Karnataka Times
Trending Stories, Viral News, Gossips & Everything in Kannada

Yuvanidhi Scheme: ಯುವನಿಧಿ ಯೋಜನೆ ಅರ್ಜಿ ಸಲ್ಲಿಕೆ ಮಾಡಿದವರಿಗೆ ಮತ್ತೊಂದು ಗುಡ್ ನ್ಯೂಸ್, ಹಣದ ಜೊತೆಗೆ ಮತ್ತೊಂದು ಸೌಲಭ್ಯ ಸಿಗಲಿದೆ.

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯ ಸೌಲಭ್ಯ ದೊರೆಯಲು ಬಾಕಿ ಇದ್ದು ಇದೀಗ ನಿರುದ್ಯೋಗ ಯುವಕ ಯುವತಿಯರಿಗೆ ಅರ್ಜಿ ಸಲ್ಲಿಕೆ ಮಾಡಲು ಕೂಡ ಅವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ 3,000 ರೂ. ಮತ್ತು 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ‌.ಉದ್ಯೋಗ ಸಿಗದೇ ಇದ್ದವರು ಈ ಯೋಜನೆಯಡಿ ಮಾಸಿಕ ಹಣ ಪಡೆಯಲು ಅರ್ಹರಾಗಿದ್ದು ಅರ್ಜಿ ಸಲ್ಲಿಸುವ ಫಲಾನುಭವಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ (Diploma) ಅಥವಾ ಪದವಿ (Degree) ಪಾಸಾಗಿದ್ದರೆ ಮಾತ್ರ ನೊಂದಣಿ ಮಾಡಬಹುದು.

ಈ ಯೋಜನೆಯು ಜಾರಿ:

 

 

ಈಗಾಗಲೇ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಯುಜನರ ಉನ್ನತಿಗಾಗಿ ರಾಜ್ಯ ಸರ್ಕಾರ ಯುವ ನಿಧಿ ಯೋಜನೆ (Yuva Nidhi Scheme) ಯೊಂದಿಗೆ ನಿರುದ್ಯೋಗಿಗಳಿಗೆ ಉದ್ಯಮಶೀಲತೆ ಕಲ್ಪಿಸಿ ಉದ್ಯೋಗ ನೀಡುವ ಗುರಿಯನ್ನು ಸಹ ಹೊಂದಿದೆ. ಯುವನಿಧಿ ಯೋಜನೆಯೊಂದಿಗೆ ನೊಂದಣಿ ಮಾಡಿದ ಫಲಾನುಭವಿಗಳಿಗೆ ಉದ್ಯೋಗ ದೊರಕಿಸಿ ಕೊಡುವಂತಹ ಸಂವಹನ ಕೌಶಲ್ಯ ಕೋರ್ಸ್ , ಉದ್ಯಮಶೀಲತೆ ತರಬೇತಿ, ಸ್ವ ಉದ್ಯೋಗ ತರಭೇತಿ ‌ಇತ್ಯಾದಿ ಗಳನ್ನು ಸಹ ನೀಡಲಾಗುತ್ತದೆ.

advertisement

ಯಾವಾಗ ಹಣ ಜಮೆ?

 

 

ಯುವನಿಧಿ ಯೋಜನೆಯ ಹಣ (Yuva Nidhi Scheme Money) ಸ್ವಾಮಿ ವಿವೇಕಾನಂದರ (Swami Vivekananda) ಜನ್ಮ ದಿನ ದಂದು ಅಂದರೆ ಜನವರಿ 12 ರಂದು ಡಿ.ಬಿ.ಟಿ. ಮೂಲಕ ಅರ್ಜಿ ಸಲ್ಲಿದವರಿಗೆ ನಿರುದ್ಯೋಗ ಭತ್ಯೆ ಹಣ ಜಮೆ ಮಾಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದರೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ Gram One, Karnataka One ಗಳಲ್ಲೂ ಅರ್ಜಿ ಸಲ್ಲಿಕೆ ಮಾಡುವ ಅವಕಾಶ ಸಹ ಇದೆ.

ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ:

ವಿದ್ಯಾಭ್ಯಾಸ ಪಡೆದ ಯುವಕ ಯುವತಿಯರಿಗೆ ಉದ್ಯೋಗ ದೊರಕಲು ತರಭೇತಿ ಸಹ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳವಂತೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ನೈಸ್ ಅಕಾಡೆಮಿ ಎಂಬ ತರಭೇತಿ ಕೇಂದ್ರ ಸ್ಥಾಪಿಸಿದ್ದು ಇದರ ವತಿಯಿಂದ ತರಭೇತಿ ನೀಡಲಾಗುತ್ತದೆ. ಇನ್ನು ರಾಜಧಾನಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು ನಂತರದಲ್ಲಿ ವಿಭಾಗ, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆರಂಭ ಮಾಡಲಾಗುತ್ತದೆ.

advertisement

Leave A Reply

Your email address will not be published.