Karnataka Times
Trending Stories, Viral News, Gossips & Everything in Kannada

SBI: ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಇರುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್!

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಬ್ಯಾಂಕಿಂಗ್ ಸಿಸ್ಟಮ್ ನಲ್ಲಿ ಇರುವಂತಹ ಅತ್ಯಂತ ದೊಡ್ಡ ಗ್ರಾಹಕ ಬಳಗವನ್ನು ಹೊಂದಿರುವಂತಹ ಸರ್ಕಾರಿ ಬ್ಯಾಂಕ್ ಆಗಿದೆ. ಇನ್ನು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಹೂಡಿಕೆಯ ವಿಚಾರಕ್ಕೆ ಬಂದಾಗ ಅವರ ನಿವೃತ್ತಿ ನಂತರದ ಜೀವನ ಸುಗಮವಾಗಿ ಸಾಗಬೇಕು ಎನ್ನುವಂತಹ ಆಸೆ ಖಂಡಿತವಾಗಿ ಪ್ರತಿಯೊಬ್ಬರಲ್ಲಿ ಕೂಡ ಇರುತ್ತದೆ ಅದರಲ್ಲಿ ವಿಶೇಷವಾಗಿ ಆರ್ಥಿಕವಾಗಿ ನಿವೃತ್ತಿಯ ವಯಸ್ಸಿನ ನಂತರ ಸ್ವತಂತ್ರರಾಗಬೇಕು ಯಾರ ಹಂಗಿನಲ್ಲಿ ಕೂಡ ಇರಬಾರದು ಅನ್ನೋ ಮನಸ್ಸು ಅವರಲ್ಲಿ ಇರುತ್ತದೆ. ಇದೇ ಕಾರಣಕ್ಕಾಗಿಯೇ ಹಿರಿಯ ನಾಗರಿಕರು ಸಾಕಷ್ಟು ಕಡೆಗಳಲ್ಲಿ ಹೆಚ್ಚಾಗಿ ಫಿಕ್ಸೆಡ್ ಡೆಪಾಸಿಟ್ ಯೋಜನೆ (FD Scheme) ಯಲ್ಲಿ ಹೂಡಿಕೆ ಮಾಡುವುದರ ಬಗ್ಗೆ ಯೋಚನೆ ಮಾಡುತ್ತಾರೆ.

WhatsApp Join Now
Telegram Join Now

ಅದರಲ್ಲೂ ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಮಾಡುವಂತಹ ಫಿಕ್ಸೆಡ್ ಡೆಪಾಸಿಟ್ (Fixed Deposit) ಹೂಡಿಕೆಯ ಮೇಲೆ ಹಿರಿಯ ನಾಗರಿಕರು ಯಾವ ರೀತಿಯಲ್ಲಿ ಆದಾಯವನ್ನು ಪಡೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಈ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹಿರಿಯ ನಾಗರಿಕರು ಸಮಯಕ್ಕೆ ಸರಿಯಾಗಿ ಅಂದರೆ ತಿಂಗಳಿಗೆ ಮೂರು ತಿಂಗಳಿಗೆ ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ಅದರ ಮೇಲಿನ ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ.

 

Image Source: the fridaymania

 

advertisement

ಇನ್ನು ಈ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ (FD Investment) ಮೇಲೆ ಹಿರಿಯ ನಾಗರಿಕರು ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿದರವನ್ನು ಪಡೆದುಕೊಳ್ಳುತ್ತಾರೆ. ಐದು ವರ್ಷಗಳ ಹೂಡಿಕೆಯ ಮೇಲೆ ಹಿರಿಯ ನಾಗರಿಕರು ಪ್ರತಿ ಆರ್ಥಿಕ ವರ್ಷದಲ್ಲಿ 1.50 ಲಕ್ಷ ರೂಪಾಯಿಗಳವರೆಗೆ ಮಾಡುವಂತಹ ಹೂಡಿಕೆ ಮೇಲೆ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

  • 80000 ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 6002 ರೂಪಾಯಿ ರಿಟರ್ನ್, 1.6 ಲಕ್ಷ ರೂಪಾಯಿಗಳ ಹೂಡಿಕೆಗೆ 12,004 ರೂಪಾಯಿಗಳ ರಿಟರ್ನ್ ಸಿಗುತ್ತದೆ.
  • ಮೂರು ವರ್ಷಕ್ಕೆ 80000 ಹೂಡಿಕೆ ಮಾಡಿದರೆ 19244 ರೂಪಾಯಿ ರಿಟರ್ನ್, 1.60 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ 38488 ರೂಪಾಯಿಗಳ ಬಡ್ಡಿ ರಿಟರ್ನ್.
  • 80 ಸಾವಿರ ರೂಪಾಯಿ ಅನ್ನು ಐದು ವರ್ಷಗಳಿಗೆ ಹೂಡಿಕೆ ಮಾಡಿದರೆ ಆ ಸಂದರ್ಭದಲ್ಲಿ 35,996, 1.60 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ 71,992 ಬಡ್ಡಿ, 2.40 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ 1.07 ಲಕ್ಷ ರೂಪಾಯಿಗಳ ರಿಟರ್ನ್ ಸಿಗಲಿದೆ.

ಒಟ್ಟಾರೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಉತ್ತಮ ಬಡ್ಡಿ ದರದ ರಿಟರ್ನ್ ನೀಡುವಂತಹ ಮಾತನ್ನು ಈ ಮೂಲಕ ಉಳಿಸಿಕೊಂಡಿದೆ ಎಂದು ಹೇಳಬಹುದು.

advertisement

Leave A Reply

Your email address will not be published.