Karnataka Times
Trending Stories, Viral News, Gossips & Everything in Kannada

PM Modi: ಟೀಂ ಇಂಡಿಯಾಕ್ಕೆ ಸಾಂತ್ವಾನ ಹೇಳಿ ಹುರಿದುಂಬಿಸಿದ ಪ್ರಧಾನಿ ಮೋದಿ ವೀಡಿಯೋ ಫುಲ್ ವೈರಲ್

PM Modi Consoles Team India Players In Dressing Room

advertisement

ಸೋಲೇ ಗೆಲುವಿನ ಸೋಪಾನ ಎಂಬ ಮಾತಿದೆ. ಸದ್ಯ ಟೀಂ ಇಂಡಿಯಾ ಪಾಲಿಗೆ ಈ ಮಾತು ಸತ್ಯವಾಗಬಹುದು. ಕಳೆದ ಬಾರಿ ವಿಶ್ವಕಪ್ ನಲ್ಲಿ ಸೆಮಿಫೈನಲ್ ವರೆಗೆ ಬಂದ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಫೈನಲ್ ವರೆಗೆ ಬಂದಾಗ ಎಲ್ಲರಿಗೂ ನಿರೀಕ್ಷೆ ತುಸು ಹೆಚ್ಚಾಗೆ ಇತ್ತು. ಸಾಲು ಸಾಲು ಗೆಲುವಿನ ಆಟವನ್ನೇ ನೀಡಿದ ಟೀಂ ಇಂಡಿಯಾ ಸತತ 10 ಗೆಲುವು ಪಡೆದಿತ್ತು, ಆದರೆ ಫೈನಲ್ ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಅನಿರೀಕ್ಷಿತ ಸೋಲು ಪಡೆದದ್ದು ಮಾತ್ರ ಭಾರತೀಯರಿಗೆ ಎಂದಿಗೂ ಮರೆಯುವಂತಿಲ್ಲ.

ಸೋತ ನೋವು

ಟೀಂ ಇಂಡಿಯಾ ಸೋತ ನೋವು ಎಲ್ಲರಿಗೂ ಇದೆ. ಆಟಗಾರರಿಗೂ ಕೂಡ ಈ ಬಗ್ಗೆ ಬೇಸರ ಇದೆ. ಸತತ ಗೆಲುವಿನ ಬಳಿಕ ಈ ಸೋಲು ಅಚಾನಕ್ ಆಗಿ ಬಂದದ್ದು ಬಹಳಷ್ಟು ಜನರು ಬೇಸರ ಪಡುವಂತಾಗಿದೆ. ಟೀಂ ಇಂಡಿಯಾ ಸೋಲು ಎರಡು ದಿನವಾದರೂ ನೋವಿನ ಸಂಗತಿಯಾಗೇ ಉಳಿದಿದೆ. ಟೀಂ ಇಂಡಿಯಾ ಸೋತರು ಕೂಡ ಬೆಂಬಲ ನೀಡುವ ಭಾರತೀಯರು ಕ್ರಿಕೆಟಿಗರನ್ನು ಸಂತೈಸುತ್ತಲೇ ಬಂದಿದ್ದಾರೆ. ಅದೇ ರೀತಿ ಫೈನಲ್ ನಲ್ಲಿ ಸೋತ ಇಂಡಿಯಾ ತಂಡಕ್ಕೆ ಪ್ರಧಾನಿ ಮೋದಿ (PM Modi) ಅವರು ಕೂಡ ಸಾಂತ್ವಾನ ಹೇಳಿದ್ದು ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ವೈರಲ್ ಆಗಿದೆ.

