Karnataka Times
Trending Stories, Viral News, Gossips & Everything in Kannada

PM Kisan Money: ರೈತರ 17ನೇ ಕಂತಿನ ಕಿಸಾನ್ ಹಣ ಕೆಲವರಿಗೆ ಬಂದಿಲ್ಲ ಯಾಕೆ ಗೊತ್ತಾ? ಸರ್ಕಾರ ಸ್ಪಷ್ಟನೆ

advertisement

ರೈತರು ಈ ದೇಶದ ಮುಖ್ಯ ಭಾಗವಾಗಿದ್ದಾರೆ.ಹಾಗಾಗಿ ಸರಕಾರ ಕೂಡ ಕೃಷಿ ಕಾರ್ಯಗಳಿಗೆ ಉತ್ತೇಜನ ನೀಡುತ್ತಿದೆ.ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Money) ಕೂಡ ಒಂದಾಗಿದೆ.ರೈತರಿಗೆ ಕೃಷಿ ಬೀಜ ಗಳನ್ನು ಖರೀದಿ ಮಾಡಲು, ಕೃಷಿ ಬಳಕೆಯ ಸಾಮಾಗ್ರಿ ಗಳನ್ನು ಖರೀದಿ ಮಾಡಲು ಈ ಯೋಜನೆಯಡಿ ಆರ್ಥಿಕ ಸಹಾಯ ನೀಡಲಾಗುತ್ತದೆ.

WhatsApp Join Now
Telegram Join Now

ಏನಿದು ಯೋಜನೆ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ ಮೂಲಕ ರೈತರ ಅಭಿವೃದ್ಧಿ ಗಾಗಿ ಪ್ರತಿ ವರ್ಷ ಎಲ್ಲಾ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ 6000 ಮೊತ್ತವನ್ನು ನೇರವಾಗಿ‌ ರೈತರ ಖಾತೆಗೆ ವರ್ಗಾವಣೆ ಮಾಡುತ್ತದೆ. ಈಗಾಗಲೇ ಹದಿನಾರು ಕಂತಿನ ವರೆಗೆ ಕಿಸಾನ್ ಹಣ ಬಿಡುಗಡೆ ಯಾಗಿದ್ದು, ಆದರೆ ಈ ಬಾರಿ ಈ ರೈತರಿಗೆ ಹದಿನೇಳನೆಯ ‌ಕಂತಿನ ಕಿಸಾನ್‌ ಕಂತಿನ ಹಣ (PM Kisan Money) ಖಾತೆಗೆ ಬರುವುದಿಲ್ಲ. ಇದಕ್ಕೆ ಕಾರಣವೇನು? ಯಾರಿಗೆ ಹಣ ಜಮೆಯಾಗೋದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಹದಿನೇಳನೆಯ ಕಂತಿನ ಹಣ?

 

Image Source: India.Com

 

advertisement

ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ 6,000 ರೂ. ನೀಡಲಿದ್ದು 16ನೇ ಕಂತಿನ ಹಣವನ್ನು 2024ರ ಫೆಬ್ರವರಿ 28ರಂದು ಬಿಡುಗಡೆ ಮಾಡಿತ್ತು. ಇದೀಗ ಹದಿನೇಳನೆಯ ‌ಕಂತಿನ ಹಣ (PM Kisan Money) ಕ್ಕಾಗಿ ರೈತರು ಕಾಯುತ್ತಿದ್ದು ಇದೇ ಜೂನ್ ತಿಂಗಳಿನ 20 ರ ನಂತರ 17ನೇ ಕಂತಿನ ಹಣ ಬಿಡುಗಡೆ ಆಗಬಹುದು.

ಇವರಿಗೆ ಹಣ ಇಲ್ಲ:

 

Image Source: Amar Ujala

 

  • ಕುಟುಂಬದ ಒಬ್ಬ ಸದಸ್ಯ ರೈತನಿಗೆ ಮಾತ್ರ ಈ ಹಣ ಜಮೆಯಾಗಲಿದೆ. ಕೇವಲ ಒಬ್ಬ ವ್ಯಕ್ತಿ, ತಂದೆ ಅಥವಾ ಮಗ ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸ್ವಂತ ಸಾಗುವಳಿ ಭೂಮಿ ಇಲ್ಲದವರಿಗೆ ಹಣ ಇಲ್ಲ.
  • ಇ-ಕೆವೈಸಿ ಕಡ್ಡಾಯ ಎಂದು ಈಗಾಗಲೇ ಸರಕಾರ ಹಲವು ಭಾರಿ ಸೂಚನೆ ನೀಡಿದೆ. ಈ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದ ರೈತರಿಗೆ ಹಣ ಜಮೆಯಾಗೋದಿಲ್ಲ
  • ಯಾರ ಕುಟುಂಬದಲ್ಲದರೂ ಸರಕಾರಿ ಕೆಲಸ ಮಾಡುತ್ತಿದ್ದರೆ ಅವರಿಗೆ ಹಣ ಇಲ್ಲ
  • ಬ್ಯಾಂಕ್ ಖಾತೆ ನಿಷ್ಕ್ರಿಯ, ಆಧಾರ್ ಅಪ್ಡೇಟ್, ಇತ್ಯಾದಿ ಸಮಸ್ಯೆ ‌ಇದ್ದಲ್ಲಿ ಹಣ ಜಮೆಯಾಗೋದಿಲ್ಲ.

ಇ-ಕೆವೈಸಿ ಅಪ್​ಡೇಟ್ ಮಾಡಿ:

ಪಿಎಂ ಕಿಸಾನ್ ಯೋಜನೆಯ ಹಣ (PM Kisan Money) ಖಾತೆಗೆ ಬರಬೇಕಾದರೆ ಫಲಾನುಭವಿಗಳು ಇ-ಕೆವೈಸಿ ಅಪ್​ಡೇಟ್ ಮಾಡುವುದು ಬಹಳ ಮುಖ್ಯ. ಕೆವೈಸಿ ಅಪ್​ಡೇಟ್ ಮಾಡಿರದಿದ್ದರೆ ಹಣ ಬರುವುದಿಲ್ಲ.‌ ಹಾಗಾಗಿ ಈ ಕೆಲಸ ಮೊದಲು ಮಾಡಿ.

advertisement

Leave A Reply

Your email address will not be published.