Karnataka Times
Trending Stories, Viral News, Gossips & Everything in Kannada

Drought Relief Money: ಈ ಕೆಲಸ ಕೂಡಲೇ ಮಾಡದಿದ್ದರೆ ನಿಮ್ಮ ಖಾತೆಗೆ ಬರ ಪರಿಹಾರದ ಹಣ ಜಮೆಯಾಗಲ್ಲ!

advertisement

ಈಗಾಗಲೇ ಈ ಬಾರಿ ಮಳೆ ಇಲ್ಲದೇ ರೈತರು ಬಹಳಷ್ಟು ತೊಂದರೆಗೆ ಸಿಲುಕಿದ್ದಾರೆ. ಕೃಷಿಗೆ ಸರಿ ಪ್ರಮಾಣದ ನೀರು ಸಿಗದೇ ಬೆಳೆ ಹಾನಿ ಉಂಟಾಗಿದೆ‌. ಈ ಬಗ್ಗೆ ರೈತರು ಸರಕಾರದ ಜೊತೆ ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಇದಕ್ಕೆ ಬರ ಪರಿಹಾರ ಮೊತ್ತ (Drought Relief Money) ವನ್ನು ಸಹ ಸರಕಾರ ನಿಗದಿ ಮಾಡಿದ್ದು ಯಾವೆಲ್ಲ ಪ್ರದೇಶಕ್ಕೆ ಹಣ ಬಿಡುಗಡೆಯಾಗಿದೆ ಎಂಬ ಲಿಸ್ಟ್ ಸಹ ಬಿಡುಗಡೆಯಾಗಿದೆ, ಸದ್ಯ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು ರೈತರು ತಮ್ಮ ಬರ ಪರಿಹಾರದ ಹಣ ಪಡೆಯಬೇಕಾದರೆ ಈ ಕೆಲಸ ಮೊದಲು ಮಾಡಬೇಕಿದೆ.

ಯಾವಾಗ ಹಣ ಜಮೆ:

 

 

ರಾಜ್ಯ ಸರ್ಕಾರವು ಈ ವಾರವೇ ಬರ ಪರಿಹಾರದ ಹಣ (Drought Relief Money) ವನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿದ್ದು ಮೊದಲಿಗೆ ಎರಡು ಸಾವಿರ ರೂಪಾಯಿ ಖಾತೆಗೆ ಜಮಾ ಮಾಡಲಾಗುತ್ತದೆ. ನಿಗದಿ ಯಾದ ರೈತರಿಗೆ ಮೊದಲ ಕಂತಾಗಿ 2000 ರೂ. ಪರಿಹಾರ ನೀಡಲಾಗುತ್ತಿದೆ. ಇದೇ ವಾರದಲ್ಲೇ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ‌.

ಈ ಕೆಲಸ ಮೊದಲು ಮಾಡಿ:

advertisement

ರೈತರು ಫ್ರುಟ್ಸ್ ತಂತ್ರಾಂಶ (Farmers Fruits Software) ದ ಮೂಲಕ‌ ತಮ್ಮ ಜಮೀನಿನ ವಿವರ, ದಾಖಲೆ ಇತ್ಯಾದಿ ನೊಂದಾಯಿಸಿ, ರೈತರು ಗುರುತಿನ ಚೀಟಿ ಸಂಖ್ಯೆ (Identity Card No) ಪಡೆದುಕೊಳ್ಳುವುದು ಅಗತ್ಯ. ಇದರಿಂದಾಗಿ ಕೃಷಿ ಮತ್ತು ಕೃಷಿ ಯೇತರ ಚಟುವಟಿಕೆಗಳಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ,ಫ್ರುಟ್ಸ್ ನಲ್ಲಿ ನೊಂದಣಿ ಮಾಡಿಕೊಳ್ಳದೇ ಇರುವ ರೈತರು ಕೂಡಲೆ ಫ್ರುಟ್ಸ್‍ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು, ಅದೇ ರೀತಿ ರೈತರು ಫ್ರುಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಸಿ, FID Number ಹೊಂದಿರುವುದು ಕಡ್ಡಾಯವಾಗಿದೆ, ಹೀಗಾದಲ್ಲಿ ಮಾತ್ರ ನಿಮಗೆ ಹಣ ದೊರೆಯುತ್ತದೆ.

ಲಿಂಕ್ ಮಾಡಿಸಿ:

ರೈತರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಮಾಹಿತಿ ವಿವರಗಳನ್ನು ತಕ್ಷಣ ಲಿಂಕ್ ಮಾಡಿಸಲೇ ಬೇಕು. ಇದಕ್ಕಾಗಿ ಆಯಾ ಗ್ರಾಮ ಆಡಳಿತಾಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಭೇಟಿ ಕೊಟ್ಟು ಸರಿಪಡಿಸಬಹುದಾಗಿದೆ.ಇದಕ್ಕಾಗಿ ರೈತರು ತಪ್ಪದೇ ತಮ್ಮ ಪಹಣಿ ಆಧಾರ್‌ ಕಾರ್ಡ್‌ (Aadhaar Card) ಜೋಡಣೆ ಮಾಡುವುದು ಕಡ್ಡಾಯ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ:

ಈಗಾಗಲೇ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು ಸೂಕ್ತ ರೀತಿಯ ವ್ಯವಸ್ಥೆ ಯನ್ನು ಸಹ ಮಾಡಲಾಗಿದೆ. ಕುಡಿಯುವ ನೀರಿಗಾಗಿ ಬೋರ್‍ವೆಲ್‍ಗಳು ಹಾಗೂ ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆಯಲಾಗಿದ್ದು ರೈತರಿಗೆ ಅನುಕೂಲ ಮಾಡಿ ಕೊಡಲಾಗಿದೆ. ಅಷ್ಟೇ ಅಲ್ಲದೆ ಬರ ಪರಿಸ್ಥಿತಿ ಇದ್ದ ಕಾರಣ ಸಾಲ ಕಟ್ಟಲು ರೈತರ ಮೇಲೆ ಒತ್ತಡ ಹೇರದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ನಿರ್ದೇಶನ‌ ನೀಡಲು ಈಗಾಗಲೇ ಮುಖ್ಯ ಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

advertisement

Leave A Reply

Your email address will not be published.