Karnataka Times
Trending Stories, Viral News, Gossips & Everything in Kannada

ಈ ಬ್ಯಾಂಕ್ ನಲ್ಲಿ 1 ಲಕ್ಷ ಇಟ್ಟರೆ 9750 ರೂ ಬಡ್ಡಿ ಸಿಗಲಿದೆ! ಮುಗಿಬಿದ್ದ ಜನ

advertisement

ಇಂದು ಹೂಡಿಕೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಮುಖ್ಯ. ಹಾಗಾಗಿ ಹೂಡಿಕೆ ಬಗ್ಗೆ ಹೆಚ್ಚಿನ ಜನರು ಕೂಡ ಆಸಕ್ತಿ ಯನ್ನು ತೋರುತ್ತಾರೆ. ಇಂದು ದುಡಿದ ಸ್ವಲ್ಪ ವಾದರೂ ಹೂಡಿಕೆ ಮಾಡಿದರೆ ಮುಂದಿನ ದಿನಗಳಿಗೆ ಸುಲಭ ವಾಗಬಹುದು. ಹಾಗಾಗಿ ಹೆಚ್ಚಿನ ಜನರು ಬ್ಯಾಂಕ್, Post Office, LIC ಇತ್ಯಾದಿ ಕಡೆಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಒಲವನ್ನು ತೋರುತ್ತಾರೆ.ಅದೇ ರೀತಿ ಇಂದು ಕೆಲವೊಂದು ಬ್ಯಾಂಕ್ ಗಳು ವಿಶೇಷ ವಾದ ಎಫ್ ಡಿ ಬಡ್ಡಿದರವನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಅದೇ ರೀತಿ ಈ ಬ್ಯಾಂಕ್ ಇದೀಗ ಗ್ರಾಹಕರಿಗಾಗಿ FD ಇಡಲು ಉತ್ತಮ ಬಡ್ಡಿದರ ವನ್ನು ಕೂಡ ನೀಡಲಿದೆ.

WhatsApp Join Now
Telegram Join Now

ಇಂದು ಹೆಚ್ಚಿನ ಜನರು ಫಿಕ್ಸೆಡ್ ಡೆಪಾಸಿಟ್ (FD) ಮೇಲೆ ಒಲವು ತೋರಿಸುತ್ತಾರೆ. ಬ್ಯಾಂಕುಗಳಲ್ಲಿ ಎಫ್ ಡಿ ಇಡುವ ಮೂಲಕ ಅಗತ್ಯ ಬಿದ್ದಾಗ ಹಣ ತೆಗೆಯುತ್ತಾರೆ‌. ಇಂದು ಅನೇಕರು ಎಫ್ ಡಿ ಇಡುವಾಗ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತೆ ಎಂದು ತಿಳಿದುಕೊಂಡು ನಂತರ ಎಫ್‌ಡಿ ಮಾಡುವ ಅನೇಕ ಜನರಿದ್ದಾರೆ. ಅಂತವರಿಗೆ ಈ ಸುದ್ದಿ ಬಹಳಷ್ಟು ಉಪಯೋಗವಾಗಲಿದೆ‌.ಹೌದು ಈ ಬ್ಯಾಂಕ್‌ ಇಡೀ ಭಾರತದಲ್ಲೇ ಅತಿ ಹೆಚ್ಚು ಬಡ್ಡಿ ದರವನ್ನು ನೀಡುವ ಬ್ಯಾಂಕ್ ಆಗಿದ್ದು ಇಂದು ಪ್ರತಿಷ್ಠಿತ ಬ್ಯಾಂಕ್ ಎನಿಸಿಕೊಳ್ಳುವ ಮೂಲಕ ಗ್ರಾಹಕರ ನೆಚ್ಚಿನ ಬ್ಯಾಂಕ್ ಕೂಡ ಆಗಿದೆ.

