Karnataka Times
Trending Stories, Viral News, Gossips & Everything in Kannada

Property: ಆಸ್ತಿ ಖರೀದಿ ಮಾಡುವವರಿಗೆ ಎಚ್ಚರಿಕೆ, ಸರ್ಕಾರದ ನಿಯಮಗಳಲ್ಲಿ ಬದಲಾವಣೆ.

advertisement

ಇಂದು ಪ್ರತಿಯೊಬ್ಬರಿಗೂ ಆಸ್ತಿ (Property) ಎನ್ನುವುದು ಬಹು ಹೂಡಿಕೆಯ ವಸ್ತುವಾಗಿದೆ. ಇಂದು ಆಸ್ತಿ ಖರೀದಿಗೂ (Property Purchase) ಹೆಚ್ಚಿನ ಜನರು ಬಹು ಪ್ರಾಮುಖ್ಯತೆ ಯನ್ನು ನೀಡುತ್ತಾರೆ. ನೀವು ಯಾವುದೇ ನಿವೇಶನ ಅಥವಾ ಮನೆ ಖರೀದಿಗೆ ಮುನ್ನ ಯಾವುದೇ ಶುಲ್ಕಗಳ ಬಾಕಿ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಆಸ್ತಿ ಖರೀದಿ ಮಾಡುವುದು ಮುಖ್ಯವಾಗುತ್ತದೆ.

ಲಕ್ಷಾಂತರ ಮೌಲ್ಯದ ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ‌ ಬಹಳಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಸ್ತಿಯನ್ನು ಖರೀದಿ ಮಾಡುವಾಗ ಅನೇಕ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಖರೀದಿ ಮಾಡುವುದು ಮುಖ್ಯವಾಗುತ್ತದೆ. ಇದೀಗ ಆಸ್ತಿ ಖರೀದಿ ದಾರರಿಗೆ ಬಿಗ್ ಶಾಕ್ ನೀಡಿದ್ದು, ರಾಜ್ಯದಲ್ಲಿ ಮುದ್ರಾಂಕ ಶುಲ್ಕ ಜಾಸ್ತಿ ಮಾಡಲು ಸರ್ಕಾರ ಈಗಾಗಲೇ‌ ಚಿಂತನೆ ನಡೆಸಿದ್ದು ಇದು ಆಸ್ತಿ ಖರೀದಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಲಿದೆ.

ಯಾಕಾಗಿ ಹೆಚ್ಚಳ:

ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ (Minister Krishna Byre Gowda), ಮಾತನಾಡಿ ನೋಂದಣಿ ಇಲಾಖೆಯಲ್ಲಿ ಸ್ಟಾಂಪ್ ನಿಂದ ಬರುವ ಆದಾಯ ಕಡಿಮ ಯಾಗಿದ್ದು, ಅದರಲ್ಲಿ ಸೋರಿಕೆ ತಡೆಗಟ್ಟುವ ಕ್ರಮದ ಜೊತೆಗೆ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಪವರ್ ಆಫ್ ಅಟಾರ್ನಿ (Power of Attorney), ಡೀಡ್ಸ್ ಅಂಡ್‌ ಅಫಿಡವಿಟ್‌ (Deeds and Affidavit) ಮತ್ತಿತರ ಕಾನೂನು ದಾಖಲೆಗಳಿಗೆ ಮುದ್ರಾಂಕ ಶುಲ್ಕ (Stamp Duty) ಹೆಚ್ಚು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ರು. ಕರ್ನಾಟಕಕ್ಕೆ ಹೋಲಿಕೆ ಮಾಡಿದ್ರೆ ಇತರ ರಾಜ್ಯಗಳಲ್ಲಿ ಮುದ್ರಾಂಕ ಶುಲ್ಕದ ಪ್ರಮಾಣ ಜಾಸ್ತಿಯಿದೆ. ಅದೇ ರೀತಿಯಲ್ಲಿ‌ ರಾಜ್ಯದಲ್ಲೂ ಮುದ್ರಾಂಕ ಶುಲ್ಕದಲ್ಲಿ ಹೆಚ್ಚಿಸಬೇಕೆಂದು ನೋಂದಣಿ ( Registration Fees) ಮತ್ತು ಮುದ್ರಾಂಕ ಇಲಾಖೆ ಪ್ರಸ್ತಾವ ಸಲ್ಲಿಸಲಾಗಿದೆ.

advertisement

ಎಷ್ಟಾಗಲಿದೆ ಶುಲ್ಕ?

 

 

ದತ್ತು ಪತ್ರಗಳ ಮುದ್ರಾಂಕ ಶುಲ್ಕ (Stamp Duty) 500 ರಿಂದ 1,000 ರೂ.ಗೆ ಆಗಲಿದ್ದು ಸದ್ಯ 20 ರೂಪಾಯಿಗಳ ಮುದ್ರಾಂಕ ಶುಲ್ಕ, ಅಫಿಡವಿಟ್ಗಳಿಗ 100 ರೂಪಾಯಿ ವರೆಗೆ ಮುದ್ರಾಂಕ ಶುಲ್ಕ ಆಗಲಿದೆ.ಪವರ್ ಆಫ್ ಅಟಾರ್ನಿ ಮೇಲಿನ ಮುದ್ರಾಂಕ ಶುಲ್ಕವನ್ನು 100 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗುತ್ತದೆ, ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ (Stamp Duty) ಕೂಡ 100 ರಿಂದ 500 ರೂ.ಗೆ ಹೆಚ್ಚಾಗಲಿದೆ, ಬಾಡಿಗೆ ಮತ್ತು ಭೋಗ್ಯ ಒಪ್ಪಂದ, ವಿಚ್ಛೇದನ (Divorce), ಶೇರು ವಹಿವಾಟುಗಳ ವಿಲೇವಾರಿ ವರ್ಗಾವಣೆ, ಇತ್ಯಾದಿಗಳಿಗೆ ಸಂಬಂಧಿಸಿದ‌ ಪತ್ರಗಳ ನೋಂದಣಿ ಶುಲ್ಕ 500 ರೂ. ಗಳೀಂದ 2000 ರೂ. ಗಳವರೆಗೆ ಹೆಚ್ಚಳವಾಗಲಿದೆ.

ಎಷ್ಟು ದಾಖಲೆಗಳ ಮೇಲೆ ಹೆಚ್ಚಳ:

ಆಸ್ತಿ ನೋಂದಣಿ (Property Registration) ಯಲ್ಲಿ ಕಪ್ಪು ಹಣ ವಹಿವಾಟಿಗೂ ಈಗ ಕಾರಣವಾಗಿದ್ದು ಆಸ್ತಿಗಳ ಮಾರ್ಗಸೂಚಿಯನ್ನು ಇದಕ್ಕಾಗಿ ಪರಿಷ್ಕರಣೆ ಮಾಡಲಾಗಿದೆ. ಇದೀಗ ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಮೊತ್ತ ವನ್ನು ಶೇ.20ರಿಂದ ಶೇ.25 ಹೆಚ್ಚಿಸಲಾಗುತ್ತದೆ. ತಿದ್ದುಪಡಿ ಮಸೂದೆ ಪ್ರಕಾರ ಸಾಲದ ಕರಾರು ಪತ್ರ, ಅಡಮಾನ, ದತ್ತು, ಹಸ್ತಾಂತರ ಪ್ರಮಾಣಪತ್ರ, ಹೀಗೆ ಸುಮಾರು 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಕನಿಷ್ಠ ಎರಡರಿಂದ ನಾಲ್ಕಾರುಪಟ್ಟು ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ.

advertisement

Leave A Reply

Your email address will not be published.