Karnataka Times
Trending Stories, Viral News, Gossips & Everything in Kannada

CM Siddaramaiah: ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬರಗಾಲದ ಬೆಳೆ ಪರಿಹಾರದ ಬಗ್ಗೆ ಮಹತ್ವದ ಆದೇಶ.

advertisement

ರೈತರಿಗಾಗಿ ಸರಕಾರ ಬರ ಪರಿಹಾರವನ್ನು ನೀಡಲು ತಿರ್ಮಾನ ಮಾಡಿದೆ. ಈಗಾಗಲೇ ರಾಜ್ಯದಲ್ಲಿ ಮಳೆ ಬಾರದೇ, ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಕೃಷಿಯಲ್ಲಿ ಕುಂಠಿತ ಬೆಳವಣಿಗೆ ಕಂಡು ಬಂದಿದ್ದು ಇದಕ್ಕಾಗಿ ಸರಕಾರ ಬೆಳೆ ಪರಿಹಾರ ಮೊತ್ತವನ್ನು ನಿಗದಿ ‌ಪಡಿಸಿ, ಯಾವ ಸ್ಥಳಕ್ಕೆ ನೀಡಬೇಕು ಎಂದು ನಿಗದಿ ಪಡಿಸಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿಗಮ ಮಂಡಳಿ ಆಯ್ಕೆ ಕುರಿತು ಚರ್ಚೆ ಮಾಡಿ ಶಾಸಕರನ್ನು ಆಯ್ಕೆ ಮಾಡುತ್ತೇವೆ. ಬರಗಾಲದ ಪರಿಹಾರ ಕುರಿತು ಸೂಕ್ತವಾದ ಸಮೀಕ್ಷೆ ಮಾಡುತ್ತಿದ್ದೇವೆ. ರೈತರಿಗಾಗಿ ಸಹಾಯ ಮಾಡಲು ನಾವು ಯಾವತ್ತು ಸಿದ್ದ ಇರುತ್ತೇವೆ.ಎನ್ ಡಿ ಆರ್ ಎಫ್ ಪ್ರಕಾರ ಪರಿಹಾರ ಕೊಡುತ್ತೇವೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ

ರೈತರು ಬೆಳೆ ಸರಿಯಾಗಿ ಬೆಳೆಯಲಾಗದೇ ಕಷ್ಟದಲ್ಲಿ ಸಿಲುಕಿದ್ದಾರೆ. ಇದಕ್ಕಾಗಿ ನಾವು ಹಲವು ರೀತಿಯ ಪರಿಹಾರ ಕಂಡು ಕೊಳ್ಳುತ್ತಿದ್ದೇವೆ. ತೆರಿಗೆ ಹಣ ಕೊಡಲು ಕೇಂದ್ರ ಒಪ್ಪುತ್ತಿಲ್ಲ ಎಂದರು. ಬರಗಾಲದಲ್ಲಿ ನರೇಗಾ ಯೋಜನೆಯ ಮೂಲಕ ನೂರು ದಿನದ ಬದಲು 150 ದಿನ ಕೆಲಸ ಕೊಡಬೇಕು ಎಂಬ ನಿಯಮವಿದೆ. ಆದರೆ, ಇದಕ್ಕೂ ಕೇಂದ್ರ ಸರ್ಕಾರದ ಅನುಮತಿ ನೀಡುತ್ತಿಲ್ಲ ಎಂದರು.

advertisement

ಮಂಜೂರು ಆಗಿದೆ

2023 ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗಳಿಗೆ ಬೆಳೆ ವಿಮೆ ಯೋಜನೆಯಡಿ ಪರಿಹಾರ ದೊರಕಿಸಿಕೊಡಲು ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದೆ. ನೋಂದಾಯಿಸಿಕೊಂಡ ಅರ್ಹ ರೈತರಿಗೆ ಮದ್ಯಂತರ ವಿಮೆ ಪರಿಹಾರ ಬಿಡುಗಡೆ ಆಗಿದ್ದು, ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕಾರ್ಯ ನಡೆಯುತ್ತಿದೆ‌.

ನೊಂದಣಿ ‌ಮಾಡಿ

ಬೆಳೆ ಸಾಲವನ್ನು ಪಡೆದ ರೈತರು ಹಾಗೂ ಸಾಲಪಡೆಯದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಇದ್ದು , ಆಯಾ ತಾಲೂಕಿಗೆ ಸಂಬಂಧಪಟ್ಟ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್‌ ಖಾತೆ ಪಾಸ್‌ ಪುಸ್ತಕ, ಆಧಾರ್ ವಿವರಗಳನ್ನು ಲಗತ್ತಿಸಿ ನೊಂದಣಿ ಮಾಡಬಹುದಾಗಿದೆ. ಬೆಳೆ ವಿಮೆ (Crop Insurance) ಕುರಿತು ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1800-200-5142, ಹತ್ತಿರದ ಕೃಷಿ‌ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ಕೇಂದ್ರ ಕಚೇರಿ ಸಂಪರ್ಕ ಮಾಡಿ.

advertisement

Leave A Reply

Your email address will not be published.