Karnataka Times
Trending Stories, Viral News, Gossips & Everything in Kannada

Rishab Shetty: ಕಾಂತಾರ ಚಾಪ್ಟರ್‌ 1 ರಲ್ಲಿ ರಿಷಭ್ ಶೆಟ್ಟಿ ಪಡೆಯುತ್ತಿರುವ ಸಂಭಾವನೆ ಎಷ್ಟು?

advertisement

ಕಾಂತರ, ಸಿನಿಮಾ ಸಿನಿರಂಗದಲ್ಲಿ ಬಹಳಷ್ಟು ಸದ್ದು ಮಾಡಿರುವ ಚಿತ್ರ ಇದಾಗಿದೆ. ಸಿನಿ‌ರಸಿಕರು ಕಾಂತರ ಚಿತ್ರದ ಬಗ್ಗೆ ಇಂದಿಗೂ ಕೂಡ ಮಾತನಾಡುತ್ತಿದ್ದಾರೆ. ಸ್ಯಾಂಡಲ್​ವುಡ್ ನಟ ರಿಷಬ್ ಶೆಟ್ಟಿ (Rishab Shetty) ಕನ್ನಡಿಗರಿಗೆ ಬಿಟ್ಟರೆ ಇತರ ಭಾಷೆಯವರಿಗೆ ಈ ಮೊದಲು ಪರಿಚಯ ಇದ್ದದ್ದು ಕಡಿಮೆ. ಅದರೆ ಕಾಂತಾರ ಸಿನಿಮಾದ ನಂತರ ಬಹಳಷ್ಟು ಫೇಮ್ ಕ್ರಿಯೇಟ್ ಮಾಡಿಕೊಂಡರು. ಈಗ ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೆ ದೇಶಾದ್ಯಂತ ಇವರ ಹೆಸರು ಕೇಳಿಬರುತ್ತಿದೆ. ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್, ಬಾಲಿವುಡ್ ನಲ್ಲಿಯು ರಿಷಭ್ ಅವರು ಹೆಸರು ಗಿಟ್ಟಿಸಿಕೊಂಡಿದ್ದಾರೆ.

ದೊಡ್ಡ ಮಟ್ಟದ ಸಕ್ಸಸ್

ಕಾಂತಾರ ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಬಹಳಷ್ಟು ಹೆಸರು ಮಾಡಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಎಳೆ ಎಳೆಯಾಗಿ ತಿಳಿಸಿ ಪ್ರೇಕ್ಷಕರನ್ನು ಬಹಳಷ್ಟು ಆಕರ್ಷಿಸಿತ್ತು. ಸಿನಿಪ್ರೀಯರಲ್ಲೆ ಬಹಳಷ್ಟು ಕ್ರೇಜ್ ಹುಟ್ಟಿಸಿತ್ತು. ಇದೀಗ ಈ ಮೊದಲು ಬಂದ ಕಾಂತಾರಗೂ ಮುನ್ನ ಏನಾಗಿತ್ತು ಅನ್ನೋದನ್ನು ತೆರೆಮೇಲೆ ತರುವುದಕ್ಕೆ ರಿಷಭ್ ಶೆಟ್ಟಿ ಹೊರಟಿದ್ದಾರೆ.

ಕಾಂತರ ಪಾರ್ಟ್ 1

ಕಾಂತಾರ ಚಿತ್ರದ ‌ಮುನ್ನುಡಿ ಮುಂದಕ್ಕೆ ಆರಂಭವಾಗಲಿದೆ ಕಾಂತಾರ ಅಧ್ಯಾಯ ಒಂದನ್ನು ರಿಷಭ್ ಆರಂಭ ಮಾಡಿದ್ದಾರೆ. ಆನೆಗುಡ್ಡೆ ದೇವಸ್ಥಾನ ದಲ್ಲಿ ಸಿನಿಮಾದ ಮುಹೂರ್ತ ನೇರವೇರಿದೆ. ಇದೀಗ ಕಾಂತಾರ ಚಾಪ್ಟರ್ ಒನ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಭಾರೀ ವೈರಲ್‌ ಆಗಿದ್ದು, ಎಲ್ಲಿ ನೋಡಿದ್ರೂ ಕಾಂತರ ಹವಾದ ಬಗ್ಗೆಯೇ ಮಾತ ನಾಡುತ್ತಿದ್ದಾರೆ.

advertisement

ಹವಾ ಕ್ರಿಯೇಟ್ ಮಾಡಿದೆ

ಹೌದು ಕಾಂತಾರ ಚಾಪ್ಟರ್ ಒನ್ (Kantara Chapter 1) ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ರಿಷಭ್ ಲುಕ್ ಡಿಫರೆಂಟ್  ಇದೆ. ಲಾಂಗ್ ಹೇರ್ ಮತ್ತು ಬೆಂಕಿ ಉಂಡೆಯಂತಹ ಕಣ್ಣುಗಳಿಂದ ರಿಷಬ್ ಶೆಟ್ಟಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. 7 ಭಾಷೆಗಳಲ್ಲಿ ಟೀಸರ್​ ರಿಲೀಸ್ ಮಾಡಲಾಗಿದೆ.

ಮುಂದಿನ ವಾರದಲ್ಲಿ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದು ಕರಾವಳಿ ಸುತ್ತಮುತ್ತ ಪ್ರದೇಶಗಳಲ್ಲಿ ಶೂಟಿಂಗ್​ಗಾಗಿ ಲೊಕೇಶನ್ ಕೂಡ ಸಿದ್ದತೆ ಮಾಡಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ ವಿಡಿಯೋ ನಂಬರ್‌ 1 ಟ್ರೆಂಡಿಂಗ್‌ನಲ್ಲಿದೆ. ಕಾಂತರದ ಫಸ್ಟ್‌ಲುಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಹತ್ತು ದಶಲಕ್ಷ ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಸಂಭಾವನೆ ಎಷ್ಟು?

ಕಾಂತರದಲ್ಲಿ ರಿಷಭ್ ಅವರು ವಿಭಿನ್ನ ವಾಗಿ ಕಾಣಿಸಿಕೊಂಡು, ಧಾರ್ಮಿಕ ದೈವಿಕ ನಂಬಿಕೆ ಕರಾವಳಿಗರಲ್ಲಿ ಯಾವ ರೀತಿ ಇದೆ ಎಂದು ತೋರಿಸಿ ಕೊಟ್ಟಿದ್ದರು. ಈ ಮೊದಲು ಮಾಹಿತಿ ಪ್ರಕಾರ ಕಾಂತಾರ ಚಿತ್ರಕ್ಕೆ ರಿಷಭ್ ಅವರು ಸಂಭಾವನೆ ಪಡೆದದ್ದು ಐದೂವರೆ ಕೋಟಿ ರೂಪಾಯಿ ಎನ್ನಲಾಗಿದೆ. ಇದೀಗ ಕಾಂತರ ಪಾರ್ಟ್1 ಇದರಲ್ಲಿ ರಿಷಭ್ ಗೆಟಪ್ ಮತ್ತಷ್ಟು ವಿಭಿನ್ನ ವಾಗಿದ್ದು ಬಹಳ ಕಲಾತ್ಮಕ ರೀತಿಯಲ್ಲಿ ನಟನೆ ಮಾಡಲಿದ್ದಾರೆ. ಪಾರ್ಟ್ 1 ರಲ್ಲಿ ಇವರ ಸಂಭಾವನೆ 6 ಕೋಟಿಗೂ ಅಧಿಕ ವಾಗಿರಬಹುದು ಎಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ.

advertisement

Leave A Reply

Your email address will not be published.