Karnataka Times
Trending Stories, Viral News, Gossips & Everything in Kannada

KYC Update: ಬ್ಯಾಂಕ್ ಗೆ ಭೇಟಿ ನೀಡದೆಯೂ KYC ಮಾಡಿಸಬಹುದು, ಈ ವಿಧಾನ ಅನುಸರಿಸಿ.

advertisement

ಇತ್ತೀಚೆಗೆ ಬ್ಯಾಂಕಿನಲ್ಲಿ KYC ಪ್ರಕ್ರಿಯೆ ಮಾಡುವುದು ಆರ್ಥಿಕ ವಹಿವಾಟಿಗೆ ಕಡ್ಡಾಯ ಮಾಡಿದ್ದರೂ ಮಾಡಿದವರ ಸಂಖ್ಯೆ ಹೆಚ್ಚಿದ್ದರೂ ಇನ್ನು ಮಾಡಿಸದೇ ಇದ್ದವರು ಕೂಡ ಇದ್ದಾರೆ ಎಂದು ಹೇಳಬಹುದು. ಹಾಗಾಗಿ RBI ಪ್ರಕ್ರಿಯೆ ಸುಲಭವಾಗಿಸುವ ಬ್ಯಾಂಕುಗಳು ತಮ್ಮ ಗ್ರಾಹಕರ ವಿವರ ತಿಳಿಯಲು ಅಗತ್ಯವಾದ KYC ಯ ಪ್ರಕ್ರಿಯೆ ಸುಲಭಗೊಳಿಸಲು RBI ತೀರ್ಮಾನಿಸಿದೆ.

KYC ಎಂದರೇನು?

ಕೆವೈಸಿ ಎನ್ನುವುದು ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಗುರುತಿಸುವ ಒಂದು ಪ್ರಕ್ರಿಯೆ ಆಗಿದೆ. ಇದರಿಂದಾಗಿ ಗ್ರಾಹಕರ ಆರ್ಥಿಕ ವ್ಯವಹಾರ ಸ್ಥಿತಿಸುಲಭವಾಗಿ ಅರಿವಾಗಲಿದೆ. ಹಾಗಾಗಿ ಈ ಪ್ರಕ್ರಿಯೆ ಇನ್ನಷ್ಟು ಸರಳೀಕರಿಸಲು RBI ಚಿಂತನೆ ನಡೆಸಿದೆ. ಬ್ಯಾಂಕಿಗೆ ಅಲೆಯದೇ ಮನೆಯಲ್ಲಿಯೇ KYC ಅಪ್ಡೇಟ್ ಮಾಡಲು ಸುಲಭ ವಿಧಾನ ಕಂಡುಕೊಳ್ಳಲಾಗಿದೆ. ನೀವು ಇದನ್ನು ಅನುಸರಿಸಿದರೆ ಮನೆಯಲ್ಲಿ ನಿಮ್ಮ ಕೆಲಸ ಮಾಡಿಕೊಳ್ಳಬಹುದು.

ಯಾವುದು ಈ ತೀರ್ಮಾನ

RBIನ ಅಧೀನದಲ್ಲಿ ಬರುವ ಎಲ್ಲ ಬ್ಯಾಂಕುಗಳಿಗೆ ತಮ್ಮ ಗ್ರಾಹಕರ KYC ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕಿನಲ್ಲಿ ಅಲೆದಾಟ ನಡೆಸದೇ ಮನೆಯಲ್ಲಿಯೇ ಸುಲಭವಾಗಿ KYC ಅಪ್ಡೇಟ್ ಮಾಡುವ ಅವಕಾಶ ನೀಡಲು RBI ಮುಂದಾಗಿದೆ. ನಿಮ್ಮ ವಿಳಾಸ ಒಂದೇ ಆಗಿದ್ದು, ಮೊಬೈಲ್ ಸಂಖ್ಯೆ, ಇ ಮೇಲ್ ಮತ್ತು ATM, ಆನ್ಲೈನ್ ಬ್ಯಾಂಕಿಂಗ್ ಎಲ್ಲ ವ್ಯವಹಾರ ಯಥಾವತ್ತಾಗಿದ್ದರೆ ತೊಂದರೆ ಇಲ್ಲದೆ KYC ಯನ್ನು ನವೀಕರಿಸಬಹುದು.

