Karnataka Times
Trending Stories, Viral News, Gossips & Everything in Kannada

Post Office: ಕಷ್ಟಪಟ್ಟು 50 ಸಾವಿರ ರೂಪಾಯಿ ಉಳಿಸಿಟ್ಟವರಿಗೆ ಗುಡ್ ನ್ಯೂಸ್ ಕೊಟ್ಟ ಪೋಸ್ಟ್ ಆಫೀಸ್

advertisement

ಹಣ ಇಂದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಅತೀ ಪ್ರಮುಖ ಸ್ಥಾನವನ್ನು ಪಡೆದಿದೆ. ಹಣವನ್ನು ಸಂಗ್ರಹ ಮಾಡಬೇಕು ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂಬ ಉದ್ದೇಶಕ್ಕೆ ಕೂಡಿಡುವವರು ಹೆಚ್ಚಾಗಿ ಬ್ಯಾಂಕ್ , ಸಹಕಾರಿ, ಷೇರು ಮಾರುಕಟ್ಟೆ ಮತ್ತು ಪೋಸ್ಟ್ ಆಫೀಸ್ (Post Office) ನಲ್ಲಿ ಹೂಡಿಕೆ ಮಾಡುವುದನ್ನು ಕಾಣಬಹುದು. ನೀವು ಹೆಚ್ಚು ಸುರಕ್ಷತೆ ಜೊತೆಗೆ ಹಣಕಾಸಿನ ಅಧಿಕ ಬಡ್ಡಿದರದ ಪ್ರಯೋಜನೆಯನ್ನು ಪಡೆಯಲು ಇಚ್ಛಿಸಿದರೆ ಅಂಚೆ ಇಲಾಖೆಯ ಅಡಿಯಲ್ಲಿ ಕೇಂದ್ರ ಸರಕಾರವೇ ಹೂಡಿಕೆಗೆ ಉತ್ತೇಜಿಸುವ ಯೋಜನೆ ಅಡಿಯಲ್ಲಿ ಹಣ ವಿನಿಯೋಗ ಮಾಡಿದರೆ ನಿಮಗೆ ಅಧಿಕ ಲಾಭ ಸಿಗುತ್ತದೆ ಎನ್ನಬಹುದು.

WhatsApp Join Now
Telegram Join Now

ಅಂಚೆ ಇಲಾಖೆಯ ಅಡಿಯಲ್ಲಿ RD, FD, ಮಹಿಳೆಯರಿಗೆ , ವೃದ್ಧರಿಗೆ, ಮಕ್ಕಳಿಗೆ, ಕೃಷಿಕರಿಗೆ ಪ್ರತ್ಯೇಕ ಅನೇಕ ಯೋಜನೆ ಇರುವುದನ್ನು ನಾವು ಕಾಣಬಹುದು.‌ ಒಂದೊಂದು ಯೋಜನೆ ಕೂಡ ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra Scheme) ಯನ್ನು ಜಾರಿಗೆ ತರಲಾಗಿದ್ದು ಕೆಲವೇ ತಿಂಗಳಲ್ಲಿ ಹೂಡಿಕೆ ಮೇಲೆ ಲಾಭ ಪಡೆಯಲು ಇಚ್ಛಿಸುವವರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ. ಕನಿಷ್ಟ 1000 ದಂತೆ ಈ ಒಂದು ಕಿಸಾನ್ ವಿಕಾಸ್ ಪತ್ರ ಹೂಡಿಕೆ ಆರಂಭ ಆಗಿದ್ದು ಅದರಲ್ಲಿ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇರಲಾರದು ಎಂದು ಹೇಳಬಹುದು.

ಬಡ್ಡಿದರ ಎಷ್ಟು?

 

Image Source: Rediff.com

 

ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra Scheme) ಅಡಿಯಲ್ಲಿ ಹೂಡಿಕೆ ಮಾಡುವವರಿಗೆ ಬಡ್ಡಿದರ ತ್ರೈ ಮಾಸಿಕ ಅವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿದ್ದು ವಾರ್ಷಿಕವಾಗಿ 7.5% ಬಡ್ಡಿದರದಂತೆ ನೀಡಲಾಗುವುದು. ಹಾಗಾಗಿ ಹಣ ಅಧಿಕ ಹೂಡಿಕೆ ಮಾಡಿದಂತೆ ಸಿಗುವ ಲಾಭದ ಪ್ರಮಾಣ ಕೂಡ ಹೆಚ್ಚಳ ಆಗಲಿದೆ ಎಂದು ಈ ಮೂಲಕ ಹೇಳಬಹುದಾಗಿದೆ. ಹಾಗಾಗಿ ಷೇರು ಮಾರುಕಟ್ಟೆ ಇತರ ವ್ಯವಹಾರಗಳ ಮೇಲೆ ಹಣ ಹಾಕಿ ಲಾಸ್ ಆಗುತ್ತದೆ ಎಂದು ಭಯ ಪಡುವ ಬದಲು ಅಂಚೆ ಇಲಾಖೆಯ ಅಧೀನದಲ್ಲಿ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ಲಾಭ ಹಿಂಪಡೆಯುವುದು ಗ್ಯಾರೆಂಟಿ ಎನ್ನಬಹುದು.

ಯಾರು ಅರ್ಹರು?

advertisement

ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಬಹುತೇಕರು ಅರ್ಹ ರಾಗಿರುತ್ತಾರೆ. 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಪೋಷಕರು ಈ ಹೂಡಿಕೆ ಆರಂಭ ಮಾಡಬಹುದು. ಇಲ್ಲವಾದಲ್ಲಿ ಒಬ್ಬರೆ ಎರಡು ಪ್ರತ್ಯೇಕ ಖಾತೆ ತೆರೆದು ಕೂಡ ಹೂಡಿಕೆ ಮಾಡಬಹುದು.

 

Image Source: pmmodiyojana.in

 

ಒಬ್ಬ ವ್ಯಕ್ತಿ ಎಷ್ಟು ಖಾತೆ ಕೂಡ ಕಿಸಾನ್ ಪತ್ರ ಯೋಜನೆ (Kisan Vikas Patra Scheme) ಅಡಿಯಲ್ಲಿ ತೆರೆಯಬಹುದು. ಅದಕ್ಕೆ ಯಾವುದೇ ಮಿತಿ ಇಲ್ಲ ಎಂದು ಹೇಳಬಹುದು. ನೀವು ಒಂದು ವೇಳೆ 50,000 ರೂಪಾಯಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟು ಕೊಳ್ಳಿ ಆಗ ನಿಮಗೆ ಡಬಲ್ ಲಾಭ ಇರಲಿದೆ ಎನ್ನಬಹುದು.

ಹಣ ಡಬಲ್:

ಅಂಚೆ ಇಲಖೆಯು ಸರಕಾರದ ಸ್ವಾಮ್ಯದ್ದಾಗಿದ್ದು ಇಲ್ಲಿ ಹಣ ಡಬಲ್ ಮಾಡಲಾಗುವ ಯಾವುದೇ ಭರವಸೆ ನೀಡದಿದ್ದರು ನೀವು ಮಾಡಿದ್ದ ಹೂಡಿಕೆಗೆ ಬಡ್ಡಿದರದ ಮೇಲೆ ಹಣ ಡಬಲ್ ಹಾಗಿ ರಿಟರ್ನ್ ಪಡೆಯಬಹುದು.ಈ ಯೋಜನೆಯ ಅಡಿಯಲ್ಲಿ ಕಷ್ಟ ಪಟ್ಟು ಕೂಡಿಟ್ಟ 50,000 ರೂಪಾಯಿ ಹೂಡಿಕೆ ಮಾಡಿದರೆ ಅದನ್ನು ವಾಪಸ್ಸು ಪಡೆಯಲು 115 ತಿಂಗಳು ಕಾಯಬೇಕು. ವಾರ್ಷಿಕ 7.5% ಬಡ್ಡಿದರದಂತೆ ನಿಮ್ಮ ಹಣ ನೀವು ವಾಪಾಸ್ಸು ಪಡೆಯುವಾಗ 1 ಲಕ್ಷವಾಗಿ ನಿಮ್ಮ ಕೈ ಸೇರುತ್ತದೆ.

ಹಾಗೇ ನೀವು ಎರಡು ಲಕ್ಷ ಹೂಡಿಕೆ ಮಾಡಿದರೆ 4 ಲಕ್ಷ ಸಿಗುವುದು. 5 ಲಕ್ಷ ಹೂಡಿಕೆ ಮಾಡಿದರೆ 10 ಲಕ್ಷ ರೂಪಾಯಿ ದೊರೆಯಲಿದೆ. ಹೆಚ್ಚೆಚ್ಚು ಹೂಡಿಕೆ ಮಾಡಿದ ಆದಾಯ ತೆರಿಗೆ ವ್ಯಾಪ್ತಿಗೆ ಬರಲಿದೆ. ಅಂದರೆ ಈ ಹಣಕ್ಕೆ ಸರಕಾರದ ಕೆಲವು ತೆರಿಗೆ ನಿಯಮ ಕೂಡ ಅನ್ವಯ ಕೂಡ ಆಗುತ್ತದೆ.

advertisement

Leave A Reply

Your email address will not be published.