Karnataka Times
Trending Stories, Viral News, Gossips & Everything in Kannada

BCCI: ಟಿ 20 ವಿಶ್ವಕಪ್ ಗೆ ಭಾರತ ತಂಡದ ನಾಯಕ ಸ್ಥಾನಕ್ಕೆ ಈ ಸ್ಟಾರ್ ಆಟಗಾರ ಫಿಕ್ಸ್!!

advertisement

ಕ್ರಿಕೆಟ್ ಬಹುತೇಕರ ನೆಚ್ಚಿನ ಆಟವಾಗಿದೆ. ಇತ್ತೀಚೆಗಷ್ಟೇ ವಿಶ್ವಕಪ್ ಸರಣಿ‌ ರೋಚಕ ಆಟ ಮುಗಿದಿದ್ದು ಭಾರತ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಇದಾದ ಬಳಿಕ ಭಾರತೀಯ ತಂಡದ ಮೇಲೆ ಅಭಿಮಾನಿಗಳಿಗೆ ಇದ್ದ ನಂಬಿಕೆ ಹುಸಿಯಾಗಿದೆ. ಈ ಸೋಲಿನ ಬಳಿಕ BCCI ಕೆಲ ಪ್ರಮುಖ ನಿರ್ಧಾರಗಳನ್ನು ಕೈ ಗೊಂಡಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಮಗೆ ನಾವು ನೀಡಲಿದ್ದೇವೆ.

ಯಾವುದು ಈ ನಿರ್ಣಯ?

ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರು ಈ ಬಾರಿ ಅಷ್ಟು ಮ್ಯಾಚ್ ನಲ್ಲಿ ಟೀಂ ಇಂಡಿಯಾ ಗೆದ್ದಿತ್ತು. ಇದಕ್ಕೆ ತಂಡದ ಬಲ ಮತ್ತು ಒಗ್ಗಟ್ಟೇ ಕಾರಣ ಎನ್ನಲಾಗುತ್ತಿದೆ. ಹಾಗಾಗಿ BCCI ಕೂಡ ಕೆಲ ಪ್ರಮುಖ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ರೋಜರ್ ಬಿನ್ನಿ (Roger Binny) ನೇತೃತ್ವದಲ್ಲಿ ಮುಖ್ಯಕೋಚ್ ರಾಹುಲ್ ದ್ರಾವಿಡ್ (Rahul Dravid) ಸೇರಿದಂತೆ ಸಹಾಯಕ ಸಿಬಂದಿಯ ಸೇವಾ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ‌.

ದ್ರಾವೀಡ್ ಅವರು ಕೋಚ್ ಆಗಿ ಮುಂದುವರಿಯುವ ಜೊತೆಗೆ ರೋಹಿತ್ ಶರ್ಮಾ (Rohit Sharma) ಅವರನ್ನು T20ನಾಯಕನಾಗಿ ಇರಲಿದ್ದಾರೆ. 2024ರಲ್ಲಿ T20 ಮಾರ್ಗ ಸೂಚಿಗಳ ಬಗ್ಗೆ ಚರ್ಚಿಸಲು BCCI ಕಾರ್ಯದರ್ಶಿಯಾದ ಜೈ ಶಾ (Jay Shah) ಅವರು ದೆಹಲಿಯಲ್ಲಿ ಸಭೆ ಸೇರಲಿದೆ ಎಂದು ಮಾಧ್ಯಮ ವರದಿ ತಿಳಿಸಿವೆ. ದಕ್ಷಿಣಾ ಆಫ್ರಿಕಾ T20ಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಹೊರಗುಳಿಯುವ ಜೊತೆಗೆ ಪ್ರೋಟೀಸ್ ಮೆನ್ ಅವರ ವಿರುದ್ಧದ ತಂಡವನ್ನು ರೋಹಿತ್ ಅಥವಾ ಸೂರ್ಯಕುಮಾರ್ ಯಾದವ್ ಮುನ್ನಡೆಸುವ ಸಾಧ್ಯತೆ ಇದೆ ಎಂದು ಸಹ ಪಿಟಿಐನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

advertisement

ವಿರಾಟ್ ನಡೆ ಏನು?

ಮುಂದಿನ ವಿಶ್ವಕಪ್ ಸಮಯಕ್ಕೆ ವಿರಾಟ್ ಕೊಹ್ಲಿ ಚಾನ್ಸ್ ಸಿಗೊದು ಅನುಮಾನ ಹಾಗಿದ್ದರೂ ದಕ್ಷಿಣಾ ಆಫ್ರಿಕಾ ಆಟಕ್ಕೂ ಮೊದಲೇ ರೆಸ್ಟ್ ಲೀವ್ ಮಾಡುತ್ತಿದ್ದಾರೆ. ಇದು ಅವರ ವೈಯಕ್ತಿಕ ನಿರ್ಧಾರವಾಗಿದ್ದು ರೋಹಿತ್ ನಂತೆ ವಿರಾಟ್ ಕೊಹ್ಲಿ ಕೂಡ ಒಂದು ವರ್ಷಕ್ಕಿಂತ ಹೆಚ್ಚು T20ಆಡಿಲ್ಲ. ಅವರ ಗಮನ ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿದೆ.

BCCI ನಿರ್ಣಯ

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಈ ಬಾರಿ ಯಾರೆಲ್ಲ ತಂಡದಲ್ಲಿ ಇರಲಿದ್ದಾರೆ ಎಂದು ಕೆಲವೇ ದಿನದಲ್ಲಿ ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಲಿದೆ. ಪ್ರತಿನಿಧಿಸಲಿರುವ ಭಾರತ ತಂಡದ ಬಗ್ಗೆ ಶೀಘ್ರ ಮಾಹಿತಿ ನೀಡುವುದಾಗಿ ಕೂಡ ಈಗಾಗಲೇ BCCI ತಿಳಿಸಿದ್ದುಈ ನಡುವೆ ದಕ್ಷಿಣಾ ಆಫ್ರಿಕಾ ವಿರುದ್ಧದ T20ಯಲ್ಲಿ ನಾಯಕತ್ವ ವಹಿಸುವಂತೆ ರೋಹಿತ್ ಶರ್ಮಾ ಅವರಲ್ಲಿ ಕೇಳಲಾಗಿದ್ದು ಈ ನಿರ್ಣಯ ಬಹುತೇಕ ಕ್ರಿಕೆಟ್ ಪ್ರಿಯರಿಗೆ ಖುಷಿ ನೀಡಿದ ವಿಚಾರವಾಗಿದೆ.

advertisement

Leave A Reply

Your email address will not be published.