Karnataka Times
Trending Stories, Viral News, Gossips & Everything in Kannada

Fixed Deposit: ಬ್ಯಾಂಕಿನಲ್ಲಿ ಎಷ್ಟು FD ಇದ್ರೆ ಮಾತ್ರ ಸೇಫ್? ಇಲ್ಲಿದೆ ಯಾರಿಗೂ ಗೊತ್ತಿರದ ರೂಲ್ಸ್! ರಿಸರ್ವ್ ಬ್ಯಾಂಕ್ ಆದೇಶ

advertisement

ನಾವೆಲ್ಲರೂ ಪ್ರತಿಯೊಬ್ಬರೂ ಕೂಡ ಕೆಲಸಕ್ಕೆ ಹೋಗುವುದಕ್ಕೆ ಪ್ರಾರಂಭ ಮಾಡಿದ್ಮೇಲೆ ಬ್ಯಾಂಕಿನಲ್ಲಿ ಒಂದು ಸೇವಿಂಗ್ ಖಾತೆಯನ್ನು (Saving Account) ತೆರೆಯುತ್ತೇವೆ. ಇಲ್ಲವಾದಲ್ಲಿ ನಾವು ಕೆಲಸ ಮಾಡುವಂತಹ ಕಂಪನಿಯ ನಮ್ಮ ಹೆಸರಿನಲ್ಲಿ ಒಂದು ಸ್ಯಾಲರಿ ಅಕೌಂಟ್ ಓಪನ್ ಮಾಡಿ ಅದಕ್ಕೆ ಹಣವನ್ನು ಕ್ರೆಡಿಟ್ ಮಾಡುತ್ತದೆ. ಕೆಲಸ ಮಾಡಿ ಸಂಬಳವನ್ನು ದುಡಿಯೋದಕ್ಕೆ ಪ್ರಾರಂಭ ಮಾಡಿದ್ಮೇಲೆ ಪ್ರತಿಯೊಬ್ಬರಿಗೂ ಕೂಡ ನಮ್ಮ ಭವಿಷ್ಯದ ನಿಟ್ಟಿನಲ್ಲಿ ಹೂಡಿಕೆ ಮಾಡಿ ಅಥವಾ ಉಳಿತಾಯ ಮಾಡಿ ಇಡುವುದು ಉತ್ತಮ ಎಂಬ ಅಭಿಪ್ರಾಯ ಮಾಡುವುದಕ್ಕೆ ಪ್ರಾರಂಭವಾಗುತ್ತದೆ.

ಅದರಲ್ಲೂ ವಿಶೇಷವಾಗಿ ದೀರ್ಘಕಾಲದ ಹೂಡಿಕೆ ಬಗ್ಗೆ ಮಾತನಾಡುವುದಾದರೆ ಒಂದು ದೊಡ್ಡ ಮೊತ್ತದ ಹಣವನ್ನು ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಇಟ್ಟು ಮುಂದಿನ ಭವಿಷ್ಯದಲ್ಲಿ ಬೇಕಾದಾಗ ಅದನ್ನು ಪಡೆದುಕೊಳ್ಳಬಹುದು ಎನ್ನುವಂತಹ ಯೋಚನೆಯಲ್ಲಿ ಪ್ರತಿಯೊಬ್ಬರು ಇದ್ದಾರೆ. ಆದರೆ ಫಿಕ್ಸಿಡ್ ಡೆಪಾಸಿಟ್ ನಲ್ಲಿ ಹಣವನ್ನು ಹೂಡಿಕೆ ಮಾಡುವವರು ಕೂಡ ಇವತ್ತಿನ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವಂತಹ ಮಾಹಿತಿ ಬಗ್ಗೆ ಸ್ವಲ್ಪ ಮಟ್ಟಿಗೆ ಗಮನವಹಿಸಲೇ ಬೇಕಾಗುತ್ತದೆ.

ಬ್ಯಾಂಕಿನಲ್ಲಿ ಎಷ್ಟು ಹಣವನ್ನು ಇಡೋದು ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಸೇಫ್ ಅನ್ನೋದ್ರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. ಹೀಗಾಗಿ ಇವತ್ತು ಅದರ ಬಗ್ಗೆ ನಿಮಗೆ ಎಚ್ಚರಿಕೆಯ ಕರೆಗಂಟೆ ಅನ್ನೋ ರೀತಿಯಲ್ಲಿ ಎಷ್ಟು ಹಣವನ್ನು ಇಟ್ರೆ ಸೇಫ್ ಆಗಿರುತ್ತದೆ ಎನ್ನುವಂತಹ ಮಾಹಿತಿ ನೀಡಲು ಹೊರಟಿದ್ದೇವೆ.

ಫಿಕ್ಸೆಡ್ ಡೆಪಾಸಿಟ್ ನಲ್ಲಿ ಎಷ್ಟು ಹಣವನ್ನು ಇಟ್ರೆ ಸೇಫ್?

