Karnataka Times
Trending Stories, Viral News, Gossips & Everything in Kannada

LPG Cylinder: ಇನ್ನು ಮುಂದೆ ವಾಟ್ಸಾಪ್ನಲ್ಲಿ ಬುಕ್ ಮಾಡಿ ಗ್ಯಾಸ್ ಸಿಲಿಂಡರ್; 15 ನಿಮಿಷಗಳಲ್ಲಿ ನಿಮ್ಮ ಮನೆಗೆ ಬರುತ್ತೆ!

advertisement

ಗ್ಯಾಸ್ ಸಿಲೆಂಡರ್ ಒಮ್ಮೆ ಖಾಲಿಯಾಯಿತು ಅಂದ್ರೆ ಸಾಕಷ್ಟು ಜನ ಮತ್ತೊಂದು ಗ್ಯಾಸ್ ಸಿಲೆಂಡರ್ (LPG Cylinder) ಮನೆಗೆ ಬರುವವರೆಗೂ ತಲೆಬಿಸಿ ಮಾಡಿಕೊಳ್ಳುತ್ತಾರೆ. ಸಿಲೆಂಡರ್ ಬುಕ್ಕಿಂಗ್ (LPG Cylinder Booking) ಪ್ರಕ್ರಿಯೆ ಈಗ ಮೊದಲಿನಷ್ಟು ಕಷ್ಟವಲ್ಲ. ಒಂದು ಫೋನ್ ಕರೆ (Phone Call) ಯಲ್ಲಿ ಗ್ಯಾಸ್ ಬುಕಿಂಗ್ ಮಾಡಿಕೊಳ್ಳಬಹುದು ಆದರೆ ಇದು ಕೂಡ ಕೆಲವರಿಗೆ ಸಮಸ್ಯೆ ಆಗುತ್ತದೆ ಇದಕ್ಕೆ ಮುಖ್ಯವಾದ ಕಾರಣ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ಅವರು ಹೇಳಿರುವ ಸಂಖ್ಯೆಯನ್ನು ಒತ್ತಬೇಕು. ನಿಮ್ಮದೇ ಆಗಿರುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಯೋಚನೆಯೇ ಬೇಡ, ಈಗ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಇನ್ನಷ್ಟು ಸುಲಭವಾಗಿದೆ. ಬಾಳೆಹಣ್ಣಿನ ಸಿಪ್ಪೆ ಸುಲಿದು ತಿಂದಷ್ಟೇ ಸುಲಭದಲ್ಲಿ ನೀವು ಗ್ಯಾಸ್ ಸಿಲಿಂಡರ್ (Gas Cylinder) ಬುಕ್ ಮಾಡಿಕೊಳ್ಳಬಹುದು. ಅಷ್ಟೇ ಬೇಗ ನಿಮ್ಮ ಮನೆಗೆ ಗ್ಯಾಸ ಸಿಲಿಂಡರ್ ಕೂಡ ಬರುತ್ತದೆ.

WhatsApp ಮೂಲಕವೇ LPG Cylinder ಬುಕ್ ಮಾಡಿಕೊಳ್ಳಿ!

ಹೌದು ಈಗ ಕೇವಲ 15 ನಿಮಿಷಗಳಲ್ಲಿ ನಿಮ್ಮ ಮನೆಗೆ ಗ್ಯಾಸ್ ಸಿಲೆಂಡರ್ ಬರುವಂತೆ ಮಾಡಿಕೊಳ್ಳಬಹುದು. ಗ್ಯಾಸ್ ಸಿಲೆಂಡರ್ ಮುಗಿದು ಹೋಗುವುದಕ್ಕೂ ಮೊದಲು ಪೂರ್ವ ಬುಕಿಂಗ್ (Booking) ಮಾಡಿಕೊಳ್ಳಲು ಮರೆತು ಹೋದರು ಕೂಡ ಈಗ ಯೋಚಿಸುವ ಅಗತ್ಯವಿಲ್ಲ. ಒಂದು ನಿಮಿಷಗಳಲ್ಲಿ ಸಿಲಿಂಡರ್ ಬುಕ್ ಮಾಡಿ 15 ನಿಮಿಷಗಳಲ್ಲಿ ಮನೆಗೆ ಬರುವಂತೆ ಮಾಡಿಕೊಳ್ಳಬಹುದು. ನೀವು ಫುಡ್ ಆರ್ಡರ್ ಮಾಡಿ ತರಿಸುವುದಕ್ಕಿಂತಲೂ ಬೇಗ ಸಿಲಿಂಡರ್ ಗ್ಯಾಸ್ ಮನೆಗೆ ತಲುಪುತ್ತೆ ನೋಡಿ.

