Karnataka Times
Trending Stories, Viral News, Gossips & Everything in Kannada

Rs 2000 Notes: 2000 ರೂಪಾಯಿ ನೋಟುಗಳ ಬಗ್ಗೆ ಹೊಸ ಸುತ್ತೋಲೆ ಪ್ರಕಟಿಸಿದ ರಿಸರ್ವ್ ಬ್ಯಾಂಕ್

advertisement

ನಿಮಗೆಲ್ಲರಿಗೂ ತಿಳಿದಿರಬಹುದು 2016ನೇ ಇಸ್ವಿಯಲ್ಲಿ ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ಹಾಗೂ ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಜನರಿಗೆ ಸರ್ಪ್ರೈಸ್ ನೀಡಿತ್ತು. ಕಳ್ಳ ನೋಟುಗಳು ಹಾಗೂ ಕಪ್ಪು ಹಣ ಹೆಚ್ಚಾಗಿ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿತ್ತು. ಅದಾದ ನಂತರ ಹೊಸದಾಗಿ 2,000 ಮತ್ತು 500 ರೂಪಾಯಿ ನೋಟುಗಳನ್ನು ಜಾರಿಗೆ ತರಲಾಗಿತ್ತು. ಇವುಗಳು ಆರಂಭಿಕ ದಿನಗಳಲ್ಲಿ ಜನರಿಗೆ ಸ್ವಲ್ಪಮಟ್ಟಿಗೆ ಕಷ್ಟವನ್ನು ತಂದುಕೊಟ್ಟರು ಕೂಡ ನಂತರದ ದಿನಗಳಲ್ಲಿ ಜನರು ಕೂಡ ಈ ನೋಟುಗಳಿಗೆ ಒಗ್ಗಿಕೊಳ್ಳುತ್ತಾರೆ‌.

WhatsApp Join Now
Telegram Join Now

ಆದರೆ ಕಳೆದ ವರ್ಷ ವರ್ಷ ನಿಮಗೆಲ್ಲರಿಗೂ ತಿಳಿದಿರಬಹುದು 2,000 ರೂಪಾಯಿಗಳ (Rs 2000 Notes) ಪಿಂಕ್ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾನ್ ಮಾಡಿದ್ದು ಇದು ಕೂಡ ಪ್ರತಿಯೊಬ್ಬ ಭಾರತೀಯರಿಗೂ ಕೂಡ ಬೇಸರದ ವಿಚಾರವಾಗಿತ್ತು. ಯಾಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪದೇ ಪದೇ ನೋಟುಗಳನ್ನು ಬದಲಾಯಿಸುವಂತಹ ಕೆಲಸವನ್ನು ಮಾಡ್ತಾ ಇದ್ದಿದ್ದು ಯಾರಿಗೂ ಕೂಡ ಅರ್ಥವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಬ್ಯಾನ್ ಆಗಿರುವಂತಹ ಪಿಂಕ್ ನೋಟ್ ಬಗ್ಗೆ ಶಾ-ಕಿಂಗ್ ಸರ್ಪ್ರೈಸ್ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ:

 

Image Source: India Today

 

advertisement

ಏನೋ ಸರ್ಪ್ರೈಸ್ ನೀಡಿದೆ ಅಂದ ಮಾತ್ರಕ್ಕೆ 2000 ರೂಪಾಯಿಗಳ (Rs 2000 Notes) ಪಿಂಕ್ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತೆ ವಾಪಸ್ ತರ್ತಾ ಇದೆ ಅಂತ ಅನ್ಕೋಬೇಡಿ. ಈಗಾಗಲೇ ಈ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬ್ಯಾನ್ ಮಾಡಿದೆ.

ಹೀಗಿದ್ದರೂ ಕೂಡ ಸಾಕಷ್ಟು ಹಣ ಈ ನೋಟಿನ ರೂಪದಲ್ಲಿ ಇನ್ನೂ ಕೂಡ ಜನರ ಬಳಿ ಹಾಗೆ ಉಳಿದುಕೊಂಡಿದೆ ಅನ್ನೋದಾಗಿ ತಿಳಿದು ಬಂದಿದ್ದು ಇದರ ಮೊತ್ತ ಕೇಳಿದರೆ ಖಂಡಿತವಾಗಿ ನೀವು ಕೂಡ ತಲೆ ತಿರುಗಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದಾಗಿದೆ.

 

Image Source: The New Indian Express

 

2023ರ ಮೇ 19 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2,000ಗಳ ನೋಟನ್ನು ವಾಪಸ್ ಹಿಂದೆ ತೆಗೆದುಕೊಳ್ಳುವಂತಹ ನಿಯಮವನ್ನ ಅಧಿಕೃತವಾಗಿ ಘೋಷಣೆ ಮಾಡುತ್ತದೆ. ಆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಇದ್ದಂತಹ 2,000 ರೂಪಾಯಿ ನೋಟುಗಳ ಅಧಿಕೃತ ಮೌಲ್ಯ 3.56 ಲಕ್ಷ ಕೋಟಿ ರೂಪಾಯಿ.

ಒಟ್ಟಾರೆಯಾಗಿ ಇದುವರೆಗೆ ಇರುವಂತಹ ನೋಟುಗಳಲ್ಲಿ 97.87 ಪ್ರತಿಶತ ನೋಟುಗಳನ್ನು ಹಿಂದಿರುಗಿಸಲಾಗಿದ್ದು ಈಗಲೂ ಕೂಡ ಜನರ ನಡುವೆ 7581 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಹಾಗೆ ಇವೆ ಎಂಬುದಾಗಿ ತಿಳಿದು ಬಂದಿದೆ. ಸರ್ಕಾರದ ನಿಯಮಗಳನ್ನು ನಮ್ಮ ಜನರು ಎಷ್ಟರಮಟ್ಟಿಗೆ ಪಾಲಿಸುತ್ತಿದ್ದಾರೆ ಅನ್ನೋದನ್ನ ಈ ಮೂಲಕವೇ ನೋಡಬಹುದಾಗಿದೆ.

advertisement

Leave A Reply

Your email address will not be published.