Karnataka Times
Trending Stories, Viral News, Gossips & Everything in Kannada

Kalika Bhagya: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಸ ಯೋಜನೆ, ಸಿಗಲಿದೆ 60,000 ರೂಪಾಯಿ ವಿದ್ಯಾರ್ಥಿ ವೇತನ!

advertisement

ಇತ್ತೀಚಿನ ದಿನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೈಕ್ಷಣಿಕ ಕ್ಷೇತ್ರಕ್ಕೆ ಅಧಿಕ ಒತ್ತು ನೀಡುವುದನ್ನು ನಾವು ಕಾಣಬಹುದು. ಶೈಕ್ಷಣಿಕ ಪ್ರಗತಿಯಾದರೆ ದೇಶದ ಪ್ರಗತಿಯಾಗುತ್ತದೆ ಎಂಬ ನಂಬಿಕೆ ನೆಲೆಯಾಗಿರುವ ಕಾರಣ ಮಕ್ಕಳ ಸರ್ವತೋಮುಖ ಪ್ರಗತಿಯಾಗಲು ಮೊದಲ ಹಂತದಲ್ಲಿ ಶೈಕ್ಷಣಿಕ ಸಾಧನೆ ಆಗಬೇಕು ಎಂಬ ಯೋಚನೆ ಕೂಡ ಒಳ್ಳೆಯದ್ದೇ ಆಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಸಹಾಯಧನ, ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ಮಕ್ಕಳ ಕಲಿಕೆಗೆ ಈ ವಿಧಾನ ತುಂಬಾ ಸಹಕಾರಿ ಆಗಿದೆ.

ಹೊಸ ಯೋಜನೆ:

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಅಗತ್ಯಕ್ಕೆ ನೆರವಾಗಲೆಂದು ಸರಕಾರ ಕೆಲ ಅಗತ್ಯ ತೀರ್ಮಾನ ಕೈಗೊಂಡಿದೆ. ಅದರ ಪ್ರಕಾರ ಕಲಿಕಾ ಭಾಗ್ಯ (Kalika Bhagya) ಯೋಜನೆಯ ಅಡಿಯಲ್ಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಸೌಲಭ್ಯ ನೀಡಲು ಮುಂದಾಗಿದೆ. ಈ ಕಲಿಕಾ ಭಾಗ್ಯ ಯೋಜನೆ (Kalika Bhagya Scheme) ಯ ಮೂಲಕ ಮಕ್ಕಳಿಗೆ ಅಗತ್ಯ ಮತ್ತು ಕಷ್ಟದ ಸಮಯಕ್ಕೆ ಆರ್ಥಿಕ ನೆರವು ನೀಡಬೇಕು ಎಂಬ ಕಾರಣಕ್ಕೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುತ್ತದೆ.

ಯಾರಿಗೆ ಈ ಸೌಲಭ್ಯ:

 

 

advertisement

ಅನೇಕ ವರ್ಷದಿಂದ ಕಟ್ಟಡ ಕಾರ್ಮಿಕರ ವೃತ್ತಿಯಲ್ಲಿದ್ದವರ ಮಕ್ಕಳಿಗಾಗಿ ಈ ಸೌಲಭ್ಯ ಮಾಡಲಾಗಿದೆ‌. ಬಾಲ್ಯ ಶಿಕ್ಷಣದಿಂದ ಹಿಡಿದು ವೃತ್ತಿಪರ ಶಿಕ್ಷಣ ಪಡೆಯುವವರೆಗೂ ಸಹಾಯಧನ ಈ ಯೋಜನೆ ಅಡಿಯಲ್ಲಿ ನೀಡಲಾಗುವುದು. ಮಕ್ಕಳ ವಯಸ್ಸು ಕಲಿಯುವ ಶಿಕ್ಷಣದ ಆಧಾರದ ಮೇಲೆ ವಿದ್ಯಾರ್ಥಿ ವೇತನ ಕೂಡ ಬದಲಾಗುವುದನ್ನು ನಾವು ಕಾಣಬಹುದು. ಹಾಗಾಗಿ ಅರ್ಹರಾದವರು ಈ ವಿದ್ಯಾರ್ಥಿ ವೇತನ ಪಡೆಯುವ ಆಸಕ್ತಿ ಹೊಂದಿದ್ದಲ್ಲಿ ಕೆಲ ಅಗತ್ಯ ಕ್ರಮದ ಬಗ್ಗೆ ನೀವು ಓದಿ ತಿಳಿದುಕೊಳ್ಳಬೇಕು.

ಎಷ್ಟು ಮೊತ್ತ ದೊರೆಯಲಿದೆ:

ಕಲಿಕಾ ಅವಧಿಯ ಆಧಾರದ ಮೇಲೆ ವಿದ್ಯಾರ್ಥಿ ವೇತನದ ಪ್ರಮಾಣ ಸಹ ಬದಲಾಗಲಿದೆ. 3-5 ವರ್ಷದ ನರ್ಸರಿ ಮಕ್ಕಳು ಹಾಗೂ 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ 5,000 ರೂಪಾಯಿ ಸಿಗಲಿದೆ. 5-8ನೇ ತರಗತಿ ಮಕ್ಕಳಿಗೆ 8000, 9-10 ತರಗತಿ ಮಕ್ಕಳಿಗೆ 10,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಪಿಯುಸಿ ಕಲಿಯುವವರಿಗೆ 15,000 ರೂಪಾಯಿ ಸಿಗಲಿದೆ. ಡಿಪ್ಲೋಮಾ ಮಾಡಿದವರಿಗೆ 20,000, ಡಿ ಎಡ್25,000, ಬಿಎಡ್ 30,000, ಪದವಿ ವಿದ್ಯಾರ್ಥಿಗಳು 25,000, ಸ್ನಾತಕೋತ್ತರ ಪದವಿ ಮಾಡುತ್ತಿರುವವರಿಗೆ 60,000, ಐಟಿ, ಐಐಎಂ ಕೋರ್ಸ್ ಗಳಲ್ಲಿ ಪಾವತಿ ಶುಲ್ಕವನ್ನು ಬೋಧನ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನದ ಮೂಲಕ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಕಲಿಕಾ ಸ್ಕಾಲರ್ ಶಿಪ್ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಬಳಿಕ ಕಟ್ಟಡ ಕಾರ್ಮಿಕರ ಕಚೇರಿಗೆ ಸಂಬಂಧ ಪಟ್ಟ ಧಾಖಲಾತಿ ಪ್ರತಿ ಮತ್ತು ಫೋಟೋ ಜೊತೆಗೆ ಅರ್ಜಿ ನೀಡಿ ಅರ್ಜಿ ಸಲ್ಲಿಸಬಹುದು. ಕುಟುಂಬ ದೃಢೀಕರಣ ಪ್ರಮಾಣ ಪತ್ರ ನೀಡಿದಾಗ ಅದರ ಆಧಾರದ ಮೇಲೆ ಅರ್ಹರು ಅಥವಾ ಇಲ್ಲ ಎಂಬುದು ತಿಳಿದು ಬರಲಿದೆ.

advertisement

Leave A Reply

Your email address will not be published.