 

Image Source: Worldorgs.com

 

advertisement

ಇದು ದೇಶದಲ್ಲೇ ಅತಿ ಹೆಚ್ಚು FD ಬಡ್ಡಿ ದರವಾಗಿದ್ದು ಹೌದು ಅದುವೇ ನಾರ್ತ್‌ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ (North East Small Finance Bank) ಇದು ಬಹಳಷ್ಟು ಗ್ರಾಹಕರನ್ನು ಒಳಗೊಂಡಿದೆ.ಇಲ್ಲಿ ಎಫ್ ಡಿ ಇಟ್ಟರೆ ಲಾಭಕರ ಎಂದೇ ಹೇಳಬಹುದು. ಇಲ್ಲಿ FD ಮೇಲೆ 50 ಬೇಸಿಸ್ ಪಾಯಿಂಟ್ಸ್ ಬಡ್ಡಿ ದರ ಏರಿಕೆ ಮಾಡಿದ್ದು ಹೆಚ್ಚು ಪ್ರಯೋಜನ ‌ಕಾರಿ ಯಾಗಿದೆ. ಈ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 9.25% ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ 9.75% ಬಡ್ಡಿ ಕೂಡ ನೀಡಲಿದೆ.

ನಾರ್ತ್‌ ಈಸ್ಟ್ ಸ್ಮಾಲ್‌ ಫೈನಾನ್ಸ್ ಬ್ಯಾಂಕ್ (North East Small Finance Bank) ಹಿರಿಯ ನಾಗಕರಿಗೆ ಅತಿ ಹೆಚ್ಚು ಬಡ್ಡಿ ದರ ಒದಗಿಸುವ ಮೂಲಕ ಹೆಚ್ಚು ಪ್ರಚಲಿತ ದಲ್ಲಿದೆ ಎನ್ಮಬಹುದು. ಈ ಮೂಲಕ ಇಲ್ಲಿ ಒಂದು ಲಕ್ಷ ಇಟ್ಟರೆ 9750 ರೂ ಬಡ್ಡಿಯಾಗಿಯೇ ಸಿಗಲಿದೆ.ಇಲ್ಲಿ 91 ರಿಂದ 180 ದಿನಗಳವರೆಗೆ 6.50% ಬಡ್ಡಿ, ಹಾಗೂ 181 ರಿಂದ 365 ದಿನಗಳವರೆಗೆ 7.25% ಮತ್ತು 366 ರಿಂದ 545 ದಿನಗಳವರೆಗೆ 9% ಬಡ್ಡಿ. ಆದರೆ 546 ರಿಂದ 1111 ದಿನಗಳ ಸಮಯಕ್ಕೆ ಸಾಮಾನ್ಯ ಗ್ರಾಹಕರು 9.25% ಮತ್ತು ಹಿರಿಯ ನಾಗರಿಕರು 9.75% ಬಡ್ಡಿಯನ್ನು ಪಡೆಯಲು ಅವಕಾಶ ಇರಲಿದೆ.

 

Image Source: Business Today

 

ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (North East Small Finance Bank) 1 ಕೋಟಿಯಿಂದ 5 ಕೋಟಿವರೆಗೆ ಸ್ಥಿರ ಠೇವಣಿಗಳ ಮೇಲೆ ದೇಶದಲ್ಲೇ ಅತಿ ಹೆಚ್ಚು ಬಡ್ಡಿದರಗಳನ್ನು ಹೊಂದಿದೆ. ಇತ್ತೀಚಿನ ಬಡ್ಡಿದರಗಳನ್ನು ಲೆಕ್ಕ ಹಾಕಿದರೆ ಈಗ ಬ್ಯಾಂಕ್ ಎಫ್‌ಡಿಯಲ್ಲಿ 7-14 ದಿನಗಳವರೆಗೆ 3.50%, 15-29 ದಿನಗಳವರೆಗೆ 4%, 30-45 ದಿನಗಳವರೆಗೆ 4.50% ಮತ್ತು 46-90 ದಿನಗಳವರೆಗೆ 5% ಬಡ್ಡಿಯನ್ನು ಕೂಡ ನೀಡುತ್ತಿದೆ, ಹಾಗಾಗಿ ಎಫ್ ಇಡಬೇಕು, ಹೆಚ್ಚಿನ ಬಡ್ಡಿ ಸಿಗಬೇಕು ಎಂದು ಅಲೋಚಿಸುತ್ತಿದ್ದರೆ ಇಲ್ಲಿ ಎಫ್ ಡಿ ಇಡಲು ಸೂಕ್ತ ಎಂದೇ ಹೇಳಬಹುದು

advertisement

Leave A Reply

Your email address will not be published.