Vishwas Vaidya: ಇವರು ಮುಂದಿನ ಸಿಎಂ ಆಗೋದರಲ್ಲಿ ಅನುಮಾನ ಇಲ್ಲ, ಕಾಂಗ್ರೆಸ್ ಶಾಸಕನ ಹೇಳಿಕೆ ವೈರಲ್
Vishwas Vaidya Statement On Karnataka Next CM Candidate

advertisement
ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪಕ್ಷ ಈ ಹಿಂದಿಗಿಂತಲೂ ಬಹಳ ಬಲಿಷ್ಟವಾಗುತ್ತಿದೆ ಎನ್ನಬಹುದು. ಪಂಚ ಗ್ಯಾರೆಂಟಿ ಯೋಜನೆ ಪರಿಚಯಿಸಿದ್ದ ಬಳಿಕ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಭರ್ಜರಿಯಾಗೇ ಗೆಲುವು ಸಾಧಿಸಿದೆ. ಬಳಿಕ ನುಡಿದಂತೆ ನಡೆಯುವ ಸಲುವಾಗಿ ಯೋಜನೆಗಳನ್ನೆಲ್ಲ ಕಾರ್ಯ ರೂಪಕ್ಕೆ ತರಲಾಗುತ್ತಿದೆ. ಅದೇ ರೀತಿ ಚುನಾವಣೆ ಗೆಲ್ಲುತ್ತಲೇ ಸಿಎಂ ಯಾರಾಗಬಹುದು ಎಂಬ ತೀವ್ರ ಚರ್ಚೆ ಆಗಿತ್ತು. ಅಂತಿಮವಾಗಿ ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗುವ ಮೂಲಕ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮುಸುಕಿನ ಗುದ್ದಾಟ
ಕಾಂಗ್ರೆಸ್ ಸರಕಾರದಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅಪಾರ ಅಭಿಮಾನಿಗಳಿದ್ದು ಈ ಬಾರಿ ಅವರಿಗೆ ಸಿಎಂ ಪಟ್ಟ ನೀಡಬೇಕು ಎಂದು ಪಟ್ಟು ಹಿಡಿದಿದ್ದರು, ಆದರೆ ಪರಿಸ್ಥಿತಿ ಅರಿತ ಡಿಕೆ ಶಿವಕುಮಾರ್ ಅವರು ತನಗೆ ಉಪಮುಖ್ಯಮಂತ್ರಿ ಸ್ಥಾನದಲ್ಲಿ ತೃಪ್ತಿ ಇದೆ, ಹಾಗಾಗಿ ಈ ಬಗ್ಗೆ ಗೊಂದಲ ಬೇಡ ಪಕ್ಷ ಒಗ್ಗಟ್ಟಾಗಿರಲಿ ಎಂದು ಸ್ಪಷ್ಟೀಕರಣ ನೀಡಿದ್ದರು. ಆದರೆ ಬಳಿಕ ಸ್ವಲ್ಪ ಕಾಲ ಮಾತ್ರವೇ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಬಳಿಕ ಡಿಕೆಶಿ ಅವರು ಆಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಸಿಎಂ ವಿಚಾರದಲ್ಲಿ ಆಗಾಗ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಮುಂದಿನ ಸಿಎಂ ಇವರೇ?
advertisement
ಸಿಎಂ ವಿಚಾರ ಆಗಾಗ ಚರ್ಚಿತವಾಗುತ್ತಲಿದ್ದು ಡಿಕೆ ಶಿವಕುಮಾರ್ ಅಲ್ಲದೇ ಇನ್ನೋರ್ವ ವ್ಯಕ್ತಿಯ ಹೆಸರು ಸದ್ಯ ಸಿಎಂ ಕುರ್ಚಿ ಗಾಗಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ (Vishwas Vaidya) ಅವರು ಹೇಳಿಕೆಯೊಂದನ್ನು ನೀಡಿದ್ದು ಸದ್ಯ ಇವರ ಹೇಳಿಕೆ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಹೇಳಿಕೆಯಲ್ಲಿ ಇದ್ದದ್ದೇನು?
ಇತ್ತೀಚೆಗೆ ಮಾಧ್ಯಮದ ಮುಂದೆ ಕಾಂಗ್ರೆಸ್ ಶಾಸಕರಾದ ವಿಶ್ವಾಸ ವೈದ್ಯ ಅವರು ಸತೀಶ್ ಜಾರಕಿಹೊಳಿ ಅವರ ಬಗ್ಗೆ ಮಾತನಾಡಿದ್ದಾರೆ. ಸತೀಶ್ ಜಾರಕಿ ಹೊಳಿ (Satish Jarkiholi) ಅವರು ಕಾಂಗ್ರೆಸ್ ಸರಕಾರದ ಪ್ರಭಾವಿ ನಾಯಕ. ಅವರನ್ನು ಸಿಎಂ ಸ್ಥಾನದಲ್ಲಿ ನೋಡಬೇಕು ಎಂಬುದು ಹಲವರ ಹಂಬಲವಾಗಿದ್ದು ನಾನು ಅಂತವರಲ್ಲಿ ಒಬ್ಬನಾಗಿದ್ದೇನೆ. ಮುಂದಿನ ದಿನದಲ್ಲಿ ಸತೀಶ್ ಜಾರಕಿಹೊಳಿ ಅವರು ಸಿಎಂ ಆಗೋದು ಗ್ಯಾರೆಂಟಿ ಅದರಲ್ಲಿ ಅನುಮಾನ ಇಲ್ಲ ಎಂದು ಹೇಳಿದ್ದಾರೆ.
ರಾತ್ರಿ ಹಗಲು ಎಂಬುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ ಅವರು ಸಿಎಂ ಆಗ್ತಾರೆ ಅನ್ನೊದು ಸಹ ಅಷ್ಟೇ ಸತ್ಯವಾಗಿದೆ. ಸತೀಶ್ ಜಾರಕಿಹೊಳಿ ಅವರು ಜನಪರ ನಾಯಕರಾಗಿದ್ದಾರೆ. ಸಾಕಷ್ಟು ಉನ್ನತ , ಉತ್ತಮ ಆಡಳಿತವನ್ನು ಅವರ ಕಾಲಾವಧಿಯಲ್ಲಿ ನೀಡಲಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದ್ದಾರೆ ಇವರ ಹೇಳಿಕೆ ಸದ್ಯ ಕಾಂಗ್ರೆಸ್ ಸರಕಾರದಲ್ಲಿ ಸಂಚಲನ ಮಾಡಿದ್ದರೆ ಇನ್ನೊಂದೆಡೆ ವಿಪಕ್ಷಗಳು ಪಕ್ಷದಲ್ಲಿ ಒಗ್ಗಟ್ಟು ಇಲ್ಲ ಎಂದು ಟೀಕೆ ಮಾಡುತ್ತಿದ್ದಾರೆ.
Advertisement