಡುವಾಗಲೂ ಕೆಲವೊಮ್ಮೆ ಅಪಾಯ ಇರುತ್ತದೆ ಹಾಗಾದರೆ ಅದು ಯಾವ ಸಂದರ್ಭದಲ್ಲಿ ಅಪಾಯ ಆಗುತ್ತದೆ ಯಾವ ತರನಾದ ಅಪಾಯ ಆಗಬಹುದು ಎಂಬ ಇತ್ಯಾದಿ ಮಾಹಿತಿಯನ್ನು ಇಂದಿನ ಲೇಖನದ ಮೂಲಕ ನಾವು ತಿಳಿಸಲಿದ್ದು ಈ ಮಾಹಿತಿ ಪೂರ್ತಿ ಓದಿ.

WhatsApp Join Now
Telegram Join Now

ಬ್ಯಾಂಕಿನಲ್ಲಿ ಸ್ಥಿರ ಠೇವಣಿ ಇಟ್ಟಾಗ ಅದು ನಮಗೆ ಹಣದ ಭದ್ರತೆ ಜೊತೆಗೆ ನಿಶ್ಚಿತ ಸ್ಥಿರ ಆದಾಯ ತಂದು ಕೊಡಲಿದೆ ಎಂದು ನಾವು ಅಂದುಕೊಳ್ಳುತ್ತೇವೆ. ಹಾಗಿದ್ದರೂ ದೀರ್ಘಾವಧಿಯ ಹಣ ನೀಡುವುದು ಖಾತರಿ ಎಂದು ಇದ್ದರೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡುವುದು ಅಪಾಯಕಾರಿ ಆಗಿರುತ್ತದೆ. ಹಾಗಾಗಿ ನೀವು Fixed Deposit ಮಾಡುವ ಮುನ್ನ ಆ ಅಪಾಯ ಎಂತಹದ್ದು ಎಂದು ಮೊದಲೇ ಅರಿತರೆ ಮುಂದೆ ಅದು ನಿಮಗೆ ಸಮಸ್ಯೆ ಆಗಲಾರದು.

ಈ ಬಗ್ಗೆ ಗಮನಿಸಿ:

 

advertisement

Image Source: IndiaTimes

 

