Karnataka Times
Trending Stories, Viral News, Gossips & Everything in Kannada

SBI: ಹಣ ದುಪ್ಪಟ್ಟು ಆಗಲು SBI ಬ್ಯಾಂಕ್ ನಲ್ಲಿ ಎಷ್ಟು ವರ್ಷ ಹಣ ಹೂಡಿಕೆ ಮಾಡಬೇಕು?

advertisement

ಹಣ ಉಳಿತಾಯ ಮಾಡುವವರಿಗಾಗಿಯೇ ಇಂದು ಅನೇಕ ಬ್ಯಾಂಕುಗಳು ಉತ್ತಮ ಆಫರ್ಸ್ ಅನ್ನು ನೀಡುತ್ತದೆ. ಸ್ಥಿರ ಠೇವಣಿ ಮೇಲೆ ಹಣ ಹೂಡಿಕೆ ಮಾಡುವುದು ದೀರ್ಘಾವಧಿ ಲಾಭ ನೀಡಲಿದೆ. ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಲಾಗುತ್ತಿದ್ದು ಹೂಡಿಕೆ ಮಾಡುವ ಗ್ರಾಹಕರಿಗೆ ಒಳ್ಳೆ ಸುದ್ದಿ ಕಾದಿದೆ ಎನ್ನಬಹುದು. ದೇಶದ ಪ್ರತಿಷ್ಠಿತ ಬ್ಯಾಂಕಿನಲ್ಲಿ ಒಂದಾದ ಎಸ್ ಬಿಐ (SBI) ಸ್ಥಿರ ಠೇವಣಿ ಮೇಲಿನ ಲಾಭಾಂಶ ಯಾವ ರೀತಿ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬ್ಯಾಂಕಿನಲ್ಲಿ ಹೂಡಿಕೆ ಮಾಡುವವರ ಬಹುತೇಕರ ಮೂಲ ಉದ್ದೇಶ ಹೆಚ್ಚಿನ ಲಾಭ ಪಡೆಯುವುದಾಗಿದೆ. ಬ್ಯಾಂಕೊಂದು ಲಾಭ ಅಧಿಕ ನೀಡುತ್ತಿದ್ದಂತೆ ಗ್ರಾಹಕರು ಕೂಡ ಹೆಚ್ಚಾಗಿ ಅದೇ ಬ್ಯಾಂಕಿನಲ್ಲೇ ತಮ್ಮ ಹೂಡಿಕೆ ಮುಂದುವರಿಸುತ್ತಾರೆ. ಹೀಗಾಗಿ ಬ್ಯಾಂಕುಗಳು ಪೈಪೋಟಿ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತದೆ‌. ಅದುವೆ ಸಾಮಾನ್ಯ ಜನರಿಗೆ ಹೂಡಿಕೆ ಉತ್ತೇಜನ ಮಾಡುವಂತೆ ವಾತಾವರಣ ಸೃಷ್ಟಿಸಿದೆ. ಹೀಗಾಗಿ ಎಸ್ ಬಿಐ ಕೂಡ ಉತ್ತಮ ಬಡ್ಡಿದರವನ್ನು FD ಮೇಲೆ ನೀಡುತ್ತಿದ್ದು ಈ ಮಾಹಿತಿ ಸಂಪೂರ್ಣ ಓದಿ.

SBIನ ಬಡ್ಡಿದರ ಹೇಗಿದೆ?

  • 7ರಿಂದ 45ದಿನದವರೆಗೆ 3%
  • 180ರಿಂದ 210 ದಿನದವರೆಗೆ 5.25%
  • 211ದಿನದಿಂದ ಒಂದು ವರ್ಷಕ್ಕಿಂತ ಕಡಿಮೆಗೆ 5.75%
  • 1ಕ್ಕಿಂತ ಹೆಚ್ಚು 2 ವರ್ಷಕ್ಕಿಂತ ಕಡಿಮೆ 6.80%
  • 2ಕ್ಕಿಂತ ಹೆಚ್ಚು 3ವರ್ಷಕ್ಕಿಂತ ಕಡಿಮೆ7%
  • 3ಕ್ಕಿಂತ ಹೆಚ್ಚು 5ವರ್ಷ ಕಡಿಮೆ 6.50%
  • 5ಕ್ಕಿಂತ ಹೆಚ್ಚು 10 ವರ್ಷ ಕಡಿಮೆ 6.50%
  • 400ದಿನಗಳ ಅಮೃತ ಕಲಶ ಯೋಜನೆಗೆ 7.10% ಸಿಗಲಿದೆ.

advertisement

ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ

ಹಿರಿಯ ನಾಗರಿಕರಿಗೆ ಈ ಯೋಜನೆಯ ಅಡಿಯಲ್ಲಿ ವಿಶೇಷ ಸೌಲಭ್ಯ ಸಿಗಲಿದೆ. 0.50% ದಷ್ಟು ಸಾಮಾನ್ಯ ನಾಗರಿಕರಿಗಿಂತ ಅಧಿಕ ಸೇವೆಸಿಗಲಿದೆ. 5ವರ್ಷಕ್ಕಿಂತ ಹೆಚ್ಚು 10 ವರ್ಷದ ಸಾಮಾನ್ಯ ನಾಗರಿಕರ ಲಾಭದ ಮೊತ್ತಕ್ಕಿಂತ 1% ಅಧಿಕ ಹಣ ಸಿಗಲಿದೆ. ಹಿರಿಯ ನಾಗರಿಕರಿಗೆ 7.50%ದಷ್ಟು ಬಡ್ಡಿದರ SBI ನೀಡಲಾಗುವುದು.

5 ಲಕ್ಷ ಹೂಡಿಕೆ ಮಾಡಿದರೆ ಲಾಭ ಹೇಗಿರಲಿದೆ

ಈಗ ನಿಮ್ಮ ಬಳಿ 5ಲಕ್ಷ ಮೊತ್ತ ಇದ್ದು ಅದನ್ನು ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ FD ಮೇಲೆ 5.75% ಅಂದರೆ 5,29,376ರೂ. ಸಿಗಲಿದೆ. 2 ವರ್ಷಕ್ಕೆ FD ಮೇಲೆ 6.80% ಅಂದರೆ 5,72,187ರೂ. ಸಿಗಲಿದೆ. 3ವರ್ಷಕ್ಕೆ FD ಮೇಲೆ 7% ಅಂದರೆ 6,15, 720ರೂ. ಸಿಗಲಿದೆ. 5 ವರ್ಷಕ್ಕೆ FD ಮೇಲೆ 6.50% ಅಂದರೆ 6,90,210 ರೂ. ಸಿಗಲಿದೆ. 10ವರ್ಷಕ್ಕೆ 6.50% ಬಡ್ಡಿದರದ ಮೇಲೆ 9,52,779ರೂ. ನ ಲಾಭ ಗ್ರಾಹಕರಿಗೆ ಸಿಗಲಿದೆ. ಆದರೆ ಇದು ಹಿರಿಯ ನಾಗರಿಕರಿಗೆ 1% ಏರಿಕೆಯಂತೆ 10,51,175ರೂ. 10 ವರ್ಷಕ್ಕೆ ಸಿಗಲಿದೆ.

advertisement

Leave A Reply

Your email address will not be published.