Karnataka Times
Trending Stories, Viral News, Gossips & Everything in Kannada

LIC Policy: ಎಷ್ಟೇ ಹಣದ LIC ಪಾಲಿಸಿ ಮಾಡಿಸಿರುವ ಎಲ್ಲರಿಗೂ ಸಿಹಿಸುದ್ದಿ! ಬಡವ ಶ್ರೀಮಂತ ಎನ್ನದೇ ಬ್ಯಾಂಕ್ ನಿರ್ಧಾರ

advertisement

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ವಸ್ತು ಅಥವಾ ಕೆಲವೊಂದು ವಿಚಾರಗಳಿಗಾಗಿ ಖರ್ಚು ಮಾಡಬೇಕಾದಂತ ಪರಿಸ್ಥಿತಿ ಬರುತ್ತದೆ. ಆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಸಾಲ ಸೌಲಭ್ಯದ ಮೊರೆ ಹೋಗುತ್ತಾರೆ. ಸಂಬಂಧಿಕರು ಹಾಗೂ ಸ್ನೇಹಿತರು ಎಷ್ಟೇ ಆತ್ಮೀಯರಾಗಿದ್ದರು ಕೂಡ ಸಾಲವನ್ನು ಪಡೆದುಕೊಳ್ಳುವ ವಿಚಾರಕ್ಕೆ ಬಂದರೆ ಅವರು ಸಾಲವನ್ನು ಕೂಡಲೆ ಕೊಡೋದಕ್ಕೆ ಹೋಗೋದಿಲ್ಲ. ಕೆಲವೊಮ್ಮೆ ಹಣ ಇದ್ರೂ ಕೂಡ ಸಾಲವನ್ನು ಕೊಡುವುದಿಲ್ಲ. ಆ ಸಂದರ್ಭದಲ್ಲಿ ಪ್ರತಿಯೊಬ್ಬರು ಆಯ್ಕೆ ಮಾಡುವಂತಹ ವಿಧಾನ ಅಂದ್ರೆ ಅದು ಪರ್ಸನಲ್ ಲೋನ್ (Personal Loan).

ಪರ್ಸನಲ್ ಲೋನ್ (Personal Loan) ಅನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬ್ಯಾಂಕುಗಳು ಗ್ರಾಹಕರಿಗೆ ನೀಡುತ್ತಿವೆ ನಿಜ ಆದರೆ ಇದು ಹಸುರಕ್ಷಿತ ಲೋನ್ (Loan) ಆಗಿರುವ ಕಾರಣದಿಂದಾಗಿ ಇದರ ಮೇಲೆ ಬಡ್ಡಿ ದರ ಕೂಡ ಸಾಕಷ್ಟು ಹೆಚ್ಚಾಗಿರುತ್ತದೆ ಅನ್ನೋದನ್ನ ನೀವೆಲ್ಲರೂ ಗಮನಿಸಬೇಕಾಗಿರುತ್ತದೆ. ಹೀಗಾಗಿ ಈ ಉಪಾಯಕ್ಕೆ ಪರ್ಯಾಯವಾಗಿರುವಂತಹ ಮತ್ತೊಂದು ಉಪಯುಕ್ತ ಉಪಾಯವನ್ನ ಇವತ್ತಿನ ಲೇಖನದಲ್ಲಿ ನಿಮಗೆ ನೀಡುವುದಕ್ಕೆ ಹೊರಟಿದ್ದು ಒಂದು ವೇಳೆ ನಿಮಗೂ ಕೂಡ ಪರ್ಸನಲ್ ಲೋನ್ ಅಗತ್ಯತೆ ಇದ್ರೆ ತಪ್ಪದೆ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವಂತಹ ಉಪಾಯವನ್ನ ಫಾಲೋ ಮಾಡಿ. ನಿಮಗೂ ಕೂಡ ಖಂಡಿತವಾಗಿ ಇದು ಉಪಯುಕ್ತಕರವಾಗಿರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಮನೆಯಲ್ಲಿ ಇದ್ದರೆ ಎಲ್ಐಸಿ ಪಾಲಿಸಿ ಈ ರೀತಿ ಮಾಡಿ:

 

Image Source: Navi

 

ಒಂದು ವೇಳೆ ನಮ್ಮ ಮನೆಯಲ್ಲಿ ಪೋಷಕರು ಇದ್ರೆ ಮಕ್ಕಳ ಹೆಸರಿನಲ್ಲಿ ಎಲ್ಐಸಿ ಪಾಲಿಸಿ (LIC Policy) ಮಾಡೋದು ಸರ್ವೇಸಾಮಾನ್ಯ. ಇಲ್ಲವೇ ನಾವಾದ್ರೂ ಕೂಡ ದುಡಿಯೋದಕ್ಕೆ ಪ್ರಾರಂಭ ಮಾಡಿದ್ಮೇಲೆ ಎಲ್ಐಸಿ ಪಾಲಿಸಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಅದನ್ನು ಕೂಡ ಒಂದು ರೀತಿಯ ಉಳಿತಾಯ ಎನ್ನುವ ನಿಟ್ಟಿನಲ್ಲಿ ನೋಡುತ್ತೇವೆ.

