Karnataka Times
Trending Stories, Viral News, Gossips & Everything in Kannada

Car Battery: ಪ್ರತಿ ಸಿಂಗಲ್ ಚಾರ್ಜ್ ಗೆ 1000 ಕಿ.ಮೀ. ಪ್ರಯಾಣ, ಹೊಸ ಬ್ಯಾಟರಿ ಸಾಮರ್ಥ್ಯ ಸದ್ಯದಲ್ಲೇ ಬಿಡುಗಡೆ.

advertisement

ಇಂದು ವಾಹನಗಳ ಬೇಡಿಕೆ ಬಹಳ ಹೆಚ್ಚಾಗಿದೆ. ಅದರಲ್ಲೂ ಹೊಸ ಕಾರು ಮಾರುಕಟ್ಟೆ ಗೆ ಎಂಟ್ರಿ ನೀಡಿತು ಎಂದಾಗ ಅದನ್ನು ಖರೀದಿ ಮಾಡುವ ಕುತೂಹಲ ಹೆಚ್ಚು ಇದ್ದೆ ಇರುತ್ತದೆ. ಅದರಲ್ಲೂ ಭಾರತದಲ್ಲಿ ಕಾರು ಖರೀದಿ ಪ್ರತಿ ವರ್ಷ ಹೆಚ್ಚುತ್ತಿದ್ದು ವಾಹನಗಳ ಮಾರಾಟವು ದಾಖಲೆಯ ಮಟ್ಟದಲ್ಲಿದೆ. ಇನ್ನು ಹೊಸ ಕಾರು ಖರೀದಿ ಮಾಡುವಾಗ ಮೈಲೇಜ್‌, ಫೀಚರ್ಸ್‌ ಹೇಗಿದ್ದರೆ ಒಳ್ಳೆಯದು ಎಂಬುದನ್ನು ಮೊದಲು ಅರಿತು ಖರೀದಿ ಮಾಡುವುದು ಸೂಕ್ತ.

ಎಲೆಕ್ಟ್ರಿಕ್ ವಾಹನದ ಬೇಡಿಕೆ ಹೆಚ್ಚಳ

ಇಂದು ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದಾಗಿ ಜನರು ಇಲೆಕ್ಟ್ರಿಕ್ ವಾಹನದತ್ತ ಆಕರ್ಷಿತ ರಾಗಿದ್ದಾರೆ. ಇದೀಗ ಟೊಯೊಟಾ ಮೋಟಾರ್‌ ಎಲೆಕ್ಟ್ರಿಕ್‌ ಕಾರುಗಳ ವಿಭಾಗದಲ್ಲಿ ಹೆಚ್ಚು ಅಭಿವೃದ್ಧಿ ಸಾಧಿಸಲು ಮುಂದಾಗಿದೆ. ಹೌದು ಜಪಾನ್‌ ಮೂಲದ ಟೊಯೊಟಾ ಮೋಟಾರ್‌ ಲಿಥಿಯಂ ಇಯಾನ್‌ ಬ್ಯಾಟರಿ (Lithium-Ion Battery) ಗಳನ್ನು 2026ರಿಂದ ಬಿಡುಗಡೆಗೊಳಿಸಲಿದ್ದು ಈ ಬಗ್ಗೆ ಕಾರು ಪ್ರೀಯರಲ್ಲಿ ಆಸಕ್ತಿ ಹೆಚ್ಚಾಗಿದೆ.

advertisement

ಉತ್ತಮ ಬ್ಯಾಟರಿ ಸಾಮರ್ಥ್ಯ

ಇದು ಕೆಲವೇ ನಿಮಿಷಗಳ ಚಾರ್ಜ್‌ನಲ್ಲಿ 1000 ಕಿ.ಮೀ ಚಲಾಯಿಸಲು ಸಾಧ್ಯವಾಗುತ್ತದೆ. ಅಂತಹ ಭಾರಿ ಸಾಮರ್ಥ್ಯದ ಬ್ಯಾಟರಿಗಳನ್ನು ಕಂಪನಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಆದರೆ ಈ ಬ್ಯಾಟರಿಗಳು ದುಬಾರಿಯಾಗಿರುವುದು ಮಾತ್ರ ಪಕ್ಕಾ ಎನ್ನಲಾಗಿದೆ

ಈ ಬ್ಯಾಟರಿಯ ಬದಲಾವಣೆ ಏನು?

  • ಸಾಂಪ್ರದಾಯಿಕ ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಹೋಲಿಕೆ ಮಾಡಿದ್ರೆ ಈ ಬ್ಯಾಟರಿಯು ಹೆಚ್ಚು ಶಕ್ತಿ ಸಾಮರ್ಥ್ಯ ಹೊಂದಿದೆ
  • ಇದು ವೇಗವಾಗಿ ಚಾರ್ಜ್ ಆಗಲಿದ್ದು ಆಗಾಗ್ಗೆ ರೀಚಾರ್ಜ್ ಮಾಡುವ ಅಗತ್ಯವನ್ನು ಕಡಿಮೆ ಮಾಡಲಿದ್ದು ಆರಾಮ ಪ್ರಯಾಣದ ಅನುಭವ ನೀಡಲಿದೆ.
  • ಜೊತೆಗೆ ಇಂದು ಎಲೆಕ್ಟ್ರಿಕ್ ವಾಹನದಲ್ಲಿ ಬೆಂಕಿಯ ಅಪಾಯ ಹೆಚ್ಚಿದ್ದು ಈ ಬ್ಯಾಟರಿ ಸುರಕ್ಷಿತ ವಾಗಿದೆ.
  • ಈ ಹೊಸ ಬ್ಯಾಟರಿ ಇದ್ದ ಎಲೆಕ್ಟ್ರಿಕ್ ಕಾರು ಒಂದೇ ಚಾರ್ಜ್‌ನಲ್ಲಿ 1000 ಕಿಲೋಮೀಟರ್‌ಗಳವರೆಗೆ ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿದೆ.

advertisement

Leave A Reply

Your email address will not be published.