 

 

ನಾವು ಕೈಯಲ್ಲಿ ಮೊಬೈಲ್ (Mobile) ಹಿಡಿದು ವಾಟ್ಸಪ್ (WhatsApp) ಒಂದು ಇದ್ದರೆ ಸಾಕು, ಇದೀಗ ಆನ್ಲೈನ್ ವ್ಯವಹಾರದಿಂದ ಹಿಡಿದು ಮೆಟ್ರೋ ಟ್ರೈನ್ ಟಿಕೆಟ್ ಬುಕಿಂಗ್ (Metro Train Ticket Booking) ಕ್ಯಾಬ್ ಬುಕಿಂಗ್ (Cab Booking) ಮೊದಲಾದವುಗಳನ್ನು ಕೂಡ ವಾಟ್ಸಪ್ ಮೂಲಕವೆ ಮಾಡಿಕೊಳ್ಳಬಹುದು. ಇದೀಗ ವಾಟ್ಸಪ್ (WhatsApp) ಮೂಲಕ ಗ್ಯಾಸ್ ಸಿಲೆಂಡರ್ (LPG Cylinder) ಕೂಡ ಬುಕ್ ಮಾಡಿಕೊಳ್ಳಬಹುದು. ಎನ್ನುವುದು ನಿಮಗೆ ಗೊತ್ತಾ?

ಗ್ಯಾಸ್ ಸಿಲೆಂಡರ್ ಅನ್ನು WhatApp ಮೂಲಕ ಬುಕ್ ಮಾಡಿಕೊಳ್ಳುವುದು ಹೇಗೆ?

 

advertisement

 

ಗ್ಯಾಸ್ ಸಿಲೆಂಡರ್ ಬುಕ್ ಮಾಡಿಕೊಳ್ಳಲು ಮೊದಲು ನೀವು ನಿಮ್ಮ ಫೋನ್ ನಲ್ಲಿ ಯಾವ ವಿತರಕರ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳುತ್ತಿರೋ ಅವರ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು.

ಹೀಗೆ ಸೇವ್ ಮಾಡಿಕೊಂಡರೆ ನಂತರ ನಿಮಗೆ ಬೇಕಾದಾಗ ಗ್ಯಾಸ್ ಸಿಲೆಂಡರ್ ಅನ್ನು ಕ್ಷಣಮಾತ್ರದಲ್ಲಿ ಬುಕ್ ಮಾಡಿಕೊಳ್ಳಬಹುದು. ಬೇರೆ ಬೇರೆ ಗ್ಯಾಸ್ ವಿತರಕರ ಕಂಪನಿಗೆ ಬೇರೆ ಬೇರೆ ಮೊಬೈಲ್ ಸಂಖ್ಯೆ ಇರುತ್ತದೆ ನಿಮ್ಮ ಸ್ಮಾರ್ಟ್ ಫೋನ್ (Smartphone) ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬೇಕು.

ನಿಮ್ಮ ವಿತರಕರ ಫೋನ್ ಸಂಖ್ಯೆ (Mobile Number) ಯನ್ನು ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿದ್ದರೆ ನಂತರ ವಾಟ್ಸಾಪ್ನಲ್ಲಿ ಅದೇ ಸಂಖ್ಯೆಗೆ ಹಾಯ್ ಎಂದು ಸಂದೇಶವನ್ನು ಕಳುಹಿಸಿ. ನಿಮಗೆ ಗ್ಯಾಸ್ ಸಿಲೆಂಡರ್ ಬುಕ್ ಮಾಡಿಕೊಳ್ಳಲು ಆಯ್ಕೆಗಳನ್ನು ನೀಡುತ್ತಾರೆ.

ನಿಮಗೆ ಬೇಕಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ನಂತರ ಗ್ಯಾಸ್ ಬುಕಿಂಗ್ ಮಾಡಿಕೊಳ್ಳಬಹುದು. ಇಷ್ಟು ಮಾಡಿದರೆ ಸಾಕು ಕೇವಲ 15 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಗ್ಯಾಸ್ ಸಿಲೆಂಡರ್ ತಲುಪುತ್ತದೆ. ಅತಿ ಅತಿ ಕಡಿಮೆ ಸಮಯದಲ್ಲಿ ಅತಿ ವೇಗವಾಗಿ ಎಲ್ ಪಿ ಜಿ ಸಿಲಿಂಡರ್ (LPG Cylinder) ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು.

ಮಾಡಿಕೊಳ್ಳಲು ವಿತರಕರ ಮೊಬೈಲ್ ಸಂಖ್ಯೆ ಹೀಗಿದೆ:

  • Indian Gas – 7588888824
  • HP Gas -9222201122
  • Bharat Gas – 1800224344

advertisement

Leave A Reply

Your email address will not be published.