Shankhapushpi Plant: ಶಂಖಪುಷ್ಪ ಗಿಡವನ್ನು ಮನೆಯ ಮುಂದೆ ನೆಟ್ಟರೆ ಏಷ್ಟೆಲ್ಲ ಲಾಭಕರ ಎಂಬ ಮಾಹಿತಿ ಇಲ್ಲಿದೆ
Shankhapushpi Plant Uses

advertisement
ಮನೆಯ ಸುತ್ತಮುತ್ತಲೂ ಹೂವಿನ ಗಿಡಗಳಿದ್ದರೆ ನೋಡಲು ಎಷ್ಟೂ ಚಂದವೋ, ಅಷ್ಟೇ ಉಪಯೋಗ ಕೂಡ ಇದೆ. ಮನೆಯ ಮುಂದೆ ತುಳಸಿ ಗಿಡ ನೆಟ್ಟರೆ ಬಹಳ ಒಳ್ಳೆಯದು ಎಂದು ಹಿಂದಿನ ಕಾಲದಿಂದಲೂ ಹೇಳಲಾಗುತ್ತದೆ. ಅದೇ ರೀತಿ ಹಿಂದೂ ಧರ್ಮ ಶಾಸ್ತ್ರದಲ್ಲಿ ಹಲವು ಗಿಡಗಳಿಗೆ ವಿಶೇಷವಾದ ಸ್ಥಾನಮಾನ ಇದೆ. ಇಂತಹ ಹೂವುಗಳೇ ಈ ದೇವರಿಗೆ ಇಷ್ಟ, ಎಂಬ ನಂಬಿಕೆ ಸಹ ಇದೆ. ಇವುಗಳಲ್ಲಿ ಮುಖ್ಯವಾಗಿ ತುಳಸಿ, ಸಂಪಿಗೆ, ಶಂಖಪುಷ್ಪ ಹೀಗೆ ಹಲವು ವಿಧವಾದ ಹೂವುಗಳು ದೇವರಿಗೆ ಪ್ರೀಯವಾದದ್ದು. ಅದರಲ್ಲಿ ಮುಖ್ಯವಾಗಿ ಶಂಖಪುಷ್ಪ ಅಥವಾ ಗಿರಿ ಕರ್ಣಿಕೆ ಹೂವು ಕೂಡ ದೇವರಿಗೆ ಬಹಳ ಪ್ರೀಯವಾದದ್ದು. ಶ್ರೀವಿಷ್ಣುವಿಗೆ ಅತ್ಯಂತ ಪ್ರೀಯವಾದ ಹೂವು ಎಂದು ಕೂಡ ನಂಬಿಕೆ ಇದೆ. ಈ ಸಸ್ಯವನ್ನು ಮನೆಯ ಮುಂದೆ ನೆಟ್ಟರೆ ಬಹಳ ಉಪಯೋಗ ಇದ್ದು ಯಾವ ರೀತಿಯ ಪ್ರಯೋಜನ ಇದೆ ಎಂಬ ಮಾಹಿತಿ ಇಲ್ಲಿದೆ.
ಶಂಖ ಪುಷ್ಪ ಔಷಧೀಯ ಗುಣವನ್ನು ಹೊಂದಿದೆ
ಇದರ ಹೂವಿನ ದಳಗಳು ಶಂಖದ ಆಕಾರವನ್ನು ಹೊಂದಿರುವ ಕಾರಣ ಶಂಖಪುಷ್ಪ ಎಂಬ ಹೆಸರು ಬಂದಿದ್ದು, ಬಿಳಿ ಅಥವಾ ನೀಲಿ ವರ್ಣದ ಹೂಗಳು ಈ ಸಸ್ಯದ ಮೂಲಕ ಅರಳುತ್ತದೆ. ಮನೆಯಂಗಳದಲ್ಲಿ ಬೆಳೆಸಲು ಅಲಂಕಾರಿಕ ಹೂವು ಆಗಿದ್ದು, ಆರೋಗ್ಯ ದೃಷ್ಟಿಯಿಂದಲೂ ಬಹಳ ಒಳ್ಳೆಯದು.ಹೊಟ್ಟೆ ನೋವು, ಪಿತ್ತಜನಕಾಂಗ ಸಮಸ್ಯೆ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಇತ್ಯಾದಿಗಳಿಗೆ ಇದರ ಬೇರು ಬಹಳ ಒಳ್ಳೆಯದು ಎಂದು ಆಯುರ್ವೇದ ಮೂಲಕ ತಿಳಿಸಲಾಗಿದೆ.
advertisement
ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಲಾಭಕರ
ಮನೆಯಲ್ಲಿ ಶಂಖಪುಷ್ಪ ಗಿಡವನ್ನು ನೆಡುವುದರಿಂದ ಬಹಳಷ್ಟು ಲಾಭಕರ ಪ್ರಯೋಜನ ಸಿಗಲಿದೆ. ಮನೆಯ ಉತ್ತರ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ಒಳಿತಾಗಲಿದೆ .ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಈ ಗಿಡವನ್ನು ನೆಡದೆ ಉತ್ತರ ದಿಕ್ಕಿನಲ್ಲಿ ಬೆಳೆಸಿದರೆ ಮನೆಯ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಶನಿದೋಷಕ್ಕೆ ಪರಿಹಾರ
- ಶಂಖಪುಷ್ಪ ಹೂವುಗಳನ್ನು ಶನಿದೇವನಿಗೆ ಅರ್ಪಿಸಿದರೆ, ಶನಿದೋಷದಿಂದ ಮುಕ್ತಿ ದೊರೆಯುತ್ತದೆ.
- ನಿಮಗೆ ಉತ್ತಮ ಕೆಲಸ ಸಿಗಬೇಕು, ಅಂದುಕೊಂಡ ಉದ್ಯೋಗ ದೊರೆಯಬೇಕು ಎಂದಾದರೆ ಇದಕ್ಕಾಗಿ ನೀವು ಶಂಖಪುಷ್ಪ ಹೂವಿನ ಹಾರವನ್ನು ಶ್ರೀವಿಷ್ಣುವಿಗೆ ಅರ್ಪಿಸಿದರೆ ಅಂದುಕೊಂಡಂತೆ ಆಗುತ್ತದೆ.
- ಒಂದು ವೇಳೆ ನೀವೂ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ, ಸೋಮವಾರ ಹಾಗೂ ಶನಿವಾರದ ದಿನ ಶಂಖಪುಷ್ಪ ಹೂವುಗಳನ್ನು ನೀರಿನಲ್ಲಿ ಹರಿಬಿಡಿ. ಇದರಿಂದ ನಿಮ್ಮ ಕಷ್ಟ ದೂರವಾಗುತ್ತದೆ.
- ಈ ಗಿಡವನ್ನು ಅಂಗಳದಲ್ಲಿ ನೆಟ್ಟರೆ ಮನೆಯ ಅಭಿವೃದ್ಧಿ ಹೆಚ್ಚಾಗಲಿದ್ದು, ಗಿಡದ ಬಳ್ಳಿ ಬೆಳೆದಂತೆ ಮನೆ ಉನ್ನತಿ ಪಡೆಯುತ್ತದೆ ಎಂಬ ನಂಬಿಕೆ ಇದೆ.
Advertisement