  • ನೀವು Fixed Deposit ಗಾಗಿ ಹಣ ವ್ಯಯಿಸಿದ ಮೇಲೆ ಬಳಿಕ ಪುನಃ ಆ ಹಣ ವಾಪಾಸ್ಸು ಪಡೆಯುವಂತಿಲ್ಲ. ಒಂದು ವೇಳೆ ಪಡೆಯಬೇಕು ಎಂದು ನೀವು ಬಯಸಿದರೆ ಕೂಡ ಆ ಹಣ ವಾಪಾಸ್ಸು ಪಡೆಯಲು ಕೂಡಪ್ರಿ ಮೆಚ್ಯೂರ್ ಪೆನಾಲ್ಟಿ ಕಟ್ಟಬೇಕು. ಈ ಪೆನಾಲ್ಟಿ ರೇಟ್ ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿ ಇದೆ ಎಂದು ಹೇಳಬಹುದು.
  • ನೀವು FD ಮಾಡಬೇಕು ಎಂದು ಇದ್ದ ಬ್ಯಾಂಕ್ ಪ್ರಸ್ತುತ ಸಮಸ್ಥಿತಿ ಇದೆ ಅಥವಾ ಇಲ್ಲ ಎಂಬುದನ್ನು ಮೊದಲೇ ಗಮನಿಸಿ. ಅಂದರೆ ನೀವು ಠೇವಣಿ ಮಾಡಲು ಹೊರಟ ಬ್ಯಾಂಕ್ ಡಿ ಫಾಲ್ಟ್ ಆಗಿದ್ದರೆ ಆಗ ನಿಮ್ಮ ಠೇವಣಿಯ 5 ಲಕ್ಷದ ವರೆಗೆ ಮಾತ್ರ ಸುರಕ್ಷಿತವಾಗಿ ಇರಲಿದೆ‌. ಹಾಗಾಗಿ ಈ ಬಗ್ಗೆ ಗಮನಿಸಿ.
  • ಮಾರುಕಟ್ಟೆ ಬಡ್ಡಿದರ ಕುಸಿದರೆ ಬಡ್ಡಿ ನಮ್ಮ ಹಣದ ಮೇಲೆ ಬ್ಯಾಂಕ್ ನೀಡುವ ಪ್ರಮಾಣ ಕೂಡ ಕಡಿಮೆ ಆಗುವುದು ಸಹ ಸಮಸ್ಯೆ ಆಗಲಿದೆ. ನೀವು Fixed Deposit ಮಾಡುವಾಗ 7% ಬಡ್ಡಿದರ ಇದ್ದರೆ ಕೆಲವೆ ತಿಂಗಳಲ್ಲಿ FD 8% ಏರಿಕೆ ಆದರೆ ಅದು ನಿಮಗೆ ಯಾವ ಪ್ರಯೋಜನೆ ನೀಡಲಾದರು. ನಿಮ್ಮ Fixed Deposit ಒಂದು ವರ್ಷಕ್ಕೆ 7% ಬಡ್ಡಿದರಕ್ಕೆ ಇಡಲೇ ಬೇಕಿದ್ದು ಅನಿವಾರ್ಯ ಆಗಿದೆ.
  • ಹಣದುಬ್ಬರದ ಸ್ಥಿತಿ ಅರಿಯಬೇಕು‌. ಇತ್ತೀಚಿನ ದಿನದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚಾಗುತ್ತಲಿದ್ದು ಇದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಅನೇಕ ಬ್ಯಾಂಕ್ ಅಂತಾರಾಷ್ಟ್ರೀಯ ಷೇರು ವ್ಯವಹಾರ ಕೂಡ ಮಾಡಲಿದೆ ಜೊತೆಗೆ ಸಾಲ ಕೂಡ ನೀಡಲಿದೆ. ಸಾಲ ಮರುಪಾವತಿ ಮಾಡದಿದ್ದರೆ ಹಾಗೂ ಷೇರು ಲಾಸ್ ಆದರೆ ಆಗ ನಷ್ಟ ಆಗುವ ಸಾಧ್ಯತೆ ಇದೆ.
  • ನಿಮ್ಮ FD ಅವಧಿ ಮುಗಿದು ಬಳಿಕ ಆ ಹಣ ಮರು ಹೂಡಿಕೆ ಮಾಡಲು ಅಂದರೆ Fixed Deposit ಮಾಡಲು ನೀವು ಸೂಚಿಸುವಾಗ ಕೆಲವು ಸಮಸ್ಯೆ ಆಗಲಿದೆ. ಮರು ಹೂಡಿಕೆ ಮಾಡುವ ಕಾಲಕ್ಕೆ ಬಡ್ಡಿದರ ಏಕ ಪ್ರಕಾರವಾಗಿ ಇರಬೇಕು ಎಂಬ ಯಾವ ನಿಯಮ ಇಲ್ಲ ಹಾಗಾಗಿ ನಿಮಗೆ ಕಡಿಮೆ ಬಡ್ಡಿದರಕ್ಕೂ ಮರು ಹೂಡಿಕೆ ಮಾಡಬೇಕಾಗಿ ಕೂಡ ಬರಬಹುದು. ಆಗ ಲಾಸ್ ಆಗುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ FD ಮಾಡುವುದು ಉತ್ತಮವಾಗಿದ್ದು ನೀವು ಯಾವ ಬ್ಯಾಂಕ್ ನಲ್ಲಿ ಎಷ್ಟು ಮೊತ್ತದ ಹಣ ಸ್ಥಿರ ಠೇವಣಿ ಮಾಡುತ್ತೀರಿ ಎಂಬುದು ಮುಖ್ಯ. ಹಾಗಾಗಿ Fixed Deposit ಮಾಡುವಾಗ ಅನೇಕ ವಿಚಾರ ಗಮನಿಸಬೇಕು ಇಲ್ಲವಾದಲ್ಲಿ ಅದು ನಿಮಗೆ ಸಮಸ್ಯೆ ಆಗುವ ಸಾಧ್ಯತೆ ಕೂಡ ಇರಲಿದೆ.

advertisement

Leave A Reply

Your email address will not be published.