Karnataka Times
Trending Stories, Viral News, Gossips & Everything in Kannada

Property: ಆಸ್ತಿ ಖರೀದಿ ಹಾಗೂ ಸೆಲ್ ಮಾಡುವಾಗ ಇದಕ್ಕಿಂತ ಹೆಚ್ಚು ನಗದು ಹಣ ಪಡೆಯುವಂತಿಲ್ಲ, ಇಲ್ಲದಿದ್ರೆ ದಂಡ ಪಕ್ಕಾ!

advertisement

ಇಂದು ಪ್ರತಿ ಯೊಬ್ಬ ವ್ಯಕ್ತಿಯು ಹೂಡಿಕೆಗೆ ಹೆಚ್ಚು ಆದ್ಯತೆ ನೀಡುತ್ತಾನೆ. ಅದರಲ್ಲಿ ‌ಮುಖ್ಯವಾಗಿ ಆಸ್ತಿ (Property) ಹೂಡಿಕೆಯು ಒಂದು. ಯಾಕಂದ್ರೆ ಇಂದು ಎಲ್ಲ ಕಡೆ ಅಪಾರ್ಟ್ಮೆಂಟ್ ಗಳು ಹೆಚ್ಚಾಗಿರುವುದರಿಂದ ನಗರ ಪ್ರದೇಶಗಳಲ್ಲಿ ಈ ಆಸ್ತಿ, ಜಾಗಗಳಿಗೆ ಹೆಚ್ಚಿನ ಬೇಡಿಕೆ ಇದ್ದೆ ಇರುತ್ತದೆ.ಅದೇ ರೀತಿ ಆಸ್ತಿ ಖರೀದಿ (Property Purchase) ಮಾಡುದರಲ್ಲೂ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಆದರೆ ಈ ಆಸ್ತಿ ಖರೀದಿ ಗೂ ಕೆಲವೊಂದು ನಿಯಮಗಳು ಇವೆ. ನೀವು ಆಸ್ತಿಯನ್ನು ಖರೀದಿ ಮಾಡುದಾದರೆ ಅಥವಾ ಮಾರಾಟ ಮಾಡುದಾದ್ರೆ ನಗದು ವಹಿವಾಟಿನ ನಿಯಮ, ಮಿತಿಗಳನ್ನು ತಿಳಿದಿರಬೇಕು.

ಎಷ್ಟು ನಗದು ಮಿತಿ ಇದೆ:

 

 

ನೀವು ಆಸ್ತಿಯನ್ನು ಖರೀದಿ (Property Purchase) ಅಥವಾ ಸೇಲ್ (Property Sale) ಮಾಡುದಾದ್ರೆ 19,999 ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವಂತಿಲ್ಲ. ಬ್ಲಾಕ್ ಮನಿ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ನಿಮಯ ಜಾರಿಗೆ ತಂದಿದೆ. ಮನೆ ಅಥವಾ ಇತರ ಸ್ಥಿರ ಆಸ್ತಿಯನ್ನು ಮಾರಾಟ ಮಾಡಲು ರೂ 20,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಡೆದು ಕೊಂಡರೆ ದಂಡವನ್ನು ವಿಧಿಸಲಾಗುತ್ತದೆ.

advertisement

ಈ ನಿಯಮ ಯಾಕಾಗಿ?

ಮನೆ ಅಥವಾ ಆಸ್ತಿ ಖರೀದಿಯಲ್ಲಿ ಬಜೆಟ್‌ ಕೂಡ ಮುಖ್ಯ ಭಾಗವಾಗಿದ್ದು ನೀವು ಖರೀದಿ ಮಾಡುವ ಆಸ್ತಿ ಎಷ್ಟು ಬೆಲೆ ಎಷ್ಟು, ಅದಕ್ಕೆ ಎಷ್ಟು ಹಣ ಪಾವತಿಸಬೇಕು ಎಂಬ ಅಂಶ ಗಮನದಲ್ಲಿ ಇಟ್ಟು ಕೊಂಡರೆ ಉತ್ತಮ. ಆಸ್ತಿ ಖರೀದಿ ವೇಳೆ ಹೆಚ್ಚಿನ ಜನರು ನಗದು ರೂಪದಲ್ಲೇ ವ್ಯವಹಾರ ಮಾಡುತ್ತಾರೆ. ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ನೀಡುವುದು ಅಪಾಯ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಗದು ಮಿತಿಯನ್ನು ನಿಗದಿ ಪಡಿಸಲಾಗಿದೆ.

ಎಷ್ಟು ದಂಡ ವಿಧಿಸಬೇಕು?

ನಿಯಮ ಮೀರಿ ಅದಕ್ಕಿಂತ ಹೆಚ್ಚಿನ ನಗದು ಪಾವತಿ ಮಾಡಿದ್ರೆ ಸೆಕ್ಷನ್ 269 ಎಸ್ಎಸ್ ನಿಯಮ ಪ್ರಕಾರ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿ ಮಾಡಿದರೆ ಆ ವ್ಯಕ್ತಿಗೆ ಶೇ.100 ರಷ್ಟು ದಂಡ ವಿಧಿಸುವ ಸಾಧ್ಯತೆ ಹೆಚ್ಚು ಇದೆ.

advertisement

Leave A Reply

Your email address will not be published.