Karnataka Times
Trending Stories, Viral News, Gossips & Everything in Kannada

AnnaBhagya: ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌, 5 ಕೆಜಿ ಹೆಚ್ಚುವರಿ ಅಕ್ಕಿ ನೀಡುವವರೆಗೂ ಹಣ ಜಮಾ.

advertisement

ಕಾಂಗ್ರೆಸ್ ಪಕ್ಷದ ಪ್ರಮುಖ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ (AnnaBhagya) ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುತ್ತಿರುವ ವಿಚಾರವಾಗಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ನಿನ್ನೆ ದೊಡ್ಡಬಳ್ಳಾಪುರದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಕೆಲವಡೆ ಅಕ್ಕಿ ಬೇಕು, ಇನ್ನು ಕೆಲವೆಡೆ ಹಣ ಬೇಕು ಎಂದು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಶೇ 70 ರಿಂದ 80% ಜನ ಅಕ್ಕಿ ಬೇಕು ಅಂತ ಕೇಳುತ್ತಿದ್ದಾರೆ. ಅಕ್ಕಿ ಕೊಡಬೇಕು ಎಂಬ ಯೋಚನೆಯಿದೆ. ಆದಷ್ಟು ಬೇಗ ಅಕ್ಕಿಯನ್ನೇ ಕೊಡುವ ಕೆಲಸ ಮಾಡುತ್ತೇವೆ ಎಂದು ಅವರು ಆಶ್ವಾಸನೆ ನೀಡಿದ್ದಾರೆ.

ಆದಷ್ಟು ಬೇಗ ಅಕ್ಕಿ ಕೊಡುತ್ತೇವೆ

ಆಂಧ್ರ ಪ್ರದೇಶ, ತೆಲಂಗಾಣದಿಂದ ಸೇರಿದಂತೆ ಹಲವಡೆಯಿಂದ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ಆದರೆ ಸಮರ್ಪಕವಾಗಿ ಬೆಲೆ ನಿಗದಿಯಾಗುತ್ತಿಲ್ಲ. ಈ ಬಾರಿ ಅಕ್ಕಿಯ ಉತ್ಪಾದನೆಯು ಕಡಿಮೆಯಾಗಿದೆ. ಆದರೂ ಸಹ ಆದಷ್ಟು ಬೇಗ ಅಕ್ಕಿ ಕೊಡುವ ಪ್ರಯತ್ನವನ್ನ ನಾವು ಮಾಡುತ್ತೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

advertisement

ಅಕ್ಕಿ ಬದಲಾಗಿ ಹಣ ವರ್ಗಾವಣೆ

ಆದರೆ ಅಲ್ಲಿಯವರೆಗೆ  ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ಹೇಳಿದಂತೆ ಹಣ ಹಾಕುತ್ತೇವೆ.ರಾಜ್ಯದಲ್ಲಿ ಸುಮಾರು 70% ರಿಂದ 80% ನಷ್ಟು ಜನ ಉಚಿತ ಅಕ್ಕಿಯನ್ನೇ ವಿತರಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ರಾಜ್ಯ ಸರಕಾರದ ಉಚಿತ ಅಕ್ಕಿಯ ಬದಲು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅಕ್ಕಿಯನ್ನು ಸಮರ್ಪಕವಾಗಿ ಒದಗಿಸುವವರೆಗೆ ಫಲಾನುಭವಿಗಳ ಖಾತೆಗೆ (Bank Account) ಅಕ್ಕಿಯ ಬದಲು ಹಣವನ್ನೇ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ ಅಕ್ಕಿಯನ್ನೇ ಪಡೆದುಕೊಳ್ಳಲು ಬಯಸುವ ಫಲಾನುಭವಿಗಳು ಇನ್ನೂ ಸ್ವಲ್ಪ ದಿನ ಇದಕ್ಕಾಗಿ ಕಾಯಬೇಕು. ಅಲ್ಲಿಯವರೆಗೂ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ (Money Deposit) ಆಗಲಿದೆ.

ಕುಟುಂಬದ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿಗೆ 170 ರೂಪಾಯಿ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಅಕ್ಕಿಯನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ ಸಚಿವ ಕೆ.ಹೆಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.

advertisement

Leave A Reply

Your email address will not be published.