advertisement

ಆದರೆ ನಿಮಗೆ ಹಣದ ಅಗತ್ಯತೆ ಇರುವ ಸಂದರ್ಭದಲ್ಲಿ ಎಲ್ಐಸಿ (LIC) ಕೂಡ ನಿಮ್ಮ ಸಹಾಯಕ್ಕೆ ಬರುತ್ತದೆ ಅನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಕ್ಕೆ ಸಾಧ್ಯನೇ ಇಲ್ಲ. ಇವತ್ತಿನ ಈ ಲೇಖನದ ಮೂಲಕ ಎಲ್ಐಸಿ ಕೂಡ ಯಾವ ರೀತಿಯಲ್ಲಿ ನಿಮಗೆ ಪರ್ಸನಲ್ ಲೋನ್ ಬದಲಾಗಿ ಸಹಾಯಕ್ಕೆ ಬರುತ್ತದೆ ಅನ್ನೋದನ್ನ ತಿಳಿಸುತ್ತೇವೆ ಬನ್ನಿ.

ಪರ್ಸನಲ್ ಲೋನ್ ಬದಲು ಎಲ್ಐಸಿ ಲೋನ್ ತೆಗೆದುಕೊಳ್ಳಿ:

 

Image Source: Newsdrum

 

ನೀವು ಯಾವುದೇ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ (Personal Loan) ತೆಗೆದುಕೊಳ್ಳುವುದಕ್ಕೆ ಹೋದರೆ ಅದರ ಬಡ್ಡಿದರ ವಾರ್ಷಿಕ 14 ರಿಂದ 15% ಇರುತ್ತದೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರಬಹುದು. ಅಷ್ಟರ ಮಟ್ಟಿಗೆ ಬಡ್ಡಿಯನ್ನು ಕಟ್ಟಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ನೀವು ಈಗಾಗಲೇ ನೀವು ಕಟ್ಟುತ್ತಿರುವಂತಹ ಎಲ್ಐಸಿ (LIC) ಮೂಲಕವೇ ಲೋನ್ ಪಡೆದುಕೊಳ್ಳಬಹುದಾದಂತಹ ಅದ್ಭುತ ಅವಕಾಶ ಇದೆ.

ಹೌದು ಕೇವಲ ಒಂಬತ್ತು ರಿಂದ 10 ಪ್ರತಿಶತ ಬಡ್ಡಿ ದರದಲ್ಲಿ ಖುದ್ದಾಗಿ ಎಲ್ಐಸಿ (LIC) ಕಂಪನಿ ತನ್ನ ಗ್ರಾಹಕರಿಗೆ ಲೋನ್ ನೀಡುವುದಕ್ಕೆ ಹೊರಟಿದೆ ಇದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಈಗಾಗಲೇ ನೀವು ನಿಮ್ಮ ಎಲ್ಐಸಿ ಪಾಲಿಸಿ (LIC Policy) ಯಲ್ಲಿ ಕಟ್ಟಿರುವಂತಹ ಹಣದ ಎಂಬತ್ತರಿಂದ 90 ಪ್ರತಿಶತ ಹಣವನ್ನು ಲೋನ್ ರೂಪದಲ್ಲಿ ನೀವು ಕೇಳಬಹುದಾಗಿದೆ.

ಈ ಮೂಲಕ ಎಲ್ಐಸಿಗೆ ಪಾಲಿಸಿಯನ್ನು ಕೊಟ್ಟರೆ ಸಾಕು ಅದರ ಬದಲಾಗಿ ನಿಮಗೆ ಎಲ್ಐಸಿ ಲೋನ್ ನೀಡುತ್ತದೆ. ಇದಕ್ಕಾಗಿ ನೀವು ಯಾವುದೇ ಬ್ಯಾಂಕಿಗೆ ಹೋಗಬೇಕಾದ ಅಗತ್ಯವಿರುವುದಿಲ್ಲ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕವೇ ಪರ್ಸನಲ್ ಪಡೆದುಕೊಳ್ಳುವುದಕ್ಕಿಂತ ನಿಮ್ಮ ಎಲ್ಐಸಿ ಮೂಲಕವೇ ಅತ್ಯಂತ ಕಡಿಮೆ ಬಡ್ಡಿಗೆ ಲೋನ್ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.