Mohammed Shami: ವಿಶ್ವಕಪ್ ಸೋತ ಬಳಿಕ ಶಮಿ ಮಾಜಿ ಪತ್ನಿ ರೀಲ್ಸ್ ವೈರಲ್, ಕಿಡಿಕಾರಿದ ನೆಟ್ಟಿಗರು.
Mohammed Shami Wife Hasin Jahan Reel Video Viral

advertisement
ವಿಶ್ವಕಪ್ ಈ ಸಲ ಖಂಡಿತಾ ಭಾರತದ ಪಾಲಾಗುತ್ತದೆ ಎಂದು ಕಾಯುತ್ತಿದ್ದ ಜನರಿಗೆ ಫೈನಲ್ ನಲ್ಲಿ ದೊಡ್ಡ ಶಾಕ್ ಎದುರಾಯಿತು. ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಮಾತ್ರ ಭಾರತಕ್ಕೆ ನುಂಗಲಾರದ ತುತ್ತಾಗಿದೆ ಎಂದರೂ ತಪ್ಪಾಗದು. ಬರೋಬ್ಬರಿ 10 ಮ್ಯಾಚ್ ಗೆದ್ದು ಫೈನಲ್ ನಲ್ಲಿ ಟೀಂ ಇಂಡಿಯಾ ಎಡವಿದ್ದು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆಯ ಕಾರ್ಮೋಡ ಕವಿದಂತಾಗಿತ್ತು. ಟೀಂ ಇಂಡಿಯಾ ಸೋತ ಬೆನ್ನಲ್ಲೆ ಈ ಬಗ್ಗೆ ಹಲವು ವೀಡಿಯೋ ಫೋಟೋ ಶೇರ್ ಆಗಿದ್ದು ಎಲ್ಲರೂ ಭಾರತ ಸೋತರು ಗುಡ್ ಲಕ್ ಎಂದು ಭಾರತವನ್ನು ಸಪೋರ್ಟ್ ಮಾಡುತ್ತಿದ್ದರು.
ವೈರಲ್ ಆಯ್ತು ಈ ವೀಡಿಯೋ
ಈ ನಿಟ್ಟಿನಲ್ಲಿ ಕ್ರಿಕೆಟ್ ಆಟಗಾರರಿಗೆ ಸಪೋರ್ಟ್ ಸದಾ ಇದ್ದೇ ಇದೆ ಎನ್ನಬಹುದು. ಆದರೆ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ (Mohammed Shami) ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ (Hasin Jahan) ಅವರು ವಿಶ್ವಕಪ್ ನ ಬಗ್ಗೆ ಹೇಳಿರುವ ಹೇಳಿಕೆ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು ಸಾಕಷ್ಟು ಜನ ಈ ವೀಡಿಯೋ ಬಗ್ಗೆ ತಕರಾರು ಎತ್ತಿದ್ದಾರೆ. ಶಮಿ ವೈಯಕ್ತಿಕ ಬದುಕಿನ ಪ್ರಶ್ನೆ ಇಲ್ಲಿ ಬರೊಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ ಹಾಗಾದರೆ ಆ ವೀಡಿಯೋದಲ್ಲಿ ಏನಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿತ್ತು ಆ ವೀಡಿಯೋದಲ್ಲಿ
