Karnataka Times
Trending Stories, Viral News, Gossips & Everything in Kannada

Gruhalakshmi-Annabhagya: ಇಂಥವರಿಗೆ ಇನ್ಮುಂದೆ ಗೃಹಲಕ್ಷ್ಮಿ ಅನ್ನಭಾಗ್ಯ ಹಣ ಬರಲ್ಲ, ಹೊಸ ರೂಲ್ಸ್ ಅನ್ವಯ!

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾಗಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ (Gruhalakshmi-Annabhagya) ಯೋಜನೆಯು ಒಂದಾಗಿ ಈ ಯೋಜನೆ ಸದುಪಯೋಗ ಹಲವಷ್ಟು ಮಂದಿ ಪಡೆದು ಕೊಳ್ಳುತ್ತಿದ್ದಾರೆ. ಈಗಾಗಲೇ ಯಾರೆಗೆಲ್ಲ ಈ ಗೃಹಲಕ್ಷ್ಮಿ ಹಣ (Gruha Lakshmi Money) ಬಂದಿಲ್ಲವೋ ಅಂತಹ ಮಹೀಳೆಯರ ದಾಖಲೆಗಳನ್ನು ಸರಿಪಡಿಸಲು ಗ್ರಾಮ ಪಂಚಾಯತಿ ಮಟ್ಡದಲ್ಲಿ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.ಇಂದು ಎಲ್ಲ ಸರಕಾರದ ಸೌಲಭ್ಯ ಕ್ಕೂ ರೇಷನ್ ಕಾರ್ಡ್ (Ration Card) ಬಹಳ ಮುಖ್ಯ ವಾಗಿದ್ದು ಇದೀಗ ಈ ಬಗ್ಗೆ ಹೊಸದಾದ ನಿಯಮವನ್ನು ಜಾರಿಗೆ ತಂದಿದೆ

ಏನು ಆ ಹೊಸ ನಿಯಮ:

ಈ ರೇಷನ್ ಕಾರ್ಡ್ ಅನ್ನು ಮುರು ವಿಧಗಳಲ್ಲಿ ವಿಂಗಡಣೆ ಮಾಡಿದ್ದು ಅದರಲ್ಲಿ ಅಂತ್ಯೊದಯ, ಬಿಪಿಎಲ್ (BPL), ಎಪಿಎಲ್ (APL) ಎಂದು ವಿಂಗಡಿಸಲಾಗಿದೆ. ಬಡತನ ರೇಖೆಗಿಂತ‌ಕೆಳಗಿರುವ ಜನರಿಗೆ ಅಂತ್ಯೋದಯ, ಬಿಪಿಎಲ್ ಕಾರ್ಡ್ (BPL Card) ನೀಡಲಾಗುತ್ತಿದೆ. ಇದೀಗ ರೇಷನ್ ಕಾರ್ಡ್ (Ration Card) ಹೊಂದಿದ್ದ ಯಾವುದೇ ಮನೆಯಲ್ಲಿ ವೈಟ್ ಬೋರ್ಡ್ ಕಾರ್ಡ್ ಇದ್ದರೆ ಅವರಿಗೆ ಬಿಪಿಎಲ್ ಕಾರ್ಡ್ ದೊರಕುವುದಿಲ್ಲ.ಅದೇ ರೀತಿ ಗೃಹಲಕ್ಷ್ಮಿ ಅನ್ನಭಾಗ್ಯ (Gruhalakshmi-Annabhagya) ಹಣ ದೊರಕುವುದಿಲ್ಲ. ಏಳು ಎಕರೆಗಿಂತ ಹೆಚ್ಚು ಆಸ್ತಿ ಇದ್ದರೂ ಈ ಗೃಹಲಕ್ಷ್ಮಿ ಅನ್ನಭಾಗ್ಯ ಹಣ ಬರುವುದಿಲ್ಲ. ವರ್ಷಕ್ಕೆ ಏಳು ಲಕ್ಷಕ್ಕಿಂತ ಹೆಚ್ಚು ದುಡಿಯುವವರು ಇದ್ದರೂ ಈ ಹಣ ಜಮೆಯಾಗುವುದಿಲ್ಲ.ಅದೇ ರೀತಿ ಆರು ತಿಂಗಳಿನಿಂದ ರೇಷನ್ ಪಡೆಯದ ಫಲಾನುಭವಿಗಳ ರೇಷನ್ ಕಾರ್ಡ್ ರದ್ದಾಗಲಿದ್ದು ಅಂತವರಿಗೂ ಜಮೆ ಯಾಗುವುದಿಲ್ಲ.

ಡಿಸೆಂಬರ್ ‌ತಿಂಗಳ ಹಣ ಯಾವಾಗ ಜಮೆ?

 

advertisement

 

ಈಗಾಗಲೇ ಕೆಲವು ಮಹೀಳೆಯರಿಗೆ ನವೆಂಬರ್‌ ತಿಂಗಳ ಹಣ ಮೊನ್ನೆಯಷ್ಟೆ ಜಮೆಯಾಗಿದ್ದು ಡಿಸೆಂಬರ್ ತಿಂಗಳ ಹಣ ಜಮೆ ಯಾಗಿಲ್ಲ. ಈ ಹಣವನ್ನು ಜನವರಿ 15 ರ ನಂತರ ಜಮೆ ಮಾಡಲಿದ್ದಾರೆ ಎನ್ನಲಾಗಿದೆ. ಅದೇ ರೀತಿ ಈ ಗೃಹಲಕ್ಷ್ಮಿ ಯ ಒಂದು ಕಂತಿನ ಹಣ ಪಡೆಯದೇ ಇದ್ದ ಮಹೀಳೆಯರು ತಮ್ಮ ದಾಖಲೆ ಸರಿಪಡಿಸಿಕೊಳ್ಳಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುವ ಶಿಬಿರದಲ್ಲಿ ಪಾಲ್ಗೊಂಡು ದಾಖಲೆ ಸರಿಪಡಿಸಬಹುದು.

ಒಟ್ಟಿಗೆ ಜಮೆ:

ಮೊದಲ ಕಂತಿನ ಹಣ ಇನ್ನೂ ಸಿಕ್ಕಿಲ್ಲದ ಫಲಾನುಭವಿಗಳಿಗೆ ಎಲ್ಲಾ ಕಂತಿನ ಹಣವನ್ನು ಸೇರಿಸಿ ಒಟ್ಟಿಗೆ ಖಾತೆಗೆ ಬರುತ್ತದೆ ಎಂದು ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ತಿಳಿಸಿದ್ದಾರೆ.ಅದೇ ರೀತಿ ಅನ್ನಭಾಗ್ಯ ದ ಹಣವು ಕೆಲವು ಫಲಾನುಭವಿಗಳ ಖಾತೆಗೆ ಜಮೆ ಯಾಗಿದ್ದು ರೇಷನ್ ಕಾರ್ಡ್ ಗೆ ಇನ್ನು ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಹಣ ಜಮೆಯಾಗುವುದಿಲ್ಲ.

advertisement

Leave A Reply

Your email address will not be published.