Karnataka Times
Trending Stories, Viral News, Gossips & Everything in Kannada

Horoscope: ಒಂದು ವರ್ಷದ ವರೆಗೆ ಈ ಐದು ರಾಶಿಯವರಿಗೆ ಅದೃಷ್ಟ ಫಲ ಸಿಗಲಿದೆ.

advertisement

ಜೀವನದಲ್ಲಿ ಸುಖಕರ ಬದುಕನ್ನು ಹೆಚ್ಚಿನವರು ಬಯಸುತ್ತಾರೆ. ಮುಂದಿನ ಜೀವನ ಸುಗಮವಾಗಿರಬೇಕು. ತಮ್ಮ ಕನಸುಗಳೆಲ್ಲ ಈಡೇರ ಬೇಕು ಎಂಬ ಆಸೆ ಪ್ರತಿಯೊಬ್ಬರದ್ದು ಆಗಿರುತ್ತದೆ.ಅದೇ ರೀತಿ ತಮ್ಮ ಬದುಕಿನ ಶುಭ ವಿಚಾರಗಳು, ಅದೃಷ್ಟದ ಸುದ್ದಿ ಇತ್ಯಾದಿ ತಿಳಿಯುದೇ ನಮ್ಮ ರಾಶಿ ಭವಿಷ್ಯದ ಮೂಲಕ. ರಾಶಿ ಭವಿಷ್ಯ (Horoscope) ಅಂದಾಗ ಯಾವ ಸಮಯಕ್ಕೆ ಏನು ಮಾಡಬೇಕು, ಯಾವಾಗ ಶುಭ ಫಲ ಇದೆ. ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಇತ್ಯಾದಿ ಮಾಹಿತಿ ತಿಳಿದು ಕೊಳ್ಳುವುದು ಸಾಮಾನ್ಯ ವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಜನರು ಹೆಚ್ಚಾಗಿ ನಂಬಿಕೆ ಇಟ್ಟುಕೊಂಡಿರುತ್ತಾರೆ. ಹಾಗಾಗೀ ಜೀವನದಲ್ಲಿ ಏನೇ ಏಳು ಬೀಳು ಗಳಿದ್ದರೂ ಪರಿಹಾರ ಇರುವುದೂ ಕೂಡ ಈ ಜ್ಯೋತಿಷ್ಯ ಶಾಸ್ತ್ರದ ಮೂಲಕವೇ ಆಗಿದೆ.

ಮಂಗಳಕರ ಯೋಗ

ಇನ್ನೇನು ಹೊಸ ವರ್ಷ ಆರಂಭವಾಗಲಿದ್ದು, ಹೆಚ್ಚಿನ ಜನರು ಹೊಸ ವರ್ಷಕ್ಕಾದರೂ ಒಳಿತಾಗಲಿ, ತಮ್ಮ ಕನಸು ಈಡೇರಲಿ ಎಂಬ ಆಶಯ,ಆಕಾಂಕ್ಷೆ ಇಟ್ಟು ಕೊಂಡಿರುತ್ತಾರೆ. ಹಾಗದರೆ ಹೊಸ ವರ್ಷದ ಆರಂಭದಲ್ಲಿ ಯಾವೆಲ್ಲ‌ ರಾಶಿಗಳಿಗೆ ಶುಭ ಸುದ್ದಿ, ಏನೆಲ್ಲ ಒಳಿತಗಾಲಿದೆ ಎಂಬ ಮಾಹಿತಿ ಇಲ್ಲಿದೆ.

