Karnataka Times
Trending Stories, Viral News, Gossips & Everything in Kannada

Lakshadweep Tour Packages: ಲಕ್ಷದ್ವೀಪಕ್ಕೆ ಭೇಟಿ ನೀಡಲು ಒಬ್ಬ ವ್ಯಕ್ತಿಗೆ ಎಷ್ಟು ವೆಚ್ಚವಾಗುತ್ತದೆ?

advertisement

ಇಂದಿನ ಬ್ಯುಸಿ ಶೆಡ್ಯುಲ್ ನಲ್ಲಿ ವಾರಂತ್ಯದಲ್ಲಿ ಏಲ್ಲಾದರೂ ಟ್ರಿಪ್ ಹೋಗಬೇಕು, ಮೈಂಡ್ ಪ್ರೆಶ್ ಮಾಡಿಕೊಳ್ಳಬೇಕು ಎಂದು ಹೆಚ್ಚಿನ ಜನರು ಅಂದುಕೊಳ್ಳುತ್ತಾರೆ. ಅದರಲ್ಲೂ ಪ್ರಯಾಣ ಅಂದಾಗ ಯಾವ ಪ್ಲೇಸ್ ಉತ್ತಮ ಆಯ್ಕೆ, ಸಮಯ ಕಳೆಯಲು ಯಾವ ಸ್ಥಳ ಉತ್ತಮ ಅನುಭವ ನೀಡುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಲಕ್ಷದ್ವೀಪಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಳದ ಕುರಿತಂತೆ ಮೆಚ್ಚುಗೆ ವ್ಯಕ್ತ ಪಡುಸಿದ್ದರು. ಅದರ ಜೊತೆ ಪ್ರಾಕೃತಿಕ ಸೌಂದರ್ಯದ ಫೋಟೋಗಳನ್ನು ಪೋಸ್ಟ್​ ಮಾಡಿದರು. ದ್ವೀಪಗಳ ಅದ್ಭುತ ಸೌಂದರ್ಯತೆಯ ಹೊಗಳಿಕೆಗೆ ಲಕ್ಷದ್ವೀಪ (Lakshadweep) ಕೆಲ ದಿನಗಳಿಂದ ಟ್ರೆಂಡ್​ನಲ್ಲಿದೆ. ಹೆಚ್ಚು ಜನರು ಇಲ್ಲಿಗೆ ಭೇಟಿ ನೀಡಬೇಕು ಅಲ್ಲಿನ ಸೌಂದರ್ಯ ವೀಕ್ಷಣೆ ಮಾಡಬೇಕು ಎಂಬ ಕನಸನ್ನು ಇಟ್ಟು ಕೊಂಡಿದ್ದಾರೆ.

ಈ ದ್ವೀಪ ಕಣ್ಮನ ಸೆಳೆಯುತ್ತಿದೆ:

 

 

ಲಕ್ಷದ್ವೀಪ ದ್ವೀಪ (Lakshadweep) ಗಳಲ್ಲಿ ನೀವು ನೋಡಲೇಬೇಕಾದ ಪ್ರವಾಸಿ ತಾಣ ಎಂದರೆ ಅದು ಮಿನಿಕಾಯ್‌ ದ್ವೀಪ. ನೋಡಲು ಬಹಳ ಆಕರ್ಷಕ ವಾಗಿದೆ. ಅದೇ ರೀತಿ ಅಗತ್ತಿ (Agatti), ಕಡಮತ್ (Kadamat), ಮಿನಿಕೋಯ್ ದ್ವೀಪ (Minicoy Island), ಕಲ್ಪೇನಿ ದ್ವೀಪ (Kalpeni Island) ಮತ್ತು ಕವರಟ್ಟಿ ದ್ವೀಪ (Kavaratti Island) ಗಳು ಪ್ರವಾಸಿಗರಿಗೆ ಹೆಚ್ಚು ಇಷ್ಟವಾಗುವ ಸ್ಥಳವಾಗಿದೆ. ಇನ್ನು ನೀವು ಲಕ್ಷದ್ವೀಪಕ್ಕೆ ವಿಮಾನದ ಮೂಲಕ ತೆರಳ ಬೇಕಾದರೆ ಕೊಚ್ಚಿಯ ಅಗತ್ತಿ ವಿಮಾನ ನಿಲ್ದಾಣಕ್ಕೆ ವಿಮಾನ ಟಿಕೆಟ್ ಬುಕ್ ಮಾಡಬೇಕು. ಅಗತ್ತಿ ದ್ವೀಪವನ್ನು ತಲುಪಿದ ನಂತರ, ಹೆಲಿಕಾಪ್ಟರ್ ಮೂಲಕ ಇತರ ದ್ವೀಪಗಳಿಗೆ ಸುಲಭವಾಗಿ ಪ್ರಯಾಣ ಮಾಡಬಹುದು.