ಹಸೀನ್ ಜಹಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಸಾಕಷ್ಟು ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ರೀಲ್ಸ್ ಒಂದನ್ನು ಮಾಡಿದ್ದು ಅದರಲ್ಲಿ ಬ್ಯಾಗ್ರೌಂಡ್ ವಾಯ್ಸ್ ಇರುವುದನ್ನು ಕಾಣಬಹುದು. ಈ ಒಂದು ರೀಲ್ಸ್ ಅನ್ನು ತಮ್ಮ ಇನ್ಟ್ರಾಗ್ರಾಂ ಪ್ರೊಫೈಲ್ ನಲ್ಲಿ ಅಪ್ಲೋಡ್ ಮಾಡಿದ್ದು ಅದರಲ್ಲಿ ಅವರು ಮಾತನಾಡದೆ ಸುಮ್ಮನೇ ಕೂತಿರುವ ವಿಡಿಯೋ ಹಾಕಿದ್ದಾರೆ. ಆ ಬ್ಯಾಗ್ರೌಂಡ್ ವಾಯ್ಸ್ ನಲ್ಲಿ ಬಾಲಿವುಡ್ ಡೈಲಾಗ್ ಇರುವುದು ಕಾಣಬಹುದು. ಕೊನೆಯಲ್ಲಿ ಗೆಲುವು ಒಳ್ಳೆಯ ಹೃದಯದವರಿಗೆ ಸೇರಿದೆ ಎಂದು ಇದೆ. ಇದನ್ನು ಆಕೆ ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂದು ತಿಳಿಯದಿದ್ದರೂ ಶಮಿ ಸೋತಿದ್ದಕ್ಕೆ ಪರೋಕ್ಷವಾಗಿ ಈ ರೀಲ್ಸ್ ನೀಡಿದ್ದು ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
advertisement
View this post on Instagram
ಈ ಹಿಂದೆ ತಮ್ಮ ಮಾಜಿ ಪತಿಯ ವಿರುದ್ಧ ವಾಕ್ ದಾಳಿ ಮಾಡಿದ್ದಾರೆ. ಶಮಿ ಅವರು ಭಾರತದ ವೇಗಿ ಆಟಗಾರನಾಗಿ ಉತ್ತಮ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು ಆದರೆ ಅವರು ನಿಜವಾಗಿ ಉತ್ತಮ ವ್ಯಕ್ತಿ ಆಗಿದ್ದರೆ ನಾವು ಉತ್ತಮ ಜೀವನ ನಡೆಸಬೇಕಿತ್ತು. ನನ್ನ ಮಗಳು ನಾನು ಇವರೊಂದಿಗೆ ಖುಷಿಯಲ್ಲಿ ಇರುವ ಕ್ಷಣ, ಸಂತೋಷದ ಜೀವನಕ್ಕೆ ಸಾಕ್ಷಿಯಾಗುತ್ತಿತ್ತು. ಆಟಗಾರನಾಗಿ ಉತ್ತಮವಾದರೆ ಸಾಲದು ಉತ್ತಮ ಪತಿ ಹಾಗೂ ತಂದೆಯಾಗಿದ್ದರೆ ಸಿಗುವ ಗೌರವ ದುಪ್ಪಟ್ಟು ಆಗುತ್ತಿತ್ತು ಎಂದು ಹೇಳಿಕೆ ಸಹ ನೀಡಿದ್ದರು.
ಬೆಸ್ಟ್ ಆಟಗಾರ
ಮೊಹಮದ್ ಶಮಿ ಅವರು ಈ ಬಾರಿ ಆಟದಲ್ಲಿ ಉತ್ತಮ ಎಫರ್ಟ್ ನೀಡಿದ್ದಾರೆ. 7ಪಂದ್ಯದಲ್ಲಿ 24ವಿಕೆಟ್ ಪಡೆದ ಇವರು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಸೋಲು ಗೆಲುವು ಸಾಮಾನ್ಯವಾಗಿ ಇದ್ದರೂ ಮೊನ್ನೆ ನಡೆದ ಪಂದ್ಯದಲ್ಲಿ ಮಾತ್ರ ಭಾರತದ ಸೋಲು ಅನಿರೀಕ್ಷಿತ ಎನ್ನಬಹುದು. ಆದರೂ ಪ್ರಧಾನಿ ಮೋದಿ ಸೇರಿದಂತೆ ಈಡೀ ಭಾರತವೇ ಟೀಂ ಇಂಡಿಯಾ ಪರ ಧ್ವನಿಯಾದದ್ದು ನಮ್ಮ ಔದಾರ್ಯ ಗುಣ ಎಂದರೂ ತಪ್ಪಾಗದು.
Advertisement