 

Image Source: The New Indian Express

 

ಪ್ರತಿಯೊಬ್ಬರಿಗೂ ಕೂಡ ತಾವು ಕಷ್ಟಪಟ್ಟು ದುಡಿದಿರುವಂತಹ ಹಣವನ್ನು ಒಳ್ಳೆಯ ಕೆಲಸಕ್ಕಾಗಿ ನಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಖರ್ಚು ಮಾಡಬೇಕು ಎನ್ನುವಂತ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ಅವರು ಮಾಡುವಂತಹ ತಪ್ಪು ನಿರ್ಧಾರಗಳಿಂದ ಅಥವಾ ತಿಳಿಯದೆ ಮಾಡಿರುವ ನಿರ್ಧಾರಗಳಿಂದಾಗಿ ಅವರು ತಮ್ಮ ಹಣವನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ.

advertisement

ಅದೇ ರೀತಿಯಲ್ಲಿ ಇವತ್ತಿನ ಈ ಲೇಖನದ ಮೂಲಕ ಒಂದು ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಎಷ್ಟು ಹಣವನ್ನು ಇಟ್ರೆ ಸೂಕ್ತ ಅಥವಾ ಸೇಫ್ ಎಂಬುದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

ಇದಕ್ಕಿಂತ ಜಾಸ್ತಿ ಹಣ ಇಡೋದಕ್ಕೆ ಹೋಗ್ಬೇಡಿ:

 

Image Source: The Hindu Business Line

 

ಕೆಲವರು ಫಿಕ್ಸೆಡ್ ಡೆಪಾಸಿಟ್ (Fixed Deposit) ದೀರ್ಘಕಾಲಿಕ ಹೂಡಿಕೆ ಆಗಿರುವುದರಿಂದಾಗಿ ಎಷ್ಟು ಬೇಕಾದರೂ ಹಣ ಇರಬಹುದು ಅನ್ನೋದಾಗಿ ತಿಳಿದು ಒಂದೊಂದು ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ನಲ್ಲಿ 25 ರಿಂದ 30 ಲಕ್ಷ ರೂಪಾಯಿಗಳ ಹಣವನ್ನು ಇಡೋದನ್ನ ಕೂಡ ನಾವು ನೋಡಿರುತ್ತೇವೆ. ಆದರೆ ಹಣ ಇದೆ ಎಂದು ಮಾತ್ರಕ್ಕೆ ನೀವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದೇ ಬ್ಯಾಂಕಿನಲ್ಲಿ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ.

ಯಾಕೆಂದರೆ ಅದಕ್ಕೊಂದು ನಿಯಮ ಕೂಡ ಇದೆ. ಅದೇನೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದ DICGC ನಿಯಮಗಳ ಪ್ರಕಾರ ಯಾವುದೇ ಬ್ಯಾಂಕ್ ನಷ್ಟದಲ್ಲಿ ಮುಳುಗಿ ಹೋದರು ಕೂಡ ಅದರಲ್ಲಿ ಹಣವನ್ನು ಠೇವಣಿ ಮಾಡಿ ಇಟ್ಟಿರುವಂತಹ ಗ್ರಾಹಕರಿಗೆ 5 ಲಕ್ಷ ರೂಪಾಯಿಗಳ ಇನ್ಸೂರೆನ್ಸ್ ಪರಿಹಾರವನ್ನು ನೀಡಲಾಗುತ್ತದೆ.

ಅಂದರೆ ಉದಾಹರಣೆಗೆ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಹೂಡಿಕೆ ಮಾಡಿ ಇಟ್ಟಿದ್ದರೆ ಅಥವಾ ಯಾವುದೇ ರೀತಿಯ ಹಣವನ್ನು ಠೇವಣಿ ಮಾಡಿ ಇಟ್ಟಿದ್ದರೆ ಹಾಗೂ ನಿಮ್ಮ ಬ್ಯಾಂಕ್ ಮುಳುಗಿ ಹೋದರೆ ಆ ಸಂದರ್ಭದಲ್ಲಿ ಈ ನಿಯಮಗಳ ಮೂಲಕ ಕೇವಲ ನಿಮಗೆ 5 ಲಕ್ಷ ರೂಪಾಯಿಗಳ ರಿಕವರಿಯನ್ನು ಮಾತ್ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಡಿಕೊಡಲು ಸಾಧ್ಯವಿದೆ.

ಹೀಗಾಗಿ ಈ ಸಂದರ್ಭದಲ್ಲಿ ನೀವು ಬುದ್ಧಿವಂತಿಗೆ ತೋರಿಸಬೇಕಾಗಿರುವುದು ಎಲ್ಲಿ ಎಂದರೆ ಒಂದೇ ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ಬದಲು, ಬೇರೆ ಬೇರೆ ಬ್ಯಾಂಕುಗಳಲ್ಲಿ 5 ಲಕ್ಷಗಳ ವರೆಗೆ ಮ್ಯಾಕ್ಸಿಮಮ್ ಹಣವನ್ನು ಹೂಡಿಕೆ ಮಾಡಿ ಹಾಗೂ ಈ ರೀತಿಯ ಅಪಾಯಗಳಲ್ಲಿ ನೀವು ನಿಮ್ಮ ಹಣವನ್ನು ಕಾಪಾಡಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.