SBI: ಸ್ಟೇಟ್ ಬ್ಯಾಂಕ್ ನಲ್ಲಿ FD ಇಡುವವರಿಗೆ ಬಂಪರ್ ಸಿಹಿಸುದ್ದಿ

advertisement
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ನಾಗರಿಕರಿಗೆ ವಿಶೇಷವಾದ ಹಬ್ಬದ ಗಿಫ್ಟ್ ನೀಡಿದೆ. ಈಗಾಗಲೇ ಎಸ್ ಬಿ ಐ (SBI) ನ ಬಹಳ ಪ್ರಮುಖವಾದ ಹಾಗೂ ಫೇಮಸ್ ಆಗಿದ್ದ ವಿ ಕೇರ್ ಎಫ್ ಡಿ ಯೋಜನೆ (WeCare FD Scheme) ಯನ್ನು ಸದ್ಯದಲ್ಲಿಯೇ ಮುಕ್ತಾಯಗೊಳಿಸುವುದಾಗಿ ತಿಳಿಸಿತ್ತು ಆದರೆ ಈಗ ಈ ಯೋಜನೆಯ ಗಡುವು ವಿಸ್ತರಣೆ ಮಾಡಲಾಗಿದ್ದು ಹೆಚ್ಚಿನ ಬಡ್ಡಿಯನ್ನು ಕೂಡ ನೀಡಲಾಗುತ್ತಿದೆ.
SBI WeCare FD Scheme:
ಎಸ್ ಬಿ ಐ ನ ವಿ ಕೇರ್ (SBI WeCare) ಎಫ್ ಡಿ ಯೋಜನೆ ವಿಶೇಷವಾಗಿ ಹಿರಿಯ ನಾಗರಿಕರಿಗೆ ಉತ್ತಮ ಆರ್ಥಿಕ ಸೌಲಭ್ಯ ಒದಗಿಸಲು ಆರಂಭವಾಗಿರುವ ಯೋಜನೆಯಾಗಿದೆ. ಇದರಲ್ಲಿ ವಾರ್ಷಿಕ 7.50% ಬಡ್ಡಿ ದರದಲ್ಲಿ 5ರಿಂದ 10 ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಯೋಜನೆ ಈಗಾಗಲೇ ಮುಗಿದಿದೆ ಎಂದು ಭಾವಿಸಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ.
WeCare ಯೋಜನೆ ವಿಸ್ತರಣೆ:
advertisement
ಹಿರಿಯ ನಾಗರಿಕರಿಗೆ ಹೆಚ್ಚು ಲಾಭ ನೀಡುವಂತಹ ವೀ ಕೆರ್ ಎಫ್ ಡಿ ಯೋಜನೆ (WeCare FD Scheme) ಯನ್ನು ಎಸ್ ಬಿ ಐ (SBI) ಮಾರ್ಚ್ 31 2024ರ ವರೆಗೆ ವಿಸ್ತರಣೆ ಮಾಡಿದೆ. ಹಾಗಾಗಿ ಇನ್ನೂ ಐದು ತಿಂಗಳ ಹೆಚ್ಚುವರಿ ಅವಕಾಶ ನೀಡಲಾಗಿದ್ದು ಹಿರಿಯ ನಾಗರಿಕರು ಇಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು.
WeCare ಸುಲಭವಾಗಿ ಹೂಡಿಕೆ ಯೋಜನೆ:
ಸಾಮಾನ್ಯವಾಗಿ ಹೂಡಿಕೆ ವಿಚಾರಕ್ಕೆ ಬಂದರೆ ಹಿರಿಯ ನಾಗರಿಕರು ಹೆಚ್ಚು ಅಪಾಯವನ್ನು ಎದುರಿಸಲು ಸಿದ್ಧರಿರುವುದಿಲ್ಲ, ಹಾಗಾಗಿ ದೀರ್ಘಕಾಲದ ಎಫ್ ಡಿ (FD) ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಇದರಿಂದ ಅತ್ಯುತ್ತಮವಾದಂತಹ ಆದಾಯವನ್ನು ಪಡೆದುಕೊಳ್ಳಬಹುದು. ಎಸ್ ಬಿ ಐ ನ ವಿ ಕೇರ್ (SBI WeCare) ಹೂಡಿಕೆ ಯೋಜನೆಯನ್ನು ವಿಸ್ತರಿಸಲಾಗಿದ್ದು, 5 ವರ್ಷ ಹಾಗೂ 10 ವರ್ಷಗಳಿಗೆ ಹೂಡಿಕೆ ಮಾಡಬಹುದು ಇದೀಗ ಹಿರಿಯ ನಾಗರಿಕರಿಗೆ 0.50% ನಷ್ಟು ಹೆಚ್ಚುವರಿ ಬಡ್ಡಿಯನ್ನು ಕೂಡ ಘೋಷಿಸಲಾಗಿದೆ.
SBI ನ ಸಾಮಾನ್ಯ ಎಫ್ ಡಿ ಬಡ್ಡಿ ದರ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ನಿಯಮಿತವಾಗಿ ಬಡ್ಡಿ ದರ ಏಳರಿಂದ ಹತ್ತು ವರ್ಷಗಳ ಅವಧಿಯ ಎಫ್ಡಿ ಮೇಲೆ ಬಡ್ಡಿದರ 3.50% ನಿಂದ 7.50%ವರೆಗೆ ಇರುತ್ತದೆ. ಆದಾಯ ತೆರಿಗೆ ಇಲಾಖೆಯ ರೂಲ್ಸ್ ಪ್ರಕಾರ ಟಿಡಿಎಸ್(TDS) ಕಡಿತಗೊಳಿಸಲಾಗುತ್ತದೆ. ಆದರೆ ಹೂಡಿಕೆದಾರರು ಫಾರ್ಮ್ 15 ಎಚ್/ 15 ಜಿ (Form 15H/15G) ಸಲ್ಲಿಕೆಯ ಮೂಲಕ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಕೋವಿಡ್ 19 ಸಮಯದಲ್ಲಿ ಹಿರಿಯ ನಾಗರಿಕರ ಆರ್ಥಿಕ ಭವಿಷ್ಯಕ್ಕಾಗಿ ವಿ ಕೇರ್ ವಿಶೇಷ ಎಫ್ ಡಿ ಯೋಜನೆಯನ್ನು ಉತ್ತಮ ಬಡ್ಡಿ ದರದೊಂದಿಗೆ ಆರಂಭಿಸಲಾಗಿದ್ದು ಹಿರಿಯ ನಾಗರಿಕರು ಇನ್ನೂ ಮುಂದಿನ ನಾಲ್ಕು ತಿಂಗಳ ಒಳಗೆ ಹೂಡಿಕೆ ಮಾಡಬಹುದು.
Advertisement