ವೀಡಿಯೋ ಹಂಚಿಕೊಂಡ ಈ ಕ್ರಿಕೆಟಿಗ

ಟೀಂ ಇಂಡಿಯಾ ಸೋತ ಬಳಿಕ ಆಟಗಾರರನ್ನು ಹುರಿದುಂಬಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಟೀಂ ಇಂಡಿಯಾ ಆಲ್ ರೌಂಡರ್ ಆಟಗಾರ ರವೀಂದ್ರ ಜಡೆಜಾ ಅವರು ಒಂದು ವಿಶೇಷ ವೀಡಿಯೋ ವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೆಗಾ ಟೂರ್ನಮೆಂಟ್ ನಲ್ಲಿ ನಾವು ಉತ್ತಮ ಪ್ರದರ್ಶನ ನೀಡದೇ ನಿರಾಸೆ ಮೂಲಕ ಪಂದ್ಯ ಕೊನೆಗೊಳಿಸಬೇಕಾಯಿತು‌. ಸೋತ ಸಂದರ್ಭದಲ್ಲಿ ಡ್ರೆಸಿಂಗ್ ರೂಂ ಗೆ ಪ್ರಧಾನಿ ಮೋದಿ ಅವರು ಭೇಟಿ ಕೊಟ್ಟು ನಮಗೆ ಬಹಳ ಪ್ರೇರಣೆ ನೀಡಿದ್ದಾರೆ ಎಂದು ವೀಡಿಯೋ ಹಂಚಿಕೊಂಡಿದ್ದಾರೆ.

 

advertisement

 

View this post on Instagram

 

A post shared by Narendra Modi (@narendramodi)

ಮೋದಿ ಸಾಂತ್ವಾನ

ನಾಯಕ ರೋಹಿತ್ ಶರ್ಮಾ (Rohit Sharma) , ಮೊಹಮ್ಮದ್ ಸಿರಾಜ್ (Mohammed  Siraj) , ಕೆ ಎಲ್ ರಾಹುಲ್ (KL Rahul) ಅವರಂತಹ ಆಟಗಾರರು ಮೈದಾನದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಮೋದಿ ಅವರು ಆಟಗಾರರಿಗೆ ಬಂದು ಧೈರ್ಯ ತುಂಬಿದ್ದಾರೆ. ಅದೇ ರೀತಿ ಪ್ರಧಾನಿಯನ್ನು ಶಮಿ ಬಿಗಿ ದಪ್ಪಿ ಅತ್ತಿದ್ದಾರೆ. ಬಳಿಕ ಮೋದಿ ಅವರು ತುಂಬಾ ಉತ್ತಮವಾಗಿ ಆಡಿದ್ದೀರಿ, ಸೋಲು ಗೆಲುವು ಆಟದಲ್ಲಿ ಮಾಮೂಲಾಗಿದೆ. ಭಾರತದ ಪರವಾಗಿ ಆಡಿದ್ದು ಹೆಮ್ಮೆಯ ವಿಷಯ, ನಿಮ್ಮ ಬಗ್ಗೆ ನಮಗೆಲ್ಲ ಗೌರವ ಇದೆ. ಅಂಜಿಕೆ ಬೇಡ ನಿಮ್ಮೊಂದಿಗೆ ಇಡೀ ಭಾರತ ಇದೆ ಎಂದು ಸಾಂತ್ವಾನಿಸಿದ್ದಾರೆ.

ಬಳಿಕ ಅಲ್ಲಿನ ಎಲ್ಲ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ. ಇದೇ ಸಂದರ್ಭ ಅಮಿತ್ ಶಾ (Amit Shah) ಕೂಡ ಜೊತೆಗೆ ಇದ್ದರು. ಒಟ್ಟಾರೆಯಾಗಿ ಪ್ರಧಾನಿ ಮೋದಿ ಅವರು ಟೀಂ ಇಂಡಿಯಾಕ್ಕೆ ಸಾಂತ್ವಾನ ಮಾಡಿದ್ದ ರೀತಿ ಅನೇಕ ರೀತಿ ಲೈಕ್ ಪಡೆಯುತ್ತಿದ್ದು ಟೀಂ ಇಂಡಿಯಾ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.