 

 

advertisement

ಎಷ್ಟು ಟಿಕೆಟ್ ದರ:

ನೀವು ದೆಹಲಿಯಿಂದ ಲಕ್ಷದ್ವೀಪಕ್ಕೆ ವಿಮಾನ ಟಿಕೆಟ್ (Ticket) ಮಾಡುದಾದ್ರೆ 10 ಸಾವಿರದಿಂದ ಪ್ರಾರಂಭವಾಗುತ್ತದೆ. ಅದೇ ರೀತಿ ಮುಂಚಿತವಾಗಿಯೇ ನೀವು ಪ್ಲಾನ್ ಮಾಡಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದರೆ ಟಿಕೆಟ್ ದರವು ಕಡಿಮೆ ಯಾಗಲಿದೆ. ಇಲ್ಲಿನ ಒಟ್ಟು ಪ್ರಯಾಣ ರೂ 25,000 ರಿಂದ ರೂ 30,000 ವ್ಯಾಪ್ತಿಯಲ್ಲಿರಬಹುದು.

ವಿಭಿನ್ನ ಪ್ರಯಾಣ:

ಇತರ ದೇಶೀಯ ಪ್ರವಾಸಿ ಸ್ಥಳಗಳಿಗಿಂತ ಲಕ್ಷದ್ವೀಪ ಪ್ರಯಾಣ (Lakshadweep Travel) ವಿಭಿನ್ನ ವಾಗಿದ್ದು ಇಲ್ಲಿಗೆ ಪ್ರಯಾಣ ಮಾಡುದಾದರೆ ನೀವು ಕೆಲವು ದಾಖಲೆಗಳನ್ನು ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಹೌದು ಪಾಸ್​ಪೋರ್ಟ್​ ಸೈಜ್​​ ಫೋಟೋಗಳೊಂದಿಗೆ ಗುರುತಿನ ದಾಖಲೆಗಳನ್ನು ನಮೂದಿಸಬೇಕಾಗುತ್ತದೆ. ಕ್ಲಿಯರೆನ್ಸ್ ಪತ್ರ ಪಡೆದುಕೊಂಡ ಬಳಿಕ ನೀವು ಪ್ರಯಾಣ ಮಾಡಲು ಅವಕಾಶ ಇದೆ.

ಯಾವ ಸಮಯ ಉತ್ತಮ?

ಅಕ್ಟೋಬರ್ ನಿಂದ ಮಾರ್ಚ್ ನಡುವೆ ಲಕ್ಷದ್ವೀಪಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದ್ದು ಉತ್ತಮ ಹವಾಮಾನ ಇರುತ್ತದೆ. ನೀವು ಕಡಿಮೆ ಬಜೆಟ್‌ನಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಬೇಕು ಎಂದು ಬಯಸಿದರೆ ಶಿಪ್‌ ಮೂಲಕ ಪ್ರಯಾಣ ಬೆಳೆಸುವುದು ಉತ್ತಮ ಆಯ್ಕೆಯಾಗಿದೆ.

advertisement

Leave A Reply

Your email address will not be published.