ಜ್ಯೋತಿಷ್ಯ ಶಾಸ್ತ್ರದ ಮೂಲಕ ಗ್ರಹಗಳ ಸಂಚಾರದೊಂದಿಗೆ ಕೆಲವೊಮ್ಮೆ ವಿಶೇಷ ಯೋಗಗಳು ಕೂಡ ಪರಿಣಮಿಸುತ್ತದೆ. ಈ ವಿಶೇಷ ಯೋಗಗಳು ಜೀವನದಲ್ಲಿ ಶುಭಕರ ಫಲಗಳನ್ನು ನೀಡಲಿದೆ. ಅದರಲ್ಲಿ ಮುಖ್ಯವಾಗಿ ಮಂಗಳಕಾರ ಯೋಗ ಕೂಡ ಮುಖ್ಯವಾಗಿದ್ದು, ದೀಪಾ ವಳಿಯ ಕೆಲವು ದಿನಗಳ ಹಿಂದೆ ರಾಹು, ಕೇತು ತನ್ನ ಕೆಲವು ರಾಶಿಯನ್ನು ಬದಲಾಯಿಸಿ ಕೊಂಡಿವೆ. ಈ ಗ್ರಹಗಳ ಸ್ಥಾನದಲ್ಲಿನ ಬದಲಾವಣೆ ಐದು ರಾಶಿಯವರಿಗೆ ಉತ್ತಮ ಯೋಗವನ್ನು ನೀಡಲಿದೆ.

ಯಾವ ರಾಶಿಗೆ ಶುಭಫಲ

ಮಿಥುನ ರಾಶಿ

ಮಿಥುನ ರಾಶಿಯವರಿಗೆ 2024 ರ ಅವಧಿ ಬಹಳಷ್ಟು ಉತ್ತಮವಾಗಲಿದೆ. ಕೆಲಸದಲ್ಲಿ ,ಆದಾಯ ದಲ್ಲಿ ಉತ್ತಮ ಸಫಲತೆ ಕಾಣುತ್ತೀರಿ. ಅಷ್ಟೆ ಅಲ್ಲದೆ ವಾಹನ ಖರೀದಿಯ ಯೋಗ ಕೂಡ ಇದ್ದು ಆರ್ಥಿಕ ಲಾಭವನ್ನು ನೀವು ಗಳಿಸಬಹುದಾಗಿದೆ. ವೃತ್ತಿ ನಿರತರಿಗೆ, ವ್ಯಾಪಾರಿಗಳು, ಉದ್ಯಮಿಗಳಿಗೆ ಲಾಭ ದೊರೆಯಲಿದ್ದು, ತಾವು ಅಂದುಕೊಂಡಂತೆ ಸಾಧಿಸುವಿರಿ. ಪರ್ಯಾಯ ಆದಾಯ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಹಣದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಪಡುತ್ತೀರಿ.

advertisement

ಕನ್ಯಾ ರಾಶಿ

2024ರಲ್ಲಿ ಕನ್ಯಾ ರಾಶಿಯವರಿಗೂ ಉತ್ತಮ ದೆಸೆ ಇದೆ. ಆರ್ಥಿಕ ಸಮಸ್ಯೆ ನಿವಾರಣೆ ಕೆಲಸದ ಒತ್ತಡ ಬಗೆಹರಿಯುತ್ತದೆ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಸಿಂಹ ರಾಶಿ

2024 ರ ವರ್ಷವು ಸಿಂಹ ರಾಶಿಯವರ ಜೀವನದಲ್ಲಿ ಉತ್ತಮ ಯೋಗ. ಪಡೆದುಕೊಂಡ ನೋವಿಗೆ ಮುಕ್ತಿ ಸಿಕ್ಕಿ ಮಾನಸಿಕ ಒತ್ತಡ, ಸಮಸ್ಯೆ ನಿವಾರಣೆ ಯಾಗುತ್ತದೆ. ನಿಮಗೆ ಆರ್ಥಿಕ ಲಾಭ ಕೂಡ ಉಂಟಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೂ ಉತ್ತಮ ಕಾಲ ಕೂಡಿ ಬರಲಿದ್ದು, ಯಶಸ್ಸು ನೀವು ಗಳಿಸುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮವಾಗಲಿದೆ. ಜೀವನದಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ 2024ರ ವರ್ಷವು ಅತ್ಯುತ್ತಮ ಯೋಗ ಇರಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ‌ ಸುಧಾರಣೆ ಮಾಡಿಕೊಳ್ಳುತ್ತೀರಿ, ನಿಮ್ಮ ಪಾಲಿಗೆ ಹೊಸ ಅವಕಾಶಗಳು ಬರಲಿವೆ. ನಿಮ್ಮ ಕನಸುಗಳು ಈ ವರ್ಷ ಈಡೇರುತ್ತವೆ.

advertisement

Leave A Reply

Your email address will not be published.