Karnataka Times
Trending Stories, Viral News, Gossips & Everything in Kannada

Post Office Scheme: 200 ರೂ ಪ್ರತಿ ದಿನ ಹೂಡಿಕೆ ಮಾಡಿ ಕೆಲವೇ ತಿಂಗಳುಗಳಲ್ಲಿ ಹಣ ಡಬಲ್! ಪೋಸ್ಟ್ ಆಫೀಸ್ ಯೋಜನೆ

advertisement

ಇತ್ತೀಚಿನ ದಿನಗಳಲ್ಲಿ ಜನರು ಆದಾಯಕ್ಕಿಂತ ಅವರ ಖರ್ಚು ಹೆಚ್ಚಗಿರುವುದನ್ನು ನಾವು ನೋಡಿರುತ್ತೇವೆ. ಹಾಗಾಗಿ ಉಳಿತಾಯ ಮಾಡುವುದು ತುಂಬಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಇನ್ನು ಇದರ ನಡುವೆ ಸರ್ಕಾರವು ಉಳಿತಾಯ ಮತ್ತು ಹೂಡಿಕೆ ಅಭಿವೃದ್ಧಿ ಸಂಬಂಧಿಸಿದಂತೆ ಹೊಸ ಹೊಸ ಯೋಜನೆಗಳು ಮತ್ತು ಸ್ಕೀಮ್ ಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದ ಎಲ್ಲರೂ ಅನುಕೂಲ ಪಡೆಯಲು ಅವಕಾಶವನ್ನು ಕಲ್ಪಿಸಿದೆ. ಇನ್ನು ಅದೇ ರೀತಿಯಾದ ಉಳಿತಾಯದ ಯೋಜನೆ ಎಂದರೆ ಅದು ಕಿಸಾನ್ ವಿಕಾಸ್ ಪತ್ರ ಸ್ಕೀಮ್.

Post Office Scheme ಹೈಲೈಟ್ಸ್:

ಕಿಸಾನ್ ವಿಕಾಸ್ ಪತ್ರ ಸ್ಕೀಮ್ ಕಿಸಾನ್ ವಿಕಾಸ್ ಪತ್ರ (Kisan Vikas Patra) ಭಾರತೀಯ ಅಂಚೆ ಕಛೇರಿಯ (Post Office Scheme)ಉಳಿತಾಯ ಯೋಜನೆಯಾಗಿದ್ದು, ವ್ಯಕ್ತಿಗಳಲ್ಲಿ ದೀರ್ಘಾವಧಿಯ ಉಳಿತಾಯ ಅಭ್ಯಾಸವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮತ್ತು ಇದು ಗ್ರಾಮೀಣ ಭಾಗ ಮತ್ತು ಸಣ್ಣ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಸೌಲಭ್ಯ ಒದಗಿಸಲು ಅವರ ಜೀವನಮಟ್ಟ ಮತ್ತಷ್ಟು ಸುಧಾರಿಸುವ ಸಲುವಾಗಿ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಯೋಜನೆ ಆಗಿದೆ.

advertisement

Image Source: Bank Of Baroda

ಇನ್ನು ಈ ಯೋಜನೆ ಅಡಿಯಲ್ಲಿ ಒಂದು ವರ್ಷಕ್ಕೆ ಎಂಬಂತೆ ದಿನಕ್ಕೆ 200 ರೂ ಹೂಡಿಕೆ ಮಾಡಿದರೆ, ವರ್ಷದ ಒಟ್ಟು ಹೂಡಿಕೆಯು ರೂ 73,000 ಆಗಿರುತ್ತದೆ. 7.5 ಪರ್ಸೆಂಟ್ ಶೇಕಡ ವಾರ್ಷಿಕ ಬಡ್ಡಿ ದರದೊಂದಿಗೆ 115 ತಿಂಗಳುಗಳಿಗೆ ಎರಡರಷ್ಟು ಅಂದರೆ ದ್ವಿಗುಣಗೊಳಿಸುವ ಅವಧಿಯನ್ನು ನಿಗದಿಪಡಿಸಲಾಗಿದೆ. ಇದರಿಂದ ಹೂಡಿಕೆದಾರರು ಮಾಡಿರುವಂತ ಹೂಡಿಕೆಯು ಸರಿಸುಮಾರು 9 ವರ್ಷ 7 ತಿಂಗಳುಗಳಲ್ಲಿ ರೂ 1,46,000 ಕ್ಕೆ ಏರಲಿದೆ ಅಥವಾ ದ್ವಿಗುಣಗೊಳ್ಳುತ್ತದೆ.

ಕಿಸಾನ್ ವಿಕಾಸ್ ಪತ್ರ (Kisan Vikas Patra) ಯೋಜನೆ ಅಡಿಯಲ್ಲಿ, ಯಾವುದೇ ವಯಸ್ಕ ಅಂದರೆ 18 ವರ್ಷಕ್ಕೆ ಮೇಲ್ಪಟ್ಟವರಾದ ವ್ಯಕ್ತಿಯು ಖಾತೆಯನ್ನು ತೆರೆಯಲು ಅರ್ಹರಾಗಿರುತ್ತಾರೆ. ಹೆಚ್ಚುವರಿಯಾಗಿ, 10 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ತಮ್ಮ ಹೆಸರಿನಲ್ಲಿ KVP ಖಾತೆಗಳನ್ನು ತೆರೆಯಬಹುದು. ಇನ್ನು ಮೈನರ್ ಆಗಿರುವಂತಹ ಮಕ್ಕಳು ಅಥವಾ ಮಾನಸಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳ ಪರವಾಗಿ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆಯಲು ಅವರ ಪೋಷಕರಿಗೆ ಅಧಿಕಾರವನ್ನು ನೀಡಲಾಗಿದೆ.

advertisement

Leave A Reply

Your email address will not be published.