advertisement

ಈ ಹಂತಗಳನ್ನು ಅನುಸರಿಸಿ

ನಿಮ್ಮ ಬ್ಯಾಂಕಿನ ಕೆವೈಸಿಯ ಪ್ರಕ್ರಿಯೆ ಅಪ್ಡೇಟ್ ಮಾಡಲು ಇಲ್ಲಿ ಸರಳ ಮಾರ್ಗಗಳಿವೆ. ಇದನ್ನು ಹಂತ ಹಂತವಾಗಿ ಅನುಸರಿಸಿದೆ ಬ್ಯಾಂಕ್ ಗೆ ಹೋಗದೇ KYC ಅಪ್ಡೇಟ್ ಮಾಡಬಹುದು. ಮನೆಯಲ್ಲಿ ಕೂತು ಆನ್ಲೈನ್ ಮೂಲಕ KYC ಅಪ್ಡೇಟ್ ಮಾಡಲು ಕೆಳಗಿನ ವಿಧಾನ ಅನುಸರಿಸಿ.

  • ಮೊದಲಿಗೆ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಆನ್ಲೈನ್ ಅಪ್ಲೀಕೇಶನ್ ಅಥವಾ ಆ್ಯಪ್ ಮೂಲಕ ಲಾಗಿನ್ ಮಾಡಿ.
  • ಬ್ಯಾಂಕ್ ಖಾತೆ ಸೆಟ್ಟಿಂಗ್ ಆಯ್ಕೆಯಲ್ಲಿ KYC ಅಪ್ಡೇಟ್ (KYC Update) ವಿಭಾಗದ ಮೇಲೆ ಕ್ಲಿಕ್ ಮಾಡಿರಿ.
  • ಅದರಲ್ಲಿ ವಿಳಾಸ,ಫೋನ್ ನಂಬರ್ ಇತರ ಮಾಹಿತಿ ನೀಡುವಂತೆ ಕೇಳಲಾಗುವುದು ಅದನ್ನು ನಮೋದಿಸಿ.
  • ಬಳಿಕ ನಿಮ್ಮ ವಿಳಾಸ ಪುರಾವೆಯನ್ನು ಡಾಕ್ಯುಮೆಂಟ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು.
  • ಎಲ್ಲ ಮಾಹಿತಿ ನೀಡಿದ ಬಳಿಕ ಕೆವೈಸಿ ಯನ್ನು ನವೀಕರಿಸುವಂತೆ ಬ್ಯಾಂಕಿಗೆ ಈ ಮನವಿ ನೀವು ಸಲ್ಲಿಸಬಹುದು.

ಇಂದು ಬಹುತೇಕ ಬ್ಯಾಂಕಿನಲ್ಲಿ KYC ಕಡ್ಡಾಯ ಮಾಡಲಾಗುತ್ತಿದ್ದು ಬ್ಯಾಂಕು ಗ್ರಾಹಕರ ಹಿತದೃಷ್ಟಿ ಕಾಯುತ್ತಿದೆ. ಹಾಗಾಗಿ ಈ ಸರಳ ಮಾರ್ಗ ಬಹಳ ಅನುಕೂಲ ಆಗಲಿದೆ. ಒಟ್ಟಾರೆಯಾಗಿ KYC ಯನ್ನು ನೀವು ಮನೆಯಲ್ಲಿ ಕೂತು ಸಹ ಅಪ್ಡೇಟ್ ಮಾಡಬಹುದಾಗಿದೆ. ಆದರೆ ಈ ಸರಳ ವಿಧಾನ ನೀವು ಅನುಸರಿಸಲೇ ಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.

advertisement

Leave A Reply

Your email address will not be published.