Karnataka Times
Trending Stories, Viral News, Gossips & Everything in Kannada

RBI: ಹಣದ ವ್ಯವಹಾರ ಮಾಡುವ ಜನರಿಗೆ ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿಗೆ ತಂದ ಆರ್‌ಬಿಐ.

advertisement

ಇಂದು ಡಿಜಿಟಲ್ ಪಾವತಿ ಹೆಚ್ಚಾಗಿದೆ. ಬ್ಯಾಂಕ್ ನಲ್ಲಿ ಹಣ ಪಡೆಯುದಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಸಂಖ್ಯೆ ಈಗ ಕಡಿಮೆ ಯಾಗಿದೆ.ಇಂದು ಸಣ್ಣ ಮೊತ್ತದ ಹಣಕ್ಕಾದರೂ ನಾವು ಗೂಗಲ್ ಪೇ (Google Pay), ಪೋನ್ ಪೆ (PhonePe), ಎಟಿಎಮ್ (ATM) ಇತ್ಯಾದಿ ಯನ್ನೆ ಬಳಕೆ ಮಾಡುತ್ತೇವೆ. ಆದರೆ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದಂತೆ ನೀತಿ ನಿಯಮಗಳು ಕೂಡ ಹೆಚ್ಚಾಗುತ್ತದೆ. ಇಂದು ಹೆಚ್ಚಾಗಿ ಜನರು ಶೀಘ್ರದಲ್ಲಿ ಹಣ ಬೇಕು ಎಂದಾಗ ಎಟಿಎಮ್ ಗೆ ತೆರಳಿ ಎಟಿಎಮ್ ಕಾರ್ಡ್ ಮೂಲಕ ಹಣ ಪಡೆದು ಕೊಳ್ಳುತ್ತಾರೆ.

ಸೂಕ್ತ ಪರಿಹಾರ

ಕೆಲವೊಮ್ಮೆ ಎಟಿಎಂ ತುಂಬಾ ಸಹಾಯ ಹಸ್ತ ನೀಡಿದ್ರು ಕೆಲವೊಮ್ಮೆ ಸಮಸ್ಯೆ ಉಂಟು ಮಾಡುತ್ತದೆ. ಅನೇಕ ಬಾರಿ ಎಟಿಎಂನಿಂದ ಹಣವನ್ನು ಪಡೆಯುವಾಗ, ನಗದು ಬರದೇ ಇರುವುದು, ಕೆಲವೊಮ್ಮೆ ಎಟಿಎಮ್ ಕಾರ್ಡ್ ಬ್ಲಾಕ್ ಆಗುವುದು ಇತ್ಯಾದಿ ನಡೆಯಲಿದೆ. ಹಣ ಬರದೇ ಇದ್ದರೂ ನಿಮ್ಮ ಹಣವನ್ನು ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದಕ್ಕಾಗಿ ಅರ್ ಬಿಐ (RBI) ಸೂಕ್ತ ಮಾಹಿತಿ ಯೊಂದು ತಿಳಿಸಿದೆ.

ಆರ್‌ಬಿಐ ನಿಯಮ

advertisement

ನೀವು ಎಟಿಎಂ ಬಳಕೆ ಮಾಡಿದ್ದಲ್ಲಿ, ನಿಮ್ಮ ಎಲ್ಲಾ ಬ್ಯಾಂಕ್ ಮಾಹಿತಿ ವಿವರ ಸರಿಯಾಗಿ ನಮೂದಿಸಿದ ನಂತರವೂ ನೀವು ಹಣ ಹಿಂಪಡೆಯದಿದ್ದರೆ ಅದು ಎಟಿಎಂನಲ್ಲಿನ ಕೆಲವು ತಾಂತ್ರಿಕ ದೋಷವಾಗಿರಬಹುದು ಎಂದು ಮಾಹಿತಿ ನೀಡಿದೆ. ಈ ಹಣವನ್ನು ಖಾತೆಗೆ ಸಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ 5 ದಿನಗಳ ಕಾಲ ಸಮಯವನ್ನು ನಿಗದಿಪಡಿಸಿದ್ದು ಬ್ಯಾಂಕ್‌ಗಳು ನಿಗದಿತ ಅವಧಿಯೊಳಗೆ ಕಡಿತಗೊಳಿಸಿದ ಹಣವನ್ನು ಗ್ರಾಹಕರ ಖಾತೆಗೆ ಹಿಂತಿರುಗಿಸಬೇಕಾಗುತ್ತದೆ ಎಂದು ತಿಳಿಸಿದೆ.

ಶುಲ್ಕ ವಿಧಿಸಿದೆ

ಕೆಲವೊಮ್ಮೆ ಗ್ರಾಹಕರು ಕಡಿಮೆ ಬ್ಯಾಲೆನ್ಸ್ ಅಥವಾ ಬ್ಯಾಂಕ್ ಬ್ಯಾಲೆನ್ಸ್ (Bank Balance) ಇಲ್ಲದ ಕಾರಣ ಎಟಿಎಂ ವಹಿವಾಟು ಇಲ್ಲದೆ ವಿಫಲವಾದರೆ, ಕೆಲವೊಂದು ಬ್ಯಾಂಕ್ ಗಳು ಶುಲ್ಕ ವಿಧಿಸುತ್ತದೆ.ಈ ಹಿಂದೆ ತಮ್ಮ ಬ್ಯಾಂಕ್ ನ ಎಟಿಎಂನಲ್ಲಿ ಅಥವಾ ಇತರ ಬ್ಯಾಂಕ್ ಎಟಿಎಂನಲ್ಲಿ ಎಷ್ಟು ಸಲ ಬೇಕಾದರೂ ಹಣ ಪಡೆಯಲು ಅವಕಾಶವಿದ್ದು ಇದಕ್ಕೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯ ಕೂಡ ಇರಲಿಲ್ಲ. ಈಗ ಮಾತ್ರ ಶುಲ್ಕ ವಿಧಿಸಿದೆ.

ನಿಷ್ಕ್ರಿಯವಾಗಲಿದೆ

ಯುಪಿಐ (UPI) ಐಡಿ ಬಳಕೆ ಮಾಡಿ ಕೊಳ್ಳದೆ ಇದ್ದಲ್ಲಿ ನಿಷ್ಕ್ರಿಯಗೊಳ್ಳುವುದು ಪಕ್ಕವಾಗಿದೆ. ಒಂದು ವರ್ಷದ ಅವಧಿಯಲ್ಲಿ ID ಯಾವುದೇ ವ್ಯವಹಾರಗಳನ್ನು ಇದರ ಮೂಲಕ ನಡೆಸದಿದ್ದರೆ ಅದು ನಿಷ್ಕ್ರಿಯಗೊಳ್ಳುತ್ತದೆ. ಡಿಸೆಂಬರ್ ನಿಂದ ಯುಪಿಐ ಐಡಿ ನಿಷ್ಕ್ರಿಯಗೊಳ್ಳುತ್ತದೆ. ಒಟ್ಟಿನಲ್ಲಿ ಬ್ಯಾಂಕ್ ನ ನೀತಿ ನಿಯಮಗಳು ಸಮಯಕ್ಕೆ ತಕ್ಕಂತೆ ಬದಲಾವಣೆ ಆಗುತ್ತಲೆ ಇರುತ್ತದೆ. ಇದಕ್ಕಾಗಿ ಅರ್ ಬಿ ಐ ಕೂಡ ನಿಯಮ ಬದಲಾವಣೆ ಜಾರಿಗೆ ತರುತ್ತದೆ.

advertisement

Leave A Reply

